ಅರ್ಹತಾ ಸುತ್ತಿನಲ್ಲಿ ಐರ್ಲೆಂಡ್ ಮತ್ತು ನೆದರ್ಲೆಂಡ್ಗೆ ಶಾಕ್ ನೀಡಿ ಸೂಪರ್ 12ಗೆ ಅರ್ಹತೆ ಪಡೆದಿದ್ದ ಕ್ರಿಕೆಟ್ ಕೂಸು ನಮಿಬಿಯಾ ಸೂಪರ್ 12ರ ಗ್ರೂಪ್ 2ರಲ್ಲಿ ಸ್ಕಾಟ್ಲೆಂಡ್ಗೆ ಸೋಲುಣಿಸಿದೆ. ಜೈಂಟ್ ಕಿಲ್ಲರ್ ಖ್ಯಾತಿ ಪಡೆದಿರುವ ನಮೀಬಿಯಾ ಈಗ ಅಫ್ಘಾನ್ ತಂಡಕ್ಕೆ ಶಾಕ್ ನೀಡಲು ಸಿದ್ಧವಾಗುತ್ತಿದೆ. ಅಬುಧಾಬಿಯಲ್ಲಿ ನಡೆಯುವ ಈ ಮ್ಯಾಚ್ ಹಲವು ಲೆಕ್ಕಾಚಾರಗಳನ್ನು ಹೊಂದಿದೆ.
ಅಫ್ಘಾನ್ ಈ ಪಂದ್ಯವನ್ನು ಗೆದ್ದರೆ ಗ್ರೂಪ್ನಲ್ಲ 2ನೇ ಸ್ಥಾನದಲ್ಲಿ ಮುಂದುವರೆಯಲಿದೆ. ನಮೀಬಿಯಾ ಗೆದ್ದರೆ ಅದಕ್ಕೆ 2ನೇ ಸ್ಥಾನ ಸಿಗಲಿದೆ. ಟೀಮ್ ಇಂಡಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧದ ವಿನ್ನರ್ 3ನೇ ಸ್ಥಾನಿಯಾಗುತ್ತಾರೆ. ನಮಿಬಿಯಾ ತಂಡ ಸಾಂಘೀಕ ಹೋರಾಟ ನೀಡುತ್ತಿದೆ. ಡೇವಿಡ್ ವೀಸ್ ಜೈಂಟ್ ಕಿಲ್ಲರ್ ತಂಡದ ದೊಡ್ಡ ಹೆಸರು. ಉಳಿದಂತೆ ಆಲ್ರೌಂಡರ್ಗಳು ಮತ್ತು ಸಾಂಘೀಕ ಹೋರಾಟ ನೀಡುವ ಆಟಗಾರರೇ ತಂಡದ ಶಕ್ತಿ.
‘ಇನ್ನು ಅಫ್ಘಾನ್ ತಂಡ ಬಿಗ್ ಹಿಟ್ಟರ್ಗಳ ದಂಡನ್ನೇ ಹೊಂದಿದೆ. ಮೊಹಮ್ಮದ್ ಶೆಹಜಾದ್, ಹಝರುತುಲ್ಲಾ ಜಜಾಯಿ ಮತ್ತು ರಹಮತುಲ್ಲಾ ಗುರ್ಬಾಜ್ ನಜಿಬುಲ್ಲಾ ಜರ್ದಾನ್, ಮೊಹಮ್ಮದ್ ನಬಿ ಮತ್ತು ಅಸ್ಗರ್ ಅಫ್ಘಾನ್ ಹೀಗೆ ಸಿಕ್ಸರ್ ಕಿಂಗ್ಗಳೇ ತಂಡದಲ್ಲಿದ್ದಾರೆ. ಬೌಲಿಂಗ್ನಲ್ಲೂ ಸವಾಲೊಡ್ಡುವ ಅಸ್ತ್ರಗಳಿವೆ. ಮುಜೀಬ್ ಉರ್ ರೆಹಮಾನ್ ಮತ್ತು ರಶೀದ್ ಖಾನ್ ಮ್ಯಾಜಿಕ್ ನಡೆದರೆ ಮತ್ತೊಂದು ದೊಡ್ಡ ಗೆಲುವು ನಿಶ್ಚಿತ . ಮೊಹಮ್ಮದ್ ನಬಿ ಕೂಡ ಸ್ಪಿನ್ ಬೌಲಿಂಗ್ ಮಾಡಬಲ್ಲರು. ನವೀನ್ ಉಲ್ ಹಕ್ ಮತ್ತು ಗುಲ್ಬಾದಿನ್ ನಯೀಮ್ ಕೂಡ ಬೌಲಿಂಗ್ ಅಸ್ತ್ರಗಳೇ ಪಾಕ್ ವಿರುದ್ಧ ಸೋತ ಕಹಿ ಮರೆಯಲು ಅಫ್ಘಾನ್ಗೆ ನಮೀಬಿಯಾ ವಿರುದ್ಧ ದೊಡ್ಡ ಗೆಲುವು ಅನಿವಾರ್ಯ