ಐಸಿಸಿ (ICC) ಹೊಸ FTP (Future Tour Programme) ಬಿಡುಗಡೆಯಾಗಿದ್ದು, ಪ್ರತಿವರ್ಷ ಐಪಿಎಲ್ಗೆ (IPL) ಎರಡೂವರೆ ತಿಂಗಳ ಅವಕಾಶ ಸಿಕ್ಕಿದೆ. ಅದೇ ರೀತಿ ಇಂಗ್ಲೆಂಡ್ ನಡೆಸುವ ಹಂಡ್ರೆಸ್ (Hundred) ಹಾಗೂ ಬಿಬಿಎಲ್ (BBL) ಟಿ20 (T20) ಟೂರ್ನಿಗೂ ಅವಕಾಶ ಸಿಕ್ಕಿದ್ದು, ಈ ವೇಳೆ ಬೇರೆ ಅಂತರಾಷ್ಟ್ರೀಯ ಪಂದ್ಯಗಳು ನಡೆಯದ ಹಾಗೇ ಶೆಡ್ಯೂಲ್ ಅನ್ನು ಐಸಿಸಿ ರೂಪಿಸಿದೆ.
ಐಸಿಸಿ ಸದಸ್ಯತ್ವ 12 ದೇಶಗಳಿಗೆ ಈ ಶೆಡ್ಯೂಲ್ ಅನ್ವಯವಾಗಲಿದ್ದು, ಮೇ 2023ರಿಂದ 2027ರ ತನಕ ಈ ಎಫ್ಟಿಪಿಯನ್ನು ಫಾಲೋ ಮಾಡಲಾಗುವುದು. World Test Championship (WTC), ದ್ವಿಪಕ್ಷೀಯ ಸರಣಿ ಮತ್ತು ಇತರೆ ಕ್ರಿಕೆಟ್ ಟೂರ್ನಿಗಳಿಗೆ ಹೆಚ್ಚು ತೊಂದರೆಯಾಗದಂತೆ ಇದನ್ನು ರೂಪಿಸಲಾಗಿದೆ.
ಪ್ರತೀವರ್ಷ ಮಾರ್ಚ್ ಕೊನೆಯ ವಾರದಿಂದ ಜೂನ್ ಮೊದಲ ವಾರದ ತನಕ ಐಪಿಎಲ್ ಟೂರ್ನಿ ನಡೆಯುವ ಸಾಧ್ಯತೆ ಇದೆ. ಕಳೆದ ಎಫ್ಟಿಪಿಗಿಂತ 2 ವಾರಗಳ ಹೆಚ್ಚುವರಿ ಸಮಯ ಐಪಿಎಲ್ಗೆ ಸಿಕ್ಕಿದೆ. ಐಪಿಎಲ್ನಲ್ಲಿ 10 ತಂಡಗಳು ಪಾಲ್ಗೊಳ್ಳುವುದರಿಂದ ಪಂದ್ಯಗಳ ಸಂಖ್ಯೆ ಹಾಗೂ ದಿನಗಳ ಸಂಖ್ಯೆಯೂ ಹೆಚ್ಚಿದೆ. ಹೀಗಾಗಿ ಮುಂದಿನ ವರ್ಷಗಳಿಂದ ಹೆಚ್ಚ ಸಮಯವನ್ನು ಐಪಿಎಲ್ಗೆ ನೀಡಲಾಗಿದೆ. ಬಿಬಿಎಲ್ ಮತ್ತು ಹಂಡ್ರೆಡ್ ಟೂರ್ನಿಗೂ ಅವಕಾಶ ನೀಡಿದ್ದರೂ, ಈ ವೇಳೆ ಎಲ್ಲಾ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ನಿಲ್ಲುವುದಿಲ್ಲ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಭಾಗವಹಿಸುವ ಟೂರ್ನಿಯನ್ನು ಬೇರೆ ಬೇರೆ ರೀತಿಯಲ್ಲಿ ಶೆಡ್ಯೂಲ್ ಮಾಡಲಾಗುತ್ತದೆ. ಕಳೆದ ಬಾರಿ ಈ ಟೂರ್ನಿಗಳ ವೇಳೆ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳು ಅಂತರಾಷ್ಟ್ರೀಯ ಪಂದ್ಯಗಳನ್ನು ಕೂಡ ಆಡಿದ್ದವು.
2023ರ ಶೆಡ್ಯೂಲ್ ಕೊಂಚ ಗೊಂದಲವಾಗಲಿದೆ. ಯಾಕಂದರೆ ಮುಂದಿನ ವರ್ಷ ಭಾರತದಲ್ಲಿ ಏಕದಿನ ವಿಶ್ವಕಪ್ ನಡೆಯಲಿದೆ. ಹೀಗಾಗಿ ಆಯಾ ಬೋರ್ಡ್ಗಳು ಮುಂದಿನ ನಿರ್ಧಾರಗಳನ್ನು ಮಾಡಲು ಅನುಮತಿ ನೀಡಲಾಗಿದೆ. ಆದರೆ ವೆಸ್ಟ್ಇಂಡೀಸ್ ಆತಿಥ್ಯ ನೀಡುವ ಕೆರಿಬಿಯನ್ ಪ್ರೀಮಿಯರ್ ಲೀಗ್ಗೆ ಈ ಎಫ್ಟಿಪಿಯಲ್ಲಿ ವಿಶೇಷ ವಿಂಡೋ ನೀಡಲಾಗಿಲ್ಲ. ಪಾಕಿಸ್ತಾನ ಸೂಪರ್ ಲೀಗ್ಗೂ ವಿಶೇಷ ಮಾನ್ಯತೆ ನೀಡಲು ಸಾಧ್ಯವಾಗಿಲ್ಲ. ಒಟ್ಟಿನಲ್ಲಿ ಮೂರು ಪ್ರಮುಖ ಟಿ20 ಲೀಗ್ಗಳಿಗೆ ಐಸಿಸಿ ವಿಶೇಷ ಸ್ಥಾನಮಾನ ಕೊಟ್ಟು ಅದರ ಆತಿಥ್ಯಕ್ಕೆ ಯೋಜನೆಗಳನ್ನು ರೂಪಿಸಿದೆ.
ICC FTP ಐಪಿಎಲ್ಗೆ ಎರಡೂವರೆ ತಿಂಗಳ ಗ್ಯಾಪ್