ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಟೀಮ್ ಇಂಡಿಯಾವನ್ನು ಪ್ರಕಟಿಸಲಾಗಿದೆ.
ದೇಸಿ ಕ್ರಿಕೆಟ್ ನಲ್ಲಿ ಮಿಂಚಿದ ಮಿಡ್ಲ್ ಆರ್ಡರ್ ಬ್ಯಾಟರ್ ರಜತ್ ಪಾಟಿಧಾರ್ ಮತ್ತು ಬಂಗಾಳ ವೇಗಿ ಮುಖೇಶ್ ಕುಮಾರ್ಗೆ ಮಣೆ ಹಾಕಲಾಗಿದೆ.
ಮಧ್ಯ ಪ್ರದೇಶ ರಜತ್ ಪಾಟಿಧಾರ್ ದೇಸಿ ಟೂರ್ನಿಯಲ್ಲಿ ಶತಕಗಳನ್ನು ಸಿಡಿಸಿ ಅಬ್ಬರಿಸಿದ್ದರು ಜೊತೆಗೆ ಐಪಿಎಲ್ ನಲ್ಲೂ ಸ್ಪೋಟಕ ಬ್ಯಾಟಿಂಗ್ ಮಾಡಿ ಮಿಂಚು ಹರಿಸಿದ್ದರು.
ಇನ್ನು ಬಂಗಾಳ ತಂದ ವೇಗಿ ಮುಖೇಶ್ ಕುಮಾರ್ ಮೊನ್ನೆ ನ್ಯೂಜಿಲೆಂಡ್ ಎ ತಂಡದ ವಿರುದ್ಧ 5 ವಿಕೆಟ್ ಗಳನ್ನು ಪಡೆದು ಮಿಂಚಿದ್ದರು.
ದೇಸಿ ಟೂರ್ನಿಯಲ್ಲಿ ರನ್ ಮಳೆ ಸುರಿಸಿ ಗಮನಸೆಳೆದಿದ್ದ ಮರಿ ಸಚಿನ್ ಖ್ಯಾತಿಯ ಪೃಥ್ವಿ ಶಾಗೆ ಆಯ್ಕೆ ಮಂಡಳಿ ಆಯ್ಕೆ ಮಾಡದಿರುವುದು ಅಚ್ಚರಿ ನೀಡಿದೆ.
ಇನ್ನು ಸೌತ್ ಆಫ್ರಿಕಾ ಸರಣಿಯಲ್ಲಿ ಅನುಭವಿ ಬ್ಯಾಟರ್ ಶಿಖರ್ ಧವನ್ ತಂಡವನ್ನು ಮುನ್ನಡೆಸಲಿದ್ದಾರೆ. ಶ್ರೇಯಸ್ ಅಯ್ಯರ್ ಉಪನಾಯಕನಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಭಾರತ ಏಕದಿನ ತಂಡ: ಶಿಖರ್ ಧವನ್ (ನಾಯಕ), ಋತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ಶ್ರೇಯಸ್ ಅಯ್ಯರ್ (ಉಪನಾಯಕ),ರಜತ್ ಪಾಟಿಧಾರ್, ರಾಹುಲ್ ತ್ರಿಪಾಠಿ, ಇಶನ್ ಕಿಶನ್, (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್),ಶಾಬಾಜ್ ಅಹ್ಮದ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ರವಿ ಬಿಷ್ಣೋಯಿ, ಮುಖೇಶ್ ಕುಮಾರ್, ಆವೇಶ್ ಖಾನ್, ಮೊಹ್ಮದ್ ಸೀರಾಜ್, ದೀಪಕ್ ಚಾಹರ್.