ಟೀಮ್ ಇಂಡಿಯಾ ದ.ಆಫ್ರಿಕಾ ವಿರುದ್ಧ ಭರ್ಜರಿ ಗೆಲುವು ದಾಖಲಿಸಿ 1-1 ಸರಣಿ ಸಮಬಲ ಸಾಧಿಸಿದೆ.
ಇದಕ್ಕೆ ಕಾರಣ ಶ್ರೇಯಸ್ ಅಯ್ಯರ್ ಹಾಗೂ ಇಶನ್ ಕಿಶನ್.ಈ ಮುಂಬೈಕರ್
ಒಟ್ಟು 111 ಎಸೆತಗಳಲ್ಲಿ 15 ಬೌಂಡರಿ ಒಟ್ಟು 113 ರನ್ ಚಚ್ಚಿದರು. ಈ ಮೂಲಕ ಹೊಸ ದಾಖಲೆಯನ್ನು ಬರೆದು ವಿರಾಟ್ ಕೊಹ್ಲಿ ಅವರ ಎಲೈಟ್ ಗುಂಪಿಗೆ ಸೇರಿದ್ದಾರೆ.
ಆಕರ್ಷಕ ಶತಕ ಸಿಡಿಸುವ ಮೂಲಕ ಶ್ರೇಯಸ್ ಅಯ್ಯರ್ ವಿರಾಟ್ ಕೊಹ್ಲಿ ಬಳಿಕ ರಾಂಚಿ ಅಂಗಳದಲ್ಲಿ ಶತಕ ಸಿಡಿಸಿದ ತಂಡದ ಎರಡನೆ ಭಾರತೀಯ ಬ್ಯಾಟರ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ಈ ಹಿಂದೆ ವಿರಾಟ್ ಈ ಮೈದಾನದಲ್ಲಿ 4 ಇನ್ನಿಂಗ್ಸ್ ಗಳಿಂದ 2 ಶತಕ ಸಿಡಿಸಿದ್ದಾರೆ. 2012ರಲ್ಲಿ ಶ್ರೀಲಂಕಾ ವಿರುದ್ಧ 139 ರನ್ ಹಾಗೂ 2019ರಲ್ಲಿ ವಿರಾಟ್ 123 ರನ್ ಹೊಡೆದಿದ್ದರು.
ಈವರೆಗೂ ಈ ಮೈದಾನದಲ್ಲಿ ಟೀಮ್ ಇಂಡಿಯಾದ ಯಾವ ಬ್ಯಾಟರ್ ಕೂಡ ಮೂರಂಕಿ ದಾಟಿರಲಿಲ್ಲ. ಇದೀಗ ಶ್ರೇಯಸ್ ಅಯ್ಯರ್ ಕೊಹ್ಲಿ ಬಳಿಕ ಶತಕ ಸಿಡಿಸಿದ್ದಾರೆ.
ರಾಂಚಿ ಮೈದಾನದಲ್ಲಿ ಶತಕ ಸಿಡಿಸಿದ ನಾಲ್ಕನೆ ಬ್ಯಾಟರ್ ಶ್ರೇಯಸ್ ಅಯ್ಯರ್ ಆಗಿದ್ದಾರೆ.
ಈ ಹಿಂದೆ ಶ್ರೀಲಂಕಾದ ಮಾಜಿ ನಾಯಕ ಆಂಜಿಲೊ ಮ್ಯಾಥ್ಯೂಸ್ ಹಾಗೂ ಆಸ್ಟ್ರೇಲಿಯಾದ ಉಸ್ಮಾನ್ ಖ್ವಾಜಾ ಇಲ್ಲಿನ ಮೈದಾನದಲ್ಲಿ ಶತಕ ಸಿಡಿಸಿದ್ದ ಬ್ಯಾಟರ್ ಗಳಾಗಿದ್ದಾರೆ.
IND v SA ODI