ICC T-20 Wolrd Cup 2022- ಪಾಕಿಸ್ತಾನ ತಂಡಕ್ಕೆ ಮ್ಯಾಥ್ಯೂ ಹೇಡನ್ ಮೆಂಟರ್

ಆಸ್ಟ್ರೇಲಿಯಾದ ಮಾಜಿ ಆರಂಭಿಕ ಆಟಗಾರ ಮ್ಯಾಥ್ಯೂ ಹೇಡನ್ ಅವರು ಪಾಕಿಸ್ತಾನ ತಂಡವನ್ನು ಸೇರಿಕೊಂಡಿದ್ದಾರೆ.
ಹೌದು, ಮುಂಬರುವ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಮ್ಯಾಥ್ಯೂ ಹೇಡನ್ ಅವರು ಪಾಕಿಸ್ತಾನ ತಂಡಕ್ಕೆ ಮೆಂಟರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.
ಕಳೆದ ವರ್ಷ ಯುಎಇನಲ್ಲಿ ನಡೆದಿದ್ದ ಟಿ-20 ವಿಶ್ವಕಪ್ ನಲ್ಲೂ ಮ್ಯಾಥ್ಯೂ ಹೇಡನ್ ಅವರು ಪಾಕ್ ತಂಡಕ್ಕೆ ಮೆಂಟರ್ ಆಗಿದ್ದರು. ಅಲ್ಲದೆ ಪಾಕಿಸ್ತಾನ ತಂಡ ಸೆಮಿಫೈನಲ್ ಕೂಡ ಪ್ರವೇಶಿಸಿತ್ತು. ಇದೀಗ ಈ ಬಾರಿಯ ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ನಡೆಯಲಿದ್ದು, ಹೇಡನ್ ಅವರು ಮತ್ತೆ ಪಾಕ್ ತಂಡವನ್ನು ಕೂಡಿಕೊಳ್ಳಲಿದ್ದಾರೆ.
ಮ್ಯಾಥ್ಯೂ ಹೇಡನ್ ಅವರಿಗೆ ಆಸ್ಟ್ರೇಲಿಯಾದ ನೆಲದಲ್ಲಿ ಯಾವ ರೀತಿ ಆಡಬೇಕು. ಅಲ್ಲಿನ ವಾತಾವರಣಕ್ಕೆ ಯಾವ ರೀತಿ ಹೊಂದಿಕೊಳ್ಳಬೇಕು ಎಂಬುದು ಚೆನ್ನಾಗಿ ತಿಳಿದಿದೆ. ಅಲ್ಲದೆ ಅವರ ಅನುಭವ ಪಾಕ್ ತಂಡಕ್ಕೆ ವರದಾನವಾಗಲಿದೆ. ಅದರಲ್ಲೂ ಪಾಕ್ ನ ಯುವ ಆಟಗಾರರಿಗೆ ಹೇಡನ್ ಅನುಭವ ಮತ್ತು ಮಾರ್ಗದರ್ಶನ ಸ್ಪೂರ್ತಿಯನ್ನು ನೀಡಲಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ನ ಅಧ್ಯಕ್ಷ ರಮೀಜ್ ರಾಝಾ ಅವರು ಹೇಳಿದ್ದಾರೆ.
ಪಾಕ್ ತಂಡಕ್ಕೆ ಮೆಂಟರ್ ಆಗಿ ಕಾರ್ಯನಿರ್ವಹಿಸಲು ಅವಕಾಶ ನೀಡಿರುವುದಕ್ಕೆ ನಾನು ಅಬಾರಿಯಾಗಿದ್ದೇನೆ. ನಾನು ನನ್ನ ಅನುಭವಗಳನ್ನು ಪಾಕ್ ಆಟಗಾರರ ಜೊತೆ ಹಂಚಿಕೊಳ್ಳುವುದನ್ನು ಎದುರು ನೋಡುತ್ತಿದ್ದೇನೆ. ಪಾಕ್ ಆಟಗಾರರು ಆಸ್ಟ್ರೇಲಿಯಾದ ವಾತಾವರಣಕ್ಕೆ ಹೊಂದಿಕೊಳ್ಳುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಮ್ಯಾಥ್ಯು ಹೇಡನ್ ಹೇಳಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ತಂಡ ಐಸಿಸಿ ವಿಶ್ವಕಪ್ ಟೂರ್ನಿಗೆ ಮುನ್ನ ನ್ಯೂಜಿಲೆಂಡ್ ನಲ್ಲಿ ಬಾಂಗ್ಲಾದೇಶವನ್ನೊಳಗೊಂಡ ತ್ರಿಕೋನ ಸರಣಿಯನ್ನು ಆಡಲಿದೆ. ಆದಾದ ನಂತರ ಐಸಿಸಿ ಟಿ-20 ವಿಶ್ವಕಪ್ ನಲ್ಲಿ ಭಾರತ ಅಕ್ಟೋಬರ್ 23ರಂದು ಮೊದಲ ಪಂದ್ಯವನ್ನು ಆಡಲಿದೆ. ಈ ವೇಳೆ ಮ್ಯಾಥ್ಯೂ ಹೇಡನ್ ಅವರು ಪಾಕ್ ತಂಡವನ್ನು ಸೇರಿಕೊಳ್ಳಲಿದ್ದಾರೆ.