ವಿಶ್ವದ ನಂಬರ್ ಒನ್ ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್ ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಯಾವುದೇ ಸಂದರ್ಭದಲ್ಲೂ ಕರೋನಾ ಲಸಿಕೆ ಪಡೆಯುವುದಿಲ್ಲ ಎಂದು ಹೇಳಿದ್ದಾರೆ.
ತಮ್ಮ ನಿರ್ಧಾರಕ್ಕೆ ಸಾಧ್ಯವಿರುವ ಯಾವುದೇ ಬೆಲೆ ನೀಡಲು ಸಿದ್ಧರಾಗಿದ್ದಾರೆ. ಮುಂದೆ ನಡೆಯಲಿರುವ ಯಾವುದೇ ಟೆನಿಸ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡದಿದ್ದರೂ ಲಸಿಕೆ ಹಾಕಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
“ನಾನು ಲಸಿಕೆಯನ್ನು ವಿರೋಧಿಸುವುದಿಲ್ಲ, ಆದರೆ ಅದನ್ನು ಪಡೆಯಬೇಕೆ ಅಥವಾ ಬೇಡವೇ ಎಂಬ ನಿರ್ಧಾರವು ವೈಯಕ್ತಿಕವಾಗಿದ್ದು, ಅದಕ್ಕೆ ಒತ್ತಡ ಹೇರಬಾರದು. ವಿಂಬಲ್ಡನ್ ಮತ್ತು ಫ್ರೆಂಚ್ ಓಪನ್ನಂತಹ ಪಂದ್ಯಾವಳಿಗಳಲ್ಲಿ ಲಸಿಕೆ ಪಡೆಯದಿರುವ ವೆಚ್ಚವನ್ನು ನಾನು ತೆರಲು ಸಿದ್ಧನಿದ್ದೇನೆ” ಎಂದಿದ್ದಾರೆ.
“ನನ್ನ ನಿರ್ಧಾರ ನನ್ನ ತತ್ವಗಳಿಗೆ ಸಂಬಂಧಿಸಿವೆ. ನನಗೆ ಯಾವುದೇ ಪ್ರಶಸ್ತಿಗಿಂತ ನನ್ನ ದೇಹ ಮುಖ್ಯ. ನಾನು ಲಸಿಕೆಗೆ ಎಂದಿಗೂ ವಿರುದ್ಧವಾಗಿಲ್ಲ, ಆದರೆ ನಿಮ್ಮ ದೇಹಕ್ಕೆ ಏನನ್ನಾದರೂ ಹಾಕಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುವ ಸ್ವಾತಂತ್ರ್ಯವನ್ನು ನಾನು ಬೆಂಬಲಿಸುತ್ತೇನೆ” ಎಂದು ಜೋಕೊ ಹೇಳಿದ್ದಾರೆ.
ಜೊಕೊವಿಚ್ ಇಲ್ಲಿಯವರೆಗೆ 20 ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಈ ವರ್ಷದ ಆಸ್ಟ್ರೇಲಿಯನ್ ಓಪನ್ಗೆ ಮೊದಲು, ಅವರು ರಾಫೆಲ್ ನಡಾಲ್ ಮತ್ತು ರೋಜರ್ ಫೆಡರರ್ ಅವರೊಂದಿಗೆ ಅತಿ ಹೆಚ್ಚು ಗ್ರ್ಯಾಂಡ್ ಸ್ಲ್ಯಾಮ್ಗಳನ್ನು ಗೆದ್ದ ವಿಷಯದಲ್ಲಿ ಅಗ್ರಸ್ಥಾನದಲ್ಲಿದ್ದರು. ಇದೀಗ ರಾಫೆಲ್ ನಡಾಲ್ 21 ಗ್ರ್ಯಾಂಡ್ ಸ್ಲಾಮ್ಗಳೊಂದಿಗೆ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ವಿಶ್ವದ ನಂಬರ್ ಒನ್ ಟೆನಿಸ್ ಆಟಗಾರನಿಗೆ ಆಸ್ಟ್ರೇಲಿಯ ಓಪನ್ ಆಡಲು ಅವಕಾಶ ಸಿಗಲಿಲ್ಲ. ಹತ್ತನೇ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆಲ್ಲುವ ಕನಸಿನೊಂದಿಗೆ ಆಸ್ಟ್ರೇಲಿಯಾ ತಲುಪಿದ್ದರು. ಆದರೆ ಫಲಿಸಲಿಲ್ಲ.