ಆಕ್ರಮಣಕಾರಿ ಬೌಲಿಂಗ್ ಮೂಲಕ ಪ್ರವಾಸಿ ಶ್ರೀಲಂಕಾ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದ ಟೀಂ ಇಂಡಿಯಾದ ಪ್ರಮುಖ ವೇಗದ ಬೌಲರ್ ಜಸ್ಪ್ರೀತ್ ಬುಮ್ರ, ಮೊದಲ ಬಾರಿಗೆ ಭಾರತದ ನೆಲದಲ್ಲಿ 5 ವಿಕೆಟ್ಗಳ ಗೊಂಚಲು ಪಡೆದರು.
ಬೆಂಗಳೂರಿನಲ್ಲಿ ನಡೆಯುತ್ತಿರುವ ಪಿಂಕ್ ಟೆಸ್ಟ್ ಪಂದ್ಯದ 2ನೇ ದಿನದಾಟದ ಆರಂಭದಿಂದಲೂ ಅಬ್ಬರಿಸಿದ ಬುಮ್ರಾ, ಕೇವಲ 24 ರನ್ ನೀಡಿ 5 ವಿಕೆಟ್ಗಳನ್ನು ಪಡೆದರು. ಆ ಮೂಲಕ 29ನೇ ಟೆಸ್ಟ್ಗಳಲ್ಲಿ 8ನೇ ಬಾರಿಗೆ 5 ವಿಕೆಟ್ಗಳನ್ನ ಪಡೆದು ಮಿಂಚಿದರು. ಜಸ್ಪ್ರೀತ್ ಬುಮ್ರಾ ತಮ್ಮ ಈವರೆಗಿನ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನದಲ್ಲಿ ಇಂಗ್ಲೆಂಡ್, ಸೌತ್ ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ ನೆಲದಲ್ಲಿ ತಲಾ 2 ಬಾರಿ ಹಾಗೂ ಆಸ್ಟ್ರೇಲಿಯಾದಲ್ಲಿ ಒಂದು ಬಾರಿ 5 ವಿಕೆಟ್ಗಳನ್ನ ಪಡೆದಿದ್ದರು. ಇದೀಗ ಮೊದಲ ಬಾರಿಗೆ ಭಾರತದ ನೆಲದಲ್ಲಿ ಇನ್ನಿಂಗ್ಸ್ ಒಂದರಲ್ಲಿ 5 ವಿಕೆಟ್ಗಳನ್ನು ಪಡೆದಿದರು.
ಅಲ್ಲದೇ ಶ್ರೀಲಂಕಾ ವಿರುದ್ಧ ಕಡಿಮೆ ರನ್ ನೀಡಿದ 5 ವಿಕೆಟ್ ಪಡೆದ ಬೌಲಿಂಗ್ ಪ್ರದರ್ಶನ ನೀಡಿದ ಭಾರತೀಯ ವೇಗಿಗಳ ಸಾಲಿನಲ್ಲಿ ಹೊಸ ದಾಖಲೆ ಬರೆದರು. ಲಂಕಾ ವಿರುದ್ಧ ಭಾರತದ ವೇಗಿಗಳ ಅತ್ಯತ್ತಮ ಬೌಲಿಂಗ್ ಅಂಕಿ ಅಂಶಗಳನ್ನ ಗಮನಿಸಿದರೆ ಜಸ್ಪ್ರೀತ್ ಬುಮ್ರಾ 24ಕ್ಕೆ 5(2022), ಇಶಾಂತ್ ಶರ್ಮ 54ಕ್ಕೆ 5(2015), ವೆಂಕಟೇಶ್ ಪ್ರಸಾದ್ 72ಕ್ಕೆ 5(2001) ಹಾಗೂ ಜಹೀರ್ ಖಾನ್ 72ಕ್ಕೆ 5(2009) ಉತ್ತಮ ಬೌಲಿಂಗ್ ದಾಳಿ ನಡೆಸಿದ್ದಾರೆ.