ಐಸಿಸಿ ಮಹಿಳಾ ವಿಶ್ವಕಪ್ನಲ್ಲಿ ಫೈನಲ್ ಪಂದ್ಯವೊಂದೇ ಬಾಕಿದೆ. ಕಳೆದ 11 ಆವೃತ್ತಿಗಳಲ್ಲಿ ಆಸ್ಟ್ರೇಲಿಯಾ 8 ಬಾರಿ ಫೈನಲ್ ಪ್ರವೇಶಿಸಿದೆ. ಇಂಗ್ಲೆಂಡ್ 7 ಬಾರಿ ಫೈನಲ್ನಲ್ಲಿ ಆಟ ಆಡಿದೆ. ಆದರೆ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ಆಟ ಮಾತ್ರ ಎಂದೂ ನಡೆದಿಲ್ಲ.
12: ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿ ಪಂದ್ಯಗಳು ನಡೆದಿವೆ. 11 ಫೈನಲ್ಸ್ ನಡೆದಿದ್ದರೆ, ಈ ಬಾರಿಯ ಫೈನಲ್ಸ್ ಬಾಕಿ ಇದೆ. ಈ ಪೈಕಿ 1973 ಮತ್ತು 1978ರಲ್ಲಿ ಫೈನಲ್ ಪಂದ್ಯ ಇರಲಿಲ್ಲ. ಲೀಗ್ ಪಂದ್ಯದ ಟಾಪ್ ತಂಡ ವಿಶ್ವ ಕಪ್ ಜಯಿಸಿತ್ತು. 1973ರ ಮೊದಲ ಮಹಿಳಾ ವಿಶ್ವಕಪ್ ಅನ್ನು ಇಂಗ್ಲೆಂಡ್ ಗೆದ್ದುಕೊಂಡರೆ 1978ರಲ್ಲಿ ಆಸ್ಟ್ರೇಲಿಯಾ ಗೆದ್ದುಕೊಂಡಿತ್ತು.
06: ಆಸ್ಟ್ರೇಲಿಯಾ 6 ಬಾರಿ ವಿಶ್ವಕಪ್ ಗೆದ್ದ ಏಕೈಕ ಮಹಿಳಾ ತಂಡವಾಗಿದೆ. 4 ಬಾರಿ ಇಂಗ್ಲೆಂಡ್ ಚಾಂಪಿಯನ್ ಆಗಿದೆ. 1 ಬಾರಿ ನ್ಯೂಜಿಲೆಂಡ್ ಕಪ್ ಗೆದ್ದಿತ್ತು.
09: ಈ ಬಾರಿಯ ಫೈನಲ್ ಪಂದ್ಯ ಸೇರಿ ಆಸ್ಟ್ರೇಲಿಯಾ 9ನೇ ಬಾರಿಗೆ ಫೈನಲ್ ಪ್ರವೇಶಿಸಿದೆ. 6 ಬಾರಿ ಚಾಂಪಿಯನ್ ಆದರೆ 2 ಬಾರಿ ರನ್ನರ್ ಅಪ್ ಆಗಿದೆ. ಇಂಗ್ಲೆಂಡ್ಗೆ ಇದು 8ನೇ ಫೈನಲ್. 4 ಬಾರಿ ಚಾಂಪಿಯನ್ ಮತ್ತು 3 ಬಾರಿ ರನ್ನರ್ ಅಪ್ ಆಗಿತ್ತು.
04: ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ಇದು 4ನೇ ಫೈನಲ್. 1973ರಲ್ಲಿ ಇಂಗ್ಲೆಂಡ್ ಆಸ್ಟ್ರೇಲಿಯಾವನ್ನು ಪಾಯಿಂಟ್ ಆಧಾರದಲ್ಲಿ ಸೋಲಿಸಿತ್ತು. 1978ರಲ್ಲಿ ಆಸ್ಟ್ರೇಲಿಯಾ ಇಂಗ್ಲೆಂಡ್ ತಂಡವನ್ನು ಫೈನಲ್ನಲ್ಲಿ ಸೋಲಿಸಿತ್ತು. ಆ ಬಳಿಕ 1982 ಮತ್ತು 1988ರಲ್ಲಿ ಆಸ್ಟ್ರೇಲಿಯಾ ಇಂಗ್ಲೆಂಡ್ ತಂಡವನ್ನು ಫೈನಲ್ನಲ್ಲಿ ಸೋಲಿಸಿತ್ತು.
ಈ ಬಾರಿಯ ಲೀಗ್ ಹಂತದ ಪಂದ್ಯದಲ್ಲಿ ಆಸ್ಟ್ರೇಲಿಯಾ ಇಂಗ್ಲೆಂಡ್ ತಂಡವನ್ನು ಸೋಲಿಸಿ ಗೆಲುವಿನ ಸಂಭ್ರಮ ಆಚರಿಸಿಕೊಂಡಿತ್ತು.