ಐಸಿಸಿ ಏಕದಿನ ಶ್ರೇಯಾಂಕದ (ICC ODI Ranking) ಮೇಲೆ ಸಾಕಷ್ಟು ಕಣ್ಣಿತ್ತು. ಏಕದಿನ ಪಂದ್ಯಗಳಲ್ಲಿ ಜಿಂಬಾಬ್ವೆ (Zimbabwe) ಮತ್ತು ವೆಸ್ಟ್ಇಂಡೀಸ್ನಲ್ಲಿ (Westindies) ಕ್ಲೀನ್ಸ್ವೀಪ್ ಸಾಧಿಸಿದ ಬಳಿ ಶ್ರೇಯಾಂಕದಲ್ಲಿ ಏರಿಳಿತ ಆಗಬಹುದು ಅನ್ನುವ ಲೆಕ್ಕಾಚಾರವಿತ್ತು. ಜಿಂಬಾಬ್ವೆ ವಿರುದ್ಧ ಆಸ್ಟ್ರೇಲಿಯಾ (Australia) ಕೊನೆಯ ಪಂದ್ಯ ಸೋತಿದ್ದು ಲೆಕ್ಕಾಚಾರಕ್ಕೆ ಮತ್ತಷ್ಟು ಇಂಬು ನೀಡಿತ್ತು. ನ್ಯೂಜಿಲೆಂಡ್ (Newzealand) ಆಸ್ಟ್ರೇಲಿಯಾ ವಿರುದ್ಧವೂ ಸೋತಿತ್ತು. ಆದರೆ ಈ ವಾರ ಐಸಿಸಿ ಏಕದಿನ ಶ್ರೇಯಾಂಕದಲ್ಲಿ (ODI) ದೊಡ್ಡ ಬದಲಾವಣೆ ಆಗಿಲ್ಲ.
ವಿಶ್ವಚಾಂಪಿಯನ್ ಇಂಗ್ಲೆಂಡ್ (England) ಅಗ್ರ ಶ್ರೇಯಾಂಕದಲ್ಲಿ ಓಟ ಮುಂದುವರೆಸಿದೆ. ನ್ಯೂಜಿಲೆಂಡ್ ಪಾಯಿಂಟ್ಗಳಲ್ಲಿ ಹಿನ್ನಡೆ ಅನುಭವಿಸಿದೆ. ಭಾರತ ಅಂಕ ಹೆಚ್ಚಿದೆ. 4ನೇ ಸ್ಥಾನದಲ್ಲಿ ಪಾಕ್ಗಿಂತ ಭಾರತ ದೊಡ್ಡ ಮುನ್ನಡೆ ಸಾಧಿಸಿದೆ.
ಏಕದಿನ ರೇಟಿಂಗ್
* ಇಂಗ್ಲೆಂಡ್- 119 (ಅಂಕ)
* ನ್ಯೂಜಿಲೆಂಡ್- 117 (ಅಂಕ)
* ಭಾರತ-111 (ಅಂಕ)
* ಪಾಕಿಸ್ತಾನ- 107 (ಅಂಕ)
* ಆಸ್ಟ್ರೇಲಿಯಾ-104 (ಅಂಕ)
ಏಕದಿನ ಬ್ಯಾಟಿಂಗ್ ಶ್ರೇಯಾಂಕ
* ಬಾಬರ್ ಅಜಂ- 890 (ಅಂಕ)
* ರಾಸಿ ವಾಂಡರ್ಡ್ಯುಸನ್- 789 (ಅಂಕ)
* ಕ್ವಿಂಟನ್ ಡಿ ಕಾಕ್- 784 (ಅಂಕ)
* ಇಮಾಮ್ ಉಲ್ ಹಕ್- 779 (ಅಂಕ)
* ವಿರಾಟ್ ಕೊಹ್ಲಿ -744 (ಅಂಕ)
ಏಕದಿನ ಬೌಲಿಂಗ್ ಶ್ರೇಯಾಂಕ
* ಟ್ರೆಂಟ್ ಬೋಲ್ಟ್- 745 (ಅಂಕ)
* ಜೋಶ್ ಹ್ಯಾಜಲ್ವುಡ್ – 725 (ಅಂಕ)
* ಮುಜೀಬ್ ಉರ್ ರೆಹಮಾನ್- 676 (ಅಂಕ)
* ಜಸ್ಪ್ರಿತ್ ಬುಮ್ರಾ -662 (ಅಂಕ)
* ಶಾಹಿನ್ ಅಫ್ರಿದಿ- 661 (ಅಂಕ)