ಟೀಮ್ ಇಂಡಿಯಾದ (Team India) ಸ್ಫೋಟಕ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ (Surya Kumar yadav) ಐಸಿಸಿ ಶ್ರೇಯಾಂಕದಲ್ಲಿ (ICC Ranking) ಕುಸಿತ ಕಂಡಿದ್ದಾರೆ. ಏಷ್ಯಾಕಪ್ನಲ್ಲಿ (Asia Cup) ಹಾಂಕಾಂಗ್ ವಿರುದ್ಧ ಅದ್ಭುತ ಆಟ ಆಡಿದರೂ ಪಾಕಿಸ್ತಾನ (Pakistan) ವಿರುದ್ಧ 2 ಪಂದ್ಯಗಳಲ್ಲಿ ಮುಗ್ಗರಿಸಿರುವುದು ಸೂರ್ಯ ಪಾಲಿಗೆ ದುಬಾರಿಯಾಗಿದೆ. ಸೂರ್ಯ ಚುಟುಕು ಕ್ರಿಕೆಟ್ನಲ್ಲಿ ಅಗ್ರಸ್ಥಾನ ಅಲಂಕರಿಸುವ ಕನಸಿಗೆ ಹೊಡೆತ ಬಿದ್ದಿದೆ.
ಪಾಕಿಸ್ತಾನದ (Pakistan) ಬಾಬರ್ ಅಜಂ (Babar Azam) ಮತ್ತು ಮೊಹಮ್ಮದ್ ರಿಜ್ವಾನ್ (Mohammad Rizwan) ಮೊದಲ ಎರಡು ಸ್ಥಾನಗಳನ್ನು ಅಲಂಕರಿಸಿದ್ದಾರೆ. ಬಾಬರ್ ಏಷ್ಯಾಕಪ್ನಲ್ಲಿ ಆಡಿರುವ 3 ಪಂದ್ಯಗಳಲ್ಲಿ ಮುಗ್ಗರಿಸಿದರೂ ಶ್ರೇಯಾಂಕದಲ್ಲಿ ಬದಲಾವಣೆಯಾಗಿಲ್ಲ. ಅಷ್ಟೇ ಅಲ್ಲ ಬಾಬರ್ 18 ಅಂಕಗಳಿಂದ ಸೂರ್ಯನಿಗಿಂತ ಮುಂದಿದ್ದಾರೆ. ರಿಜ್ವಾನ್ 4 ಅಂಕಗಳಿಂದ ಮುನ್ನಡೆ ಸಾಧಿಸಿದ್ದಾರೆ.
ಟಿ20 ಬ್ಯಾಟಿಂಗ್ ಶ್ರೇಯಾಂಕ
* ಬಾಬರ್ ಆಜಂ (ಪಾಕಿಸ್ತಾನ) – 810 ರೇಟಿಂಗ್
* ಮೊಹಮ್ಮದ್ ರಿಜ್ವಾನ್ (ಪಾಕಿಸ್ತಾನ) – 796 ರೇಟಿಂಗ್
* ಸೂರ್ಯಕುಮಾರ್ ಯಾದವ್ (ಭಾರತ) – 792 ರೇಟಿಂಗ್
* ಐಡೆನ್ ಮಾರ್ಕ್ರಾಮ್ (ಸೌತ್ ಆಫ್ರಿಕಾ) – 792 ರೇಟಿಂಗ್
* ಡೇವಿಡ್ ಮಲಾನ್ (ಇಂಗ್ಲೆಂಡ್) – 731 ರೇಟಿಂಗ್
* ಆರೋನ್ ಫಿಂಚ್ (ಆಸ್ಟ್ರೇಲಿಯಾ) – 716 ರೇಟಿಂಗ್
* ಡೆವೊನ್ ಕಾನ್ವೆ (ನ್ಯೂಜಿಲೆಂಡ್) – 683 ರೇಟಿಂಗ್
* ಮೊಹಮ್ಮದ್ ವಾಸಿಂ (ಯುಎಇ) – 671 ರೇಟಿಂಗ್
* ಪಾತುಂ ನಿಸಂಕಾ (ಶ್ರೀಲಂಕಾ) – 636 ರೇಟಿಂಗ್
* ರೀಜಾ ಹೆಂಡ್ರಿಕ್ಸ್ (ಸೌತ್ ಆಫ್ರಿಕಾ) – 628 ರೇಟಿಂಗ್
ಚುಟುಕು ಕ್ರಿಕೆಟ್ ಬೌಲಿಂಗ್ ಶ್ರೇಯಾಂಕದಲ್ಲಿ ಆಸ್ಟ್ರೇಲಿಯಾದ ಜೋಶ್ ಹ್ಯಾಜಲ್ವುಡ್ 792 ಅಂಕಗಳೊಂದಿಗೆ ಮುಂದಿದ್ದಾರೆ. ದಕ್ಷಿಣ ಆಫ್ರಿಖಾದ ತಬ್ರೈಜ್ ಶಂಸಿ, ಅಫ್ಘಾನಿಸ್ತಾನದ ರಶೀದ್ ಖಾನ್ 2 ಮತ್ತು 3ನೇ ಸ್ಥಾನ ಹೊಂದಿದ್ದಾರೆ. ಆದಿಲ್ ರಶೀದ್ ಮತ್ತು ಆಡಂ ಝಂಪಾ 4 ಮತ್ತು 5ನೇ ಸ್ತಾನದಲ್ಲಿದ್ದಾರೆ. ಟೀಮ್ ಇಂಡಿಯಾದ ಭುವನೇಶ್ವರ್ ಕುಮಾರ್ 8ನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಟಿ20 ಕ್ರಿಕೆಟ್ನಲ್ಲಿ ಅಗ್ರ 10ರಲ್ಲಿರುವ ಭಾರತದ ಏಕೈಕ ಬೌಲರ್ ಭುವನೇಶ್ವರ್ ಕುಮಾರ್ ಆಗಿದ್ದಾರೆ. ಒಟ್ಟಿನಲ್ಲಿ ಐಸಿಸಿ ಶ್ರೇಯಾಂಕದಲ್ಲಿ ಮುಂದಿನ ವಾರ ಮತ್ತಷ್ಟು ಬದಲಾವಣೆ ಆಗಲಿದೆ.