Cristiano Ronaldo – ಕ್ಲಬ್ ಫುಟ್ ಬಾಲ್ ನಲ್ಲಿ ಗಳಿಸಿದ್ದ ಗೋಲುಗಳು 700 ಅಷ್ಟೇ..!
ವಿಶ್ವ ಫುಟ್ ಬಾಲ್ ಮಾಂತ್ರಿಕ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಮತ್ತೊಂದು ದಾಖಲೆಯೊಂದನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ.
ಹೌದು, ಭಾನುವಾರ ನಡೆದ ಪ್ರೀಮಿಯರ್ ಲೀಗ್ ಫುಟ್ ಬಾಲ್ ಟೂರ್ನಿಯಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಮಹತ್ವದ ಸಾಧನೆಯೊಂದನ್ನು ಮಾಡಿದ್ದಾರೆ. ಮ್ಯಾಂಚೆಸ್ಟರ್ ಯುನೈಟೆಡ್ ತಂಡ 2-1ರಿಂದ ಎವರ್ಟನ್ ತಂಡವನ್ನು ಸೋಲಿಸಿತ್ತು. ಈ ಪಂದ್ಯದಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಒಂದು ಗೋಲು ದಾಖಲಿಸಿದ್ದಾಗ ಈ ಸಾಧನೆಯ ಸಾಲಿಗೆ ಸೇರಿಕೊಂಡಿದ್ದಾರೆ.
ಕ್ಲಬ್ ಫುಟ್ ಬಾಲ್ ಟೂರ್ನಿಯಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಅವರು 700 ಗೋಲು ದಾಖಲಿಸಿದ್ದ ಹಿರಿಮೆಗೆ ಪಾತ್ರರಾಗಿದ್ದಾರೆ.
ಇದರೊಂದಿಗೆ ಕ್ರಿಸ್ಟಿಯಾನೊ ರೊನಾಲ್ಡೊ ಅವರು ತನ್ನ ಫುಟ್ ಬಾಲ್ ವೃತ್ತಿ ಬದುಕಿನಲ್ಲಿ ಒಟ್ಟು 817 ಗೋಲು ಗಳನ್ನು ದಾಖಲಿಸಿದ್ದಾರೆ. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಅವರು 117 ಗೋಲುಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದಾರೆ.
ಇನ್ನು ಕ್ಲಬ್ ಫುಟ್ ಬಾಲ್ ಟೂರ್ನಿಗಳಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಅವರು ರಿಯಲ್ ಮ್ಯಾಡ್ರಿಡ್ ತಂಡದ ಪರವಾಗಿ 450 ಗೋಲುಗಳನ್ನು ದಾಖಲಿಸಿದ್ದರು. ಹಾಗೇ ಜುವೆಂಟಸ್ ತಂಡದ ಪರವಾಗಿ 101 ಗೋಲುಗಳನ್ನು ದಾಖಲಿಸಿದ್ರೆ,144 ಗೋಲುಗಳನ್ನು ಮ್ಯಾಂಚೆಸ್ಟರ್ ತಂಡದ ಪರವಾಗಿ ಹೊಡೆದಿದ್ದಾರೆ.
37ರ ಹರೆಯದ ಕ್ರಿಸ್ಟಿಯಾನೊ ರೋನಾಲ್ಡೊ ಅವರು ಈ ಬಾರಿಯ ಕತಾರ್ ಫಿಫಾ ವಿಶ್ವಕಪ್ ಟೂರ್ನಿಯನ್ನು ಎದುರು ನೋಡುತ್ತಿದ್ದಾರೆ . ಪೋರ್ಚ್ಗಲ್ ತಂಡದ ನಾಯಕನಾಗಿರುವ ಕ್ರಿಸ್ಟಿಯಾನೊ ಯಾವ ರೀತಿಯ ಪ್ರದರ್ಶನವನ್ನು ನೀಡ್ತಾರೆ ಅನ್ನೋದನ್ನು ಕಾದು ನೋಡಬೇಕು. ಇನ್ನೊಂದೆಡೆ ಅರ್ಜೆಂಟಿನಾದ ಲಿಯೊನಲ್ ಮೆಸ್ಸಿ ಅವರು ಈಗಾಗಲೇ ಕತಾರ್ ಫಿಫಾ ವಿಶ್ವಕಪ್ ಟೂರ್ನಿ ತನ್ನ ಕೊನೆಯ ವಿಶ್ವಕಪ್ ಎಂದು ಹೇಳಿದ್ದಾರೆ. ಹಾಗೇ ಕ್ರಿಸ್ಟಿಯಾನೊ ರೋನಾಲ್ಡೊ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಅನ್ನೋದು ಸದ್ಯದಲ್ಲೇ ಗೊತ್ತಾಗಲಿದೆ.