ಕೊನೆಯ ಓವರ್ ತನಕ ಪಂದ್ಯ ಶ್ರೀಲಂಕಾದ ಕೈಯಲ್ಲೇ ಇತ್ತು. ಅಂತಿಮ ಓವರ್ನಲ್ಲಿ ದಕ್ಷಿಣ ಆಫ್ರಿಕಾದ ಗೆಲುವಿಗೆ 15ರನ್ಗಳು ಬೇಕಿತ್ತು. ಶ್ರೀಲಂಕಾ ತನ್ನ ಟ್ರಂಪ್ಕಾರ್ಡ್ ಬೌಲರ್ ಲಹಿರು ಕುಮಾರ ಕೈಗೆ ಚೆಂಡು ನೀಡಿತ್ತು. ಆದರೆ ಪವರ್ಫುಲ್ ಮಿಲ್ಲರ್ ಸತತ 2 ಸಿಕ್ಸರ್ ಸಿಡಿಸಿ ಶ್ರೀಲಂಕಾದ ಪಾಲಿಗೆ ಕಿಲ್ಲರ್ ಆದರು. ದಕ್ಷಿಣ ಆಫ್ರಿಕಾ ಮಹತ್ವದ ಪಂದ್ಯವನ್ನು ಒಂದು ಎಸೆತ ಬಾಕಿ ಇರುವಂತೆ 4 ವಿಕೆಟ್ ಗಳಿಂದ ಗೆದ್ದು ಬೀಗಿತು.
ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಫೀಲ್ಡಿಂಗ್ ಆಯ್ದುಕೊಂಡಿತು. ಕುಸಾಲ್ ಪೆರಾರ ವಿಕೆಟ್ ಕಬಳಿಸುವ ಮೂಲಕ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿತು. ಚರಿತ್ ಅಸಂಕಾ (21 ರನ್) ರರ್ನಟ್ಗೆ ಬಲಿಯಾದರು. ತಬ್ರೈಸ್ ಶಂಸಿ ರಾಜಪಕ್ಸೆ ( 0 ರನ್), ಫೆರ್ನಾಂಡೋ ( 3ರನ್) ಮತ್ತು ಹಸರಂಗ (4 ರನ್) ವಿಕೆಟ್ ಅನ್ನು ಬೆನ್ನು ಬೆನ್ನಿಗೆ ಪಡೆದರು. ಈ ಮಧ್ಯೆ ಪತುನ್ ನಿಸ್ಸಾಂಕ 72 ರನ್ಗಳಿಸಿ ತಂಡಕ್ಕೆ ಆಧಾರವಾದರು. ಕೊನೆಯಲ್ಲಿ ನಾಯಕ ದಸುನ್ ಶನಕ ಸೇರಿದಂತೆ ಉಳಿದ ಆಟಗಾರರು ದೊಡ್ಡ ರನ್ಗಳಿಸುವಲ್ಲಿ ಎಡವಿದರು. ಶ್ರೀಲಂಕಾ 20 ಓವರುಗಳಲ್ಲಿ 142 ರನ್ಗಳಿಗೆ ಆಲೌಟ್ ಆಯಿತು. ಶಂಸಿ ಮತ್ತು ಡ್ವೈನ್ ಪ್ರಿಟೋರಿಯಸ್ ತಲಾ 3 ವಿಕೆಟ್ ಪಡೆದರು.
ಚೇಸಿಂಗ್ ಆರಂಭಿಸಿದ ದಕ್ಷಿಣ ಆಫ್ರಿಕಾ ಕೂಡ ಉತ್ತಮ ಆರಂಭ ಪಡೆಯಲಿಲ್ಲ. ರಿಜಾ ಹೆಂಡ್ರಿಕ್ಸ್ (11 ರನ್) ಮತ್ತು ಕ್ವಿಂಟನ್ ಡಿ ಕಾಕ್ (12ರನ್) ಬೇಗನೆ ನಿರ್ಗಮಿಸಿದರು. ರಾಸಿ ವ್ಯಾಂಡರ್ ಡ್ಯುಸನ್ (16 ರನ್) ರನೌಟ್ ಬಲೆಯಲ್ಲಿ ಬಿದ್ದರು. ನಾಯಕ ತೆಂಬ ಬವುಮಾ ಮತ್ತು ಏಡಿಯನ್ ಮಾರ್ಕ್ ರಾಂ ಇನ್ನಿಂಗ್ಸ್ ಕಟ್ಟಿದರು. ಆದರೆ ಮಾರ್ಕ್ ರಾಂ 16 ರನ್ಗಳಿಸಿ 15ನೇ ಓವರ್ನ ಕೊನೆಯ ಎಸೆತದಲ್ಲಿ ಹಸರಂಗ ಎಸೆತದಲ್ಲಿ ಔಟಾದರು.
17ನೇ ಓವರ್ನ ಮೊದಲ ಎಸೆತದಲ್ಲಿ ಹಸರಂಗ 43 ರನ್ಗಳಿಸಿದ ತೆಂಬ ಬವುಮಾ ವಿಕೆಟ್ ಪಡೆದುಕೊಂಡರು. ಮುಂದಿನ ಎಸೆತದಲ್ಲಿ ಡ್ವೈನ್ ಪ್ರಿಟೊರಿಯಸ್ ಕೂಡ ಔಟಾದರು. ಹಸರಂಗ ವಿಶ್ವಕಪ್ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದರು. ಕೊನೆಯ ಎರಡು ಓವರ್ನಲ್ಲಿ ದಕ್ಷಿಣ ಆಫ್ರಿಕಾದ ಗೆಲುವಿಗೆ 25 ರನ್ ಬೇಕಾಗಿತ್ತು.
19ನೇ ಓವರ್ನಲ್ಲ ಡೇವಿಡ್ ಮಿಲ್ಲರ್ ಮತ್ತು ಕಗಿಸೊ ರಬಾಡ 10 ರನ್ ಪಡೆದರು. ಅಂತಿಮ ಓವರ್ನಲ್ಲಿ ದಕ್ಷಿಣ ಆಫ್ರಿಕಾದ ಗೆಲುವಿಗೆ 15ರನ್ ಬೇಕಿತ್ತು. ಲಹಿರು ಕುಮಾರ ಎಸೆದ ಆ ಓವರ್ನ 2 ಮತ್ತು 3ನೇ ಎಸೆತವನ್ನು ಮಿಲ್ಲರ್ ಸಿಕ್ಸರ್ಗೆ ಅಟ್ಟಿ ಲಂಕಾ ಕೈಯಿಂದ ಗೆಲುವು ಕಸಿದುಕೊಂಡರು. ದಕ್ಷಿಣ ಆಪ್ರಿಕಾ 1 ಎಸೆತ ಬಾಕಿ ಇರುವಂತೆ 4 ವಿಕೆಟ್ಗಳಿಂದ ಪಂದ್ಯ ಗೆದ್ದು ಬೀಗಿತು.