ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದ ಶಾಹೀನ್ ಅಫ್ರಿದಿ(Shaheen Afridi) ಇದೀಗ ಸಂಪೂರ್ಣ ಫಿಟ್ ಆಗಿದ್ದು, ಮುಂಬರುವ T20I ವಿಶ್ವಕಪ್ ಟೂರ್ನಿ(T20I World Cup) ಎದುರು ನೋಡುತ್ತಿರುವ ಪಾಕಿಸ್ತಾನ(Pakistan)ದ ವೇಗಿ, ಅಕ್ಟೋಬರ್ 15ರಂದು ಬ್ರಿಸ್ಬೇನ್(Brisbane)ನಲ್ಲಿ ತಂಡ(Squad)ವನ್ನು ಸೇರ್ಪಡೆಯಾಗಲಿದ್ದಾರೆ.
ಕಳೆದ ಜುಲೈನಲ್ಲಿ ಶ್ರೀಲಂಕಾ ವಿರುದ್ಧ ನಡೆದ ಮೊದಲ ಟೆಸ್ಟ್‌ನಲ್ಲಿ ಮೊಣಕಾಲಿನ ಗಾಯದ ಸಮಸ್ಯೆಗೆ ಸಿಲುಕಿದ್ದ ಶಾಹೀನ್ ಅಫ್ರೀದಿ, ನಂತರ ನಡೆದ ಏಷ್ಯಾ ಕಪ್ ಟೂರ್ನಿ ಹಾಗೂ ತವರಿನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದರು. ನಂತರ ಚೇತರಿಕೆ ಕಂಡಿದ್ದ ಎಡಗೈ ವೇಗಿ, ಆಗಸ್ಟ್‌ನಲ್ಲಿ ಸೀಮಿತ ಓವರ್‌ಗಳ ಸರಣಿಗಾಗಿ ನೆದರ್‌ಲ್ಯಾಂಡ್‌ಗೆ ಪ್ರಯಾಣ ಬೆಳೆಸಿದರು. ಆದರೆ ವೈದ್ಯಕೀಯ ಸಿಬ್ಬಂದಿ ಇದಕ್ಕೆ ಅವಕಾಶ ನೀಡಿರಲಿಲ್ಲ.
ನಂತರ ಶಾಹೀನ್ ಅಫ್ರಿದಿ ಅವರು ಕ್ರಿಸ್ಟಲ್ ಪ್ಯಾಲೇಸ್‌ನಲ್ಲಿ ಪಿಸಿಬಿ ವೈದ್ಯಕೀಯ ಸಲಹ ಸಮಿತಿಯಲ್ಲಿ ಪುನರ್ವಸತಿಗೆ ಒಳಗಾಗಿದ್ದರು. ಇದೀಗ ಸಂಪೂರ್ಣ ಫಿಟ್ ಆಗಿರುವ ಶಾಹೀನ್ ಅಫ್ರೀದಿ, ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದು, ಅ.15ರಂದು ಬ್ರಿಸ್ಬೇನ್‌ನಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ. ಅಲ್ಲದೇ ಶಾಹೀನ್ ಅಫ್ರೀದಿ ಟಿ20 ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ ಎಂದು ಪಿಸಿಬಿ ಸ್ಪಷ್ಟಪಡಿಸಿದೆ. ಪಾಕಿಸ್ತಾನ ಅಕ್ಟೋಬರ್ 17 ಮತ್ತು 19ರಂದು ಇಂಗ್ಲೆಂಡ್ ಹಾಗೂ ಅಫ್ಘಾನಿಸ್ತಾನ್ ವಿರುದ್ಧ ಅಭ್ಯಾಸ ಪಂದ್ಯವನ್ನ ಆಡಲಿದೆ.