Hasan Ali- ಕ್ಯಾಚ್ ಕೈ ಚೆಲ್ಲಿ ವಿಲನ್ ಆಗಿದ್ದ ಹಸನ್ ಆಲಿಗೆ ಶೋಯಿಬ್ ಅಖ್ತರ್ ಹೇಳಿದ್ದೇನು ..?
ಹಸನ್ ಆಲಿ.. ಪಾಕಿಸ್ತಾನ ಕ್ರಿಕೆಟ್ ತಂಡದ ವೇಗಿ. 2017ರಲ್ಲಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಪಾಕ್ ತಂಡದ ಹೀರೋ.. ಅದೇ 2021ರ ಟಿ-20 ವಿಶ್ವಕಪ್ ಟೂರ್ನಿಯ ವಿಲನ್.
ಕಾರಣ ಇಷ್ಟೇ.. ಒಂದೇ ಒಂದು ಕ್ಯಾಚ್ ಚೆಲ್ಲಿದ್ದು. ಪರಿಣಾಮ ಪಾಕ್ ತಂಡದ ಫೈನಲ್ ಕನಸು ಭಗ್ನಗೊಂಡಿತ್ತು. ಟೂರ್ನಿಯಲ್ಲಿ ಅದ್ಭುತವಾದ ಪ್ರದರ್ಶನ ನೀಡಿದ್ದ ಪಾಕಿಸ್ತಾನ ತಂಡ ಇನ್ನೆನೂ ಫೈನಲ್ ಪ್ರವೇಶಿಸುತ್ತದೆ ಅಂತ ಬಹುತೇಕರು ಅಂದುಕೊಂಡಿದ್ದರು. ಆದ್ರೆ ಆಸ್ಟ್ರೇಲಿಯಾದ ಮ್ಯಾಥ್ಯೂ ವಾಡೆ ಅವರು ಪಾಕ್ ತಂಡದ ಕೈಯಿಂದ ಗೆಲುವನ್ನು ಕಸಿದುಕೊಂಡ್ರು. ಯಾಕಂದ್ರೆ ಹಸನ್ ಆಲಿ ಅವರು ಮ್ಯಾಥ್ಯೂ ವಾಡೆ ಅವರ ಕ್ಯಾಚ್ ಅನ್ನು ಕೈಚೆಲ್ಲಿಬಿಟ್ಟಿದ್ದರು. ಬಳಿಕ ಮ್ಯಾಥ್ಯೂ ವಾಡೆ ಸತತ ಸಿಕ್ಸರ್ ಗಳನ್ನು ದಾಖಲಿಸಿ ತಂಡವನ್ನು ಫೈನಲ್ ಗೇರುವಂತೆ ಮಾಡಿದ್ದರು.
ಈ ಸೋಲಿನ ನಂತರ ಪಾಕ್ ತಂಡದ ವೇಗಿ ಹಸನ್ ಆಲಿ ಅವರನ್ನು ಖಳ ನಾಯಕನಂತೆ ಬಿಂಬಿಸಲಾಗಿತ್ತು. ಸಾಮಾಜಿಕ ಜಾಲ ತಾಣದಲ್ಲಿ ಟ್ರೋಲ್ ಆಗಿದ್ದರು. ಕ್ಯಾಚ್ ಕೈಚೆಲ್ಲಿದ ಆಘಾತದಿಂದ ಮಾನಸಿಕವಾಗಿಯೂ ಕುಗ್ಗಿ ಹೋಗಿದ್ದರು.
Hasan Ali recalls infamous dropped catch in T20 World Cup semifinal
ಇದೀಗ ಇದೇ ಮೊದಲ ಬಾರಿ ಹಸನ್ ಆಲಿ ಅವರು ಮೌನ ಮುರಿದಿದ್ದರೆ. ಇಷ್ಟು ದಿನ ಸೈಲೆಂಟ್ ಆಗಿದ್ದ ಹಸನ್ ಆಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ನನ್ನ ಕ್ರಿಕೆಟ್ ಬದುಕಿನ ಅತ್ಯಂತ ಕಠಿಣ ದಿನಗಳಾಗಿದ್ದವು. ನಾನು ಯಾವತ್ತೂ ಪಂದ್ಯಗಳನ್ನು ಲಘುವಾಗಿ ಪರಿಗಣಿಸುತ್ತಿರಲಿಲ್ಲ. ಪಾಕ್ ಪರ ಅದ್ಭುತ ಪ್ರದರ್ಶನವನ್ನು ನೀಡುವುದಕ್ಕೆ ಪ್ರಯತ್ನ ಪಡುತ್ತಿದ್ದೆ. ಆದ್ರೆ ಮಹತ್ವದ ಪಮದ್ಯದಲ್ಲಿ ಕೈಚೆಲ್ಲಿರುವ ನೋವು ನನ್ನನ್ನು ಸಾಕಷ್ಟು ಘಾಸಿಗೊಳಿಸಿತ್ತು. ಈ ಆಘಾತದಿಂದ ಕಣ್ಣೀರು ಹಾಕಿದ್ದೆ. ಎರಡು ದಿನಗಳ ಕಾಲ ನಿದ್ದೆ ಮಾಡಿರಲಿಲ್ಲ. ಆಗ ನನ್ನ ನೆರವಿಗೆ ಬಂದಿದ್ದು ನನ್ನ ಪತ್ನಿ, ಇದು ನನ್ನ ಕ್ರಿಕೆಟ್ ಬದುಕಿನ ಅತ್ಯಂತ ನೋವಿನ ಘಟನೆ ಎಂದು ಹಸನ್ ಆಲಿ ಹೇಳಿದ್ದಾರೆ.
ಇದೇ ವೇಳೆ, ಪಾಕ್ ತಂಡದ ಮಾಜಿ ವೇಗಿ ಶೋಯಿಬ್ ಅಖ್ತರ್ ಕೂಡ ನನ್ನ ಮಾನಸಿಕವಾಗಿ ಧೈರ್ಯ ತುಂಬಿದ್ರು. ನೀನು ಟೈಗರ್. ತಲೆಬಾಗಬಾರದು ಎಂದು ಧೈರ್ಯ ತುಂಬಿದ್ರು, ಹಾಗೇ ಸಾಮಾಜಿಕ ಜಾಲ ತಾಣದಲ್ಲೂ ಅಭಿಮಾನಿಗಳು ನನಗೆ ಬೆಂಬಲ ನೀಡಿದ್ರು ಹೀಗಾಗಿ ಈ ನೋವಿನಿಂದ ಹೊರಬರಲು ಸಾಧ್ಯವಾಯ್ತು ಎಂದು ಹಸನ್ ಆಲಿ ಹೇಳಿದ್ರು.