ICC T20 rankings: – ಕೆ.ಎಲ್. ರಾಹುಲ್ ಗೆ ನಾಲ್ಕನೇ ಸ್ಥಾನ
ಕೆ.ಎಲ್. ರಾಹುಲ್ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ನಾಯಕನಾಗಿ ವಿಫಲರಾಗಿರಬಹುದು. ಆದ್ರೆ ಬ್ಯಾಟ್ಸ್ ಮೆನ್ ಆಗಿ ಗಮನ ಸೆಳೆಯುವಂತಹ ಪ್ರದರ್ಶನ ನೀಡಿದ್ದರು. ಇದೀಗ ಐಸಿಸಿ ಟಿ-20 ಶ್ರೇಯಾಂಕ ಪಟ್ಟಿಯಲ್ಲೂ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ.
ಐಸಿಸಿ ಬಿಡುಗಡೆ ಮಾಡಿರುವ ಟಿ-20 ಶ್ರೇಯಾಂಕಪಟ್ಟಿಯಲ್ಲಿ ಕೆ.ಎಲ್. ರಾಹುಲ್ 278 ಅಂಕಗಳನ್ನು ಪಡೆದುಕೊಂಡು ನಾಲ್ಕನೇ ಸ್ಥಾನವನ್ನು ಅಕ್ರಮಿಸಿಕೊಂಡಿದ್ದಾರೆ. ಪಾಕಿಸ್ತಾನದ ನಾಯಕ ಬಾಬರ್ ಆಝಮ್ ಅವರು 805 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದ್ರೆ, ಪಾಕ್ ನ ವಿಕೆಟ್ ಕೀಪರ್ ಬ್ಯಾಟ್ಸ್ ಮೆನ್ ಮಹಮ್ಮದ್ ರಿಝ್ವಾನ್ 798 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಹಾಗೇ ದಕ್ಷಿಣ ಆಫ್ರಿಕಾದ ಆಡಿಯನ್ ಮಾಕ್ರ್ರಮ್ ಅವರು 729 ಅಂಕಗಳೊಂದಿಗೆ ಮೂರನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಇನ್ನು ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ 10ನೇ ಸ್ಥಾನದಲ್ಲಿದ್ರೆ, ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ 11ನೇ ಸ್ಥಾನದಲ್ಲಿದ್ದಾರೆ,
ಇನ್ನುಳಿದಂತೆ ಡೆವಿಡ್ ಮಲಾನ್, ಆರೋನ್ ಫಿಂಚ್, ಡೇವೊನ್ ಕಾನ್ವೆ, ರಸೇಯ್ ವಾನ್ ಡೆರ್ ಡುಸೆನ್, ಮಾರ್ಟಿನ್ ಗುಪ್ಟಿಲ್ ಅವರು ಕ್ರಮವಾಗಿ ನಂತರದ ಸ್ಥಾನದಲ್ಲಿದ್ದಾರೆ.
ಇನ್ನು ಬೌಲಿಂಗ್ ವಿಭಾಗದಲ್ಲಿ ಶ್ರೀಲಂಕಾದ ವನಿಂದು ಹಸರಂಗ ಅವರು 797 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ರೆ, ದಕ್ಷಿಣ ಆಫ್ರಿಕಾದ ಟಬ್ರಾಝ್ ಶಂಶಿ ಅವರು ಎರಡನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್ ನ ಆದಿಲ್ ರಶೀದ್ ಮತ್ತು ಆಸ್ಟ್ರೇಲಿಯಾದ ಆಡಮ್ ಝಂಪಾ ಅವರು ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ. ಟಾಪ್ ಟೆನ್ ಲಿಸ್ಟ್ ನಲ್ಲಿ ಟೀಮ್ ಇಂಡಿಯಾದ ಬೌಲರ್ ಗಳು ಕಾಣಿಸಿಕೊಂಡಿಲ್ಲ. ಭಾರತದ ವೇಗಿ ಭುವನೇಶ್ವರ್ ಕುಮಾರ್ 20ನೇ ಸ್ಥಾನದಲ್ಲಿದ್ರೆ, ಜಸ್ಪ್ರಿತ್ ಬೂಮ್ರಾ ಅವರು 26ನೇ ಸ್ಥಾನದಲ್ಲಿದ್ದಾರೆ. ಆಲ್ ರೌಂಡರ್ ವಿಭಾಗದಲ್ಲೂ ಟೀಮ್ ಇಂಡಿಯಾ ಆಟಗಾರರು ಅಗ್ರ ಶ್ರೇಯಾಂಕಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ.