Ind vS Afg:ಇಂಡಿಯಾ VS ಅಫ್ಘಾನಿಸ್ತಾನ ಬ್ಯಾಟಲ್, ಗೆಲುವಿನ ಲಯಕ್ಕೆ ಮರಳಬೇಕಿದೆ ಭಾರತ
ಎಲ್ಲಾ ಲೆಕ್ಕಾಚಾರದಲ್ಲೇ ಆಟ ಆಡಬೇಕು. ಲೆಕ್ಕಾಚಾರದಲ್ಲಿ ಎಡವಿದರೆ ಕಷ್ಟ. ಟಿ20 ವಿಶ್ವಕಪ್ (T20 World Cup) ದೃಷ್ಟಿಯಲ್ಲಿ ಈ ಪಂದ್ಯ ಮಹತ್ವದ್ದೆನಿಸಿದೆ. ಭಾರತ (Ind) ಮತ್ತು ಅಫ್ಘಾನಿಸ್ತಾನ (Afg) ನಡುವಿನ ಪಂದ್ಯ ಭಾರೀ ಕುತೂಹಲ ಕೆರಳಿಸಿದೆ.
ಟೀಮ್ ಇಂಡಿಯಾ (India) ಸಿಕ್ಕಾಪಟ್ಟೆ ಬಲಿಷ್ಠ. ಆದರೆ ಕಳೆದೆರಡು ಪಂದ್ಯಗಳಲ್ಲಿ ಮುಗ್ಗರಿಸಿದೆ. ಆದರೂ ಉತ್ತಮ ಬ್ಯಾಟಿಂಗ್ ಬಲವನ್ನು ಹೊಂದಿದೆ. ರೋಹಿತ್ ಶರ್ಮಾ ಫಾರ್ಮ್‌ಗೆ ಮರಳಿದ್ದಾರೆ. ಕೆ.ಎಲ್ ರಾಹುಲ್‌ಗೆ ಒಂದು ದೊಡ್ಡ ಇನ್ನಿಂಗ್ಸ್ ಬೇಕಿದೆ. ವಿರಾಟ್ ಕೊಹ್ಲಿ ಹಳೆಯ ಟಚ್ ಕಂಡುಕೊಂಡಿದ್ದಾರೆ. ಸೂರ್ಯ ಕುಮಾರ್ ಜಾಗದ ಬಗ್ಗೆ ಡೌಟಿಲ್ಲ. ಹಾರ್ದಿಕ್ ಪಾಂಡ್ಯಾ ಆಡುವುದು ಅನಿವಾರ್ಯ. ರಿಷಬ್ ಪಂತ್ ಮತ್ತು ದಿನೇಶ್ ಕಾರ್ತಿಕ್ ಆಯ್ಕೆ ಬಗ್ಗೆ ಗೊಂದಲವಿದೆ. ಅಕ್ಸರ್ ಪಟೇಲ್, ಅಶ್ವಿ ನ್, ಬಿಷ್ಣೋಯಿ, ಅರ್ಶದೀಪ್ ಮತ್ತು ಭುವನೇಶ್ವರ್ ಬೌಲಿಂಗ್ ಬಲವನ್ನು ಗಟ್ಟಿ ಮಾಡಲಿದ್ದಾರೆ.

ಅಫ್ಘಾನ್ (Afghanistan) ತಂಡವೂ ಉತ್ತಮ ಆಟಗಾರರನ್ನು ಹೊಂದಿದೆ. ಹಝರತುಲ್ಲಾ ಝಝೈ ಮತ್ತು ರೆಹಮತುಲ್ಲಾ ಗುರ್ಬಾಜ್ ಸ್ಪೋಟಕ ಆಟ ಆಡುತ್ತಿದ್ದಾರೆ. ನಜಿಬುಲ್ಲಾ ಜದ್ರಾನ್, ಇಬ್ರಾಹಿಂ ಜದ್ರಾನ್, ಸಮಿಉಲ್ಲಾ ಶೈನ್ವಾರಿ ಬ್ಯಾಟಿಂಗ್ ಬಲಕ್ಕೆ ಮತ್ತಷ್ಟು ಬಲ ಕೊಟ್ಟಿದ್ದಾರೆ. ಆಲ್‌ರೌಂಡರ್‌ಗಳಾದ ಮೊಹಮ್ಮದ್ ನಬಿ, ಕರೀಮ್ ಜನ್ನರ್ ಮತ್ತು ರಶೀದ್ ಎಲ್ಲದಕ್ಕೂ ಸೈ. ನವೀನ್ ಉಲ್ ಹಕ್, ಮುಜೀಬ್ ಮತ್ತು ಫರೂಕಿ ಬೌಲಿಂಗ್ ಬಲಿಷ್ಠ ಶಕ್ತಿಗಳು.
ದುಬೈನಲ್ಲಿ ಟಾಸ್ ಗೆದ್ದವರೇ ಬಾಸ್. ಯಾಕಂದರೆ ಎರಡನೇ ಅವಧಿಯಲ್ಲಿ ಬೀಳುವ ಮಂಜು ಪಂದ್ಯವನ್ನು ಚೇಸಿಂಗ್ ಮಾಡುವವರ ಪಾಲು ಮಾಡುತ್ತದೆ. ಹೀಗಾಗಿ ಇಂಡೋ-ಅಫ್ಘಾನ್ ಫೈಟ್ ಭಾರೀ ಕುತೂಹಲ ಕೆರಳಸಿದೆ. (Ind vS Afg)