ಒಲಿಂಪಿಕ್ ಚಾಂಪಿಯನ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಟೋಕಿಯೊ ಕ್ರೀಡಾಕೂಟದ ನಂತರ ಮೊದಲ ಬಾರಿಗೆ ಮೈದಾನಕ್ಕಿಳಿದರು. ಫಿನ್‌ಲ್ಯಾಂಡ್‌ನಲ್ಲಿ ನಡೆದ ಪಾವೊ ನೂರ್ಮಿ ಗೇಮ್ಸ್‌ನಲ್ಲಿ ನೀರಜ್ 89.30 ಮೀಟರ್ ದೂರ ಎಸೆದು ವೈಯಕ್ತಿಕ ಶ್ರೇಷ್ಠ ಸಾಧನೆ ಮಾಡುವ ಮೂಲಕ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು. ಆದರೆ, ಅವರು ಚಿನ್ನದಿಂದ ವಂಚಿತರಾಗಿ. ಬೆಳ್ಳಿಗೆ ತೃಪ್ತಿಪಡಬೇಕಿತ್ತು.
ಫಿನ್‌ಲ್ಯಾಂಡ್‌ನ ಒಲಿವರ್ ಹೆಲೆಂಡರ್ 89.83 ಮೀಟರ್ ಎಸೆದು ಚಿನ್ನ ಮತ್ತು ಗ್ರಾನಡಾದ ಆಂಡರ್ಸನ್ ಪಿಟರ್ಸ್ 84.65 ಮೀಟರ್ ಎಸೆದು ಕಂಚಿನ ಪದಕ ಗೆದ್ದರು. ನೀರಜ್ ಚೋಪ್ರಾ ಅವರು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸಾಧಿಸಿದ್ದ 87.58 ಮೀ ರಾಷ್ಟ್ರೀಯ ದಾಖಲೆಯನ್ನು ಉತ್ತಮಗೊಳಿಸಿದರು.

90 ಮೀಟರ್ ನತ್ತ ಚಿತ್ತ
90 ಮೀಟರ್ ದಾಟುವ ಗುರಿ ಹೊಂದಿರುವುದಾಗಿ ನೀರಜ್ ಈ ವರ್ಷ ಸಂದರ್ಶನವೊಂದರಲ್ಲಿ ಹೇಳಿದ್ದರು. ಅವರು ವಿಶ್ವ ಚಾಂಪಿಯನ್‌ಶಿಪ್‌ಗೆ ಮುನ್ನ 90 ಮೀಟರ್‌ಗಳ ಗುರಿಯನ್ನು ಸಾಧಿಸಲು ಪ್ರಯತ್ನಿಸುತ್ತಿದ್ದಾರೆ. ಇದರಿಂದಾಗಿ ಅವರು ವಿಶ್ವದ ಅಗ್ರ ಎಸೆತಗಾರರ ಪಟ್ಟಿಯಲ್ಲಿ ಸೇರಬಹುದು.
ಜುಲೈ 15 ರಿಂದ 24 ರವರೆಗೆ ಅಮೆರಿಕದಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ನೀರಜ್ ಭಾಗವಹಿಸಬೇಕಿದೆ. ಅದಕ್ಕೂ ಮೊದಲು, ಜೂನ್ 30 ರಂದು, ಅವರು ಸ್ಟಾಕ್ ಹೋಮ್‌ನಲ್ಲಿ ಉನ್ನತ ಮಟ್ಟದ ಡೈಮಂಡ್ ಲೀಗ್ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಅವರು ಪ್ರಸ್ತುತ ಫಿನ್‌ಲ್ಯಾಂಡ್‌ನ ಕುರ್ಟೇನ್ ಒಲಿಂಪಿಕ್ ತರಬೇತಿ ಕೇಂದ್ರದಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ ಮತ್ತು ಜೂನ್ 22 ರವರೆಗೆ ಅಲ್ಲಿರುತ್ತಾರೆ.

ಈಗ ನೀರಜ್ ಮುಂದಿನ ಗುರಿ ವಿಶ್ವ ಚಾಂಪಿಯನ್‌ಶಿಪ್ ಮತ್ತು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆಲ್ಲುವುದು. ವಿಶ್ವ ಚಾಂಪಿಯನ್‌ಶಿಪ್ ಜುಲೈ 15 ರಿಂದ 24 ರವರೆಗೆ ಯುಎಸ್‌ನಲ್ಲಿ ನಡೆಯಲಿದೆ. ಕಾಮನ್ವೆಲ್ತ್ ಕ್ರೀಡಾಕೂಟವು ಬರ್ಮಿಂಗ್ಹ್ಯಾಮ್ನಲ್ಲಿ ಜುಲೈ 28 ರಿಂದ ಆಗಸ್ಟ್ 8 ರವರೆಗೆ ನಡೆಯಲಿದೆ.