ಕ್ರಿಕೆಟ್‌ನಲ್ಲಿ ಫಾರ್ಮ್ ಜೊತೆಗೆ ಅದೃಷ್ಟವು ಇರ್ಬೇಕು ಅನ್ನೋ ಮಾತಿದೆ. ಈ ಮಾತು ರಾಹುಲ್ ತ್ರಿಪಾಠಿ ವಿಚಾರದಲ್ಲಿ ಅಕ್ಷರಃ ಸಹ ನಿಜ ಎನಿಸಿದೆ. ಭಾರತದ ಡೊಮೆಸ್ಟಿಕ್ ಕ್ರಿಕೆಟ್ ಹಾಗೂ ಐಪಿಎಲ್‌ನಲ್ಲಿ ಸತತವಾಗಿ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿರುವ ತ್ರಿಪಾಠಿ, ಭಾರತದ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಸಿಗದೆ ಮತ್ತೆ ನಿರಾಸೆ ಅನುಭವಿಸಿದ್ದಾರೆ.
ಇಂಡಿಯನ್ ಡೊಮೆಸ್ಟಿಕ್ ಕ್ರಿಕೆಟ್‌ನಲ್ಲಿ 12 ವರ್ಷಗಳ ಅನುಭವ ಹೊಂದಿರುವ ರಾಹುಲ್ ತ್ರಿಪಾಠಿ, ಉತ್ತಮ ಪ್ರದರ್ಶನದಿಂದ ಗಮನ ಸೆಳೆದಿದ್ದಾರೆ. ಐಪಿಎಲ್‌ನಲ್ಲೂ ಮಿಂಚಿರುವ 31 ವರ್ಷದ ಬಲಗೈ ಬ್ಯಾಟ್ಸ್‌ಮನ್, ಹಲವು ಆವೃತ್ತಿಯಲ್ಲಿ ಅಬ್ಬರಿಸಿದ್ದಾರೆ. ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್, ಕೊಲ್ಕತ್ತಾ ನೈಟ್ ರೈಡರ್ಸ್ ಜೊತೆಗೆ ಪ್ರಸ್ತುತ ಸನ್‌ರೈಸರ್ಸ್ ಹೈದ್ರಾಬಾದ್ ತಂಡದಲ್ಲಿ ರಾಹುಲ್ ತ್ರಿಪಾಠಿ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿದ್ದಾರೆ.
15ನೇ ಆವೃತ್ತಿಯಲ್ಲೂ ಅಮೋಘ ಪ್ರದರ್ಶನ ನೀಡಿರುವ ರಾಹುಲ್ ತ್ರಿಪಾಠಿ, 14 ಪಂದ್ಯಗಳಲ್ಲಿ 34.42ರ ಸರಾಸರಿ ಹಾಗೂ 158.24ರ ಸ್ಟ್ರೈಕ್ ರೇಟ್‌ನಲ್ಲಿ 413 ರನ್‌ಗಳಿಸಿದ್ದಾರೆ. ಇವರ ಈ ಇನ್ನಿಂಗ್ಸ್‌ನಲ್ಲಿ 3 ಅರ್ಧಶತಕ ಒಳಗೊಂಡಿದೆ. ಇವರ ಈ ಪ್ರದರ್ಶನ ನೋಡಿದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ಸೇರಿ ಹಲವರು ತ್ರಿಪಾಠಿ, ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಬೇಕೆಂಬ ಬಗ್ಗೆ ನಿರೀಕ್ಷೆ ಹೊಂದಿದ್ದರು. ಆದರೆ ಸೌತ್ ಆಫ್ರಿಕಾ ವಿರುದ್ಧ ಜೂನ್‌ನಲ್ಲಿ ನಡೆಯುವ 5 ಪಂದ್ಯಗಳ ಟಿ20 ಸರಣಿಗೆ ರಾಹುಲ್ ತ್ರಿಪಾಠಿ ಅವರನ್ನ ಕೈಬಿಟ್ಟಿದ್ದಾರೆ. ಆಯ್ಕೆ ಸಮಿತಿಯ ಈ ನಿರ್ಧಾರ ತ್ರಿಪಾಠಿ ಮಾತ್ರವಲ್ಲದೇ ಅನೇಕರಲ್ಲಿ ನಿರಾಸೆ ತಂದಿದೆ.
ಫ್ಯಾನ್ಸ್‌ಗಳ ಅಸಮಾಧಾನ:
ಐಪಿಎಲ್‌ನಲ್ಲಿ 400ಕ್ಕೂ ಹೆಚ್ಚು ರನ್‌ಗಳಿಸಿರುವ ರಾಹುಲ್ ತ್ರಿಪಾಠಿ, ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗುವ ನಿರೀಕ್ಷೆ ಹೆಚ್ಚಾಗಿತ್ತು. ಆದರೆ ಭಾರತದ ಟಿ20 ತಂಡದಲ್ಲಿ ತ್ರಿಪಾಠಿ ಅವರಿಗೆ ಚಾನ್ಸ್ ನೀಡದ ಬಗ್ಗೆ ಫಾನ್ಸ್‌ಗಳ ಅಸಮಾಧಾನ ಹೊರಹಾಕಿದ್ದಾರೆ. ಟೀಂ ಇಂಡಿಯಾ ಆಯ್ಕೆದಾರರ ನಿರ್ಧಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಅನೇಕರು ಸಾಕಷ್ಟು ಟ್ವೀಟ್ ಮಾಡಿದ್ದಾರೆ.