ಕ್ರಿಕೆಟ್ ಲೋಕದಲ್ಲಿ ಇತ್ತೀಚೆಗೆ ಅಂತರಾಷ್ಟ್ರೀಯ ಸರಣಿಗಳಿಗಿಂತ ಫ್ರಾಂಚೈಸಿ ಕ್ರಿಕೆಟ್ಗಳದ್ದೇ (Franchise Cricket) ಭರಾಟೆ ಜೋರಾಗಿದೆ. ಪ್ರೇಕ್ಷಕರಿಗೆ ಮಜಾ ನೀಡುವ ಈ ಟೂರ್ನಿಗಳು ಯಶಸ್ಸು ಕೂಡ ಕಂಡಿವೆ. ಜೊತೆಗೆ ಸ್ಟಾರ್ ಆಟಗಾರರೆಲ್ಲಾ ಒಂದೇ ತಂಡದಲ್ಲಿ ಅಥವಾ ಬೇರೆ ತಂಡಗಳಲ್ಲಿ ಇರುವುದು ಕೂಡ ಇದರ ಆಕರ್ಷಣೆಯನ್ನು ಹೆಚ್ಚಿಸಿದೆ.
ಐಸಿಸಿಯ (ICC) ಸದಸ್ಯ ರಾಷ್ಟ್ರಗಳ ಪೈಕಿ ಬಹುತೇಕ ದೇಶಗಳು ಚುಟುಕು ಕ್ರಿಕೆಟ್ ಲೀಗ್ ಆರಂಭಿಸಿವೆ. ಇದು ಆಯಾ ಬೋರ್ಡ್ಗಳಿಗೆ ಆದಾಯವನ್ನು ತಂದು ಕೊಡುತ್ತಿದೆ. ಲೀಗ್ ಕ್ರಿಕೆಟ್ನ ಹೊಸ ಸಂಸ್ಕೃತಿಯಿಂದ ಐಸಿಸಿಗೆ ತಲೆನೋವು ಶುರುವಾಗಿದೆ. ಆಟಗಾರರು ಮಾತ್ರವಲ್ಲ, ಬೋರ್ಡ್ಗಳು ಕೂಡ ಲೀಗ್ ಟೂರ್ನಿಗಾಗಿ ಅಂತರಾಷ್ಟ್ರೀಯ ಶೆಡ್ಯೂಲ್ ಅನ್ನು ಬದಲಿಸುತ್ತಿವೆ. ಇದಕ್ಕೆ ಅವಕಾಶ ಸಿಕ್ಕಿಲ್ಲ ಅಂದರೆ ಟೂರ್ನಿಯನ್ನೇ ಕ್ಯಾನ್ಸಲ್ ಮಾಡುತ್ತಿವೆ.
ಲೀಗ್ ಭರಾಟೆ
- ಸೌತ್ ಆಫ್ರಿಕನ್ ಟಿ20 – ಜನವರಿ
- ಯಎಇ ಟಿ20 ಲೀಗ್- ಜನವರಿ
- ಬಿಗ್ಬ್ಯಾಷ್ ಲೀಗ್- ಜನವರಿ
- ಬಾಂಗ್ಲಾದೇಶ ಪ್ರೀಮಿಯರ್ ಲೀಗ್- ಫೆಬ್ರವರಿ
- ಪಾಕಿಸ್ತಾನ್ ಸೂಪರ್ ಲೀಗ್ (PSL) – ಫೆಬ್ರವರಿ- ಮಾರ್ಚ್
- ಇಂಡಿಯನ್ ಪ್ರಿಮೀಯರ್ ಲೀಗ್ (IPL) – ಮಾರ್ಚ್- ಮೇ
- ದಿ ಹಂಡ್ರೆಡ್-ಜೂನ್- ಜುಲೈ
- ಕೆರಿಬಿಯನ್ ಪ್ರೀಮಿಯರ್ ಲೀಗ್- ಆಗಸ್ಟ್
ಸದ್ಯ 8 ಲೀಗ್ಗಳು ನಡೆಯುತ್ತಿವೆ. ಸೌತ್ ಆಫ್ರಿಕನ್ ಟಿ20, ಯುಎಇ ಟಿ20 ಮತ್ತು ಬಿಗ್ಬ್ಯಾಷ್ ಒಂದೇ ಅವಧಿಯಲ್ಲಿ ನಡೆಯುತ್ತವೆ. ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಫೆಬ್ರವರಿಯಲ್ಲಿ ನಡೆದರೆ, ಮಾರ್ಚ್ ಏಪ್ರಿಲ್ನಲ್ಲಿ ಪಿಎಎಸ್ಎಲ್ ನಡೆಯುತ್ತದೆ. ಆಮೇಲೆ ಐಪಿಎಲ್, ಹಡ್ರೆಡ್ ಕೊನೆಯಲ್ಲಿ ಕೆರಿಬಿಯನ್ ಪ್ರೀಮಿಯರ್ ಲೀಗ್ ಹೀಗೆ ಎಲ್ಲವೂ ಬೆನ್ನುಬೆನ್ನಿಗೆ ನಡೆಯುತ್ತದೆ.
ಈ ಲೀಗ್ಗಳಿಂದ ಅಂತರಾಷ್ಟ್ರೀಯ ಪಂದ್ಯಗಳಿಗೆ ಜನ ಬರುತ್ತಿರುವುದು ಕಡಿಮೆ ಆಗಿದೆ. ಅದೇ ರೀತಿ ಆಟಗಾರರು ಕೂಡ ದುಡ್ಡು ಸಂಪಾದನೆಗೆ ಮಾರ್ಗವಾಗಿರುವ ಲೀಗ್ಗಳತ್ತ ಮುಖ ಮಾಡಿರುವುದು ಅಂತರಾಷ್ಟ್ರೀಯ ಪಂದ್ಯಗಳ ಆಕರ್ಷಣೆ ಕಳೆದುಕೊಳ್ಳುವಂತೆ ಮಾಡಿದೆ. ಕ್ರಿಕೆಟ್ನ ಹೊಸ ಅವತಾರದಿಂದ ಬೋರ್ಡ್ಗಳಿಗೆ ಲಾಭವಿದೆ ಅನ್ನುವುದು ಎಷ್ಟು ಸತ್ಯವಾಗಿದೆಯೋ, ದ್ವಿಪಕ್ಷೀಯ ಹೋರಾಟಗಳು ಮಹತ್ವ ಕಳೆದುಕೊಳ್ಳುತ್ತಿವೆ ಅನ್ನುವುದು ಅಷ್ಟೇ ಸತ್ಯ.
Cricket League – ಹೆಚ್ಚುತ್ತಿದೆ ಲೀಗ್ ಭರಾಟೆ