ನಮೀಬಿಯಾ ಮತ್ತೊಂದು ಶಾಕಿಂಗ್ ಫಲಿತಾಂಶ ತಂದುಕೊಡಬಹುದು ಅನ್ನುವ ಲೆಕ್ಕಾಚಾರವಿತ್ತು. ಆದರೆ ಅಫ್ಘಾನಿಸ್ತಾನದ ಶಿಸ್ತಿನ ಮುಂದೆ ಅದು ಮುಗ್ಗರಿಸಿದೆ. ಟೆಸ್ಟ್ ಆಡುವ ದೇಶಗಳ ಎದುರು ಗೆಲುವು ಸುಲಭವಲ್ಲ ಅನ್ನುವುದು ನಮೀಬಿಯಾದ ಅನುಭವಕ್ಕೆ ಬಂದಿದೆ. ಅಫ್ಘಾನ್ 62ರನ್ಗಳ ಭರ್ಜರಿ ಜಯ ದಾಖಲಿಸಿದೆ.
ಟಾಸ್ಗೆದ್ದ ಅಫ್ಘಾನಿಸ್ತಾನ ಬ್ಯಾಟಿಂಗ್ ಆಯ್ದುಕೊಂಡಿತು. ಹಝರತುಲ್ಲಾ ಜಜಾಯಿ (33 ರನ್) ಮತ್ತು ಮೊಹಮ್ಮದ್ ಶೆಹಜ್ಹಾದ್ (45 ರನ್) ಡೀಸೆಂಟ್ ಆರಂಭ ತಂದುಕೊಟ್ಟರು. ರೆಹಮತುಲ್ಲಾ ಗುರ್ಬಾಝ್ ಮತ್ತು ನಜಿಬುಲ್ಲಾ ಜದ್ರಾನ್ ಹೆಚ್ಚು ರನ್ಗಳಿಸಲಿಲ್ಲ. ಆದರೆ ಕೊನೆಯ ಅಂತರಾಷ್ಟ್ರೀಯ ಪಂದ್ಯ ಆಡಿದ ಅಸ್ಗರ್ ಅಫ್ಘಾನ್ 31 ರನ್ಗಳಿಸಿದರು. ನಾಯಕ ಮೊಹಮ್ಮದ್ ನಬಿ ಸ್ಲಾಗ್ ಓವರುಗಳಲ್ಲಿ ಬಿರುಸಾಗಿ ಆಡಿ 17 ಎಸೆತಗಳಲ್ಲಿ ಅಜೇಯ 32 ರನ್ಗಳಿಸಿದರು. 20 ಓವರುಗಳಲ್ಲಿ ಅಫ್ಘಾನಿಸ್ತಾನ 5 ವಿಕೆಟ್ ಕಳೆದುಕೊಂಡು 160 ರನ್ಗಳಿಸಿತು.
ಚೇಸಿಂಗ್ ಆರಂಭಿಸಿದ ನಮಿಬಿಯಾ ಎಲ್ಲೂ ಬ್ಯಾಟಿಂಗ್ ಲಯ ಕಂಡುಕೊಳ್ಳಲಿಲ್ಲ. ನವೀನ್ ಉಲ್ ಹಕ್ ವಿಲಿಯಮ್ಸ್ (1 ರನ್) ಮತ್ತು ಲಿಂಗ್ (11)ರನ್ ವಿಕೆಟ್ ಪಡೆದರು. ಈಟನ್ ಮತ್ತು ಎರಾಸ್ಮಸ್ ಆಟವೂ ನಡೆಯಲಿಲ್ಲ. ಡೇವಿಡ್ ವೀಸ್ 26 ರನ್ಗಳಿಸಿದ್ದೇ ಅತೀ ಹೆಚ್ಚಿನ ಗಳಿಕೆ. ಅಫ್ಘಾನಿಸ್ತಾನದ ನವೀನ್ ಉಲ್ ಹಕ್ 26 ರನ್ಗೆ 3 ವಿಕೆಟ್ ಪಡೆದರೆ ಹಮಿದ್ ಹಸನ್ 9 ರನ್ಗಳಿಗೆ 3 ವಿಕೆಟ್ ಪಡೆದರು. 20 ಓವರುಗಳಲ್ಲಿ ನಮೀಬಿಯಾ 9 ವಿಕೆಟ್ ಕಳೆದುಕೊಂಡು 98 ರನ್ಗಳಿಸಲು ಶಕ್ತವಾಯಿತು. ಅಫ್ಘಾನಿಸ್ತಾನ 62 ರನ್ಗಳ ಅಮೋಘ ಜಯಗಳಿಸಿ ಪಾಯಿಂಟ್ ಟೇಬಲ್ನಲ್ಲಿ 2ನೇ ಸ್ಥಾನ ಗಟ್ಟಿಮಾಡಿಕೊಂಡಿತು.