Hylo Open- ಯುವ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ಹೈಲೋ ಬ್ಯಾಡ್ಮಿಂಟನ್ ಟೂರ್ನಿಯ ಮೊದಲ ಸುತ್ತಿನಲ್ಲೆ ಸೋತು ಆಘಾತ ಅನುಭವಿಸಿದ್ದಾರೆ.
ಜರ್ಮಿನಯಲ್ಲಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಏಳನೆ ಶ್ರೇಯಾಂಕಿತ ಆಟಗಾರ ಲಕ್ಷ್ಯ ಸೇನ್ ಹಾಂಗ್ ಕಾಂಗ್ ನ ಲಾಂಗ್ ಆಂಗಸ್ ವಿರುದ್ಧ 27 ನಿಮಿಷಗಳ ಸೆಣಸಾಡಿ 21-12, 21-5 ಅಂಕಗಳಿಂದ ಸೋಲು ಕಂಡರು.
ಲಕ್ಷ್ಯ ಸೇನ್ ಸಂಪೂರ್ಣ ಲಯ ಕಳೆದುಕೊಂಡವಂರಂತೆ ಕಾಣುತ್ತಿದ್ದರು. ಕಾಮನ್ ವೆಲ್ತ್ ಚಾಂಪಿಯನ್ ಆಗಿರುವ ಲಕ್ಷ್ಯ ಸೇನ್ ಆರಂಭದಲ್ಲಿ 2-2 ಸಮಬಲದ ಹೋರಾಟ ನೀಡಿದರು.
ಎರಡನೆ ಸುತ್ತಿನಲ್ಲಿ ಸೇನ್ ನೇರವಾಗಿ ಎದುರಾಳಿಗೆ 9 ಅಂಕ ಬಿಟ್ಟುಕೊಟ್ಟರು.
ಇನ್ನು ಮಿಶ್ರ ಡಬಲ್ಸ್ ವಿಭಾಗದಲ್ಲಿ ಭಾರತದ ಇಶಾನ್ ಭಟನಗರ್ ಮತ್ತು ತನಿಶಾ ಕ್ರಾಸ್ಟೊ 13-21, 12-21 ಅಂಕಗಳಿಂದ ಸುಲಭವಾಗಿ ಚೀನಾದ ಫೆಂಗ್ ಹಾಗೂ ಹುಹಾಂಗ್ ಡಾಂಗ್ ಪಿಂಗ್ ಜೋಡಿಗೆ ಮಣಿದರು.
ಕಿದಂಬಿ ಶ್ರೀಕಾಂತ್, ಸಮೀರ್ ವರ್ಮಾ, ಎಚ್.ಪ್ರಣಯ್, ಸೈನಾ ನೆಹ್ವಾಲ್, ಮಾಳ್ವಿಕಾ ಬಾನಸೂದ್, ಫ್ರೆಂಚ್ ಓಪನ್ ಚಾಂಪಿಯನ್ ಸಾತ್ವಿಕ್ ಹಾಗೂ ಚಿರಾಗ್ ಜೋಡಿ ಈ ಟೂರ್ನಿಯಲ್ಲಿ ಸ್ಪರ್ಧಿಸಲಿದ್ದಾರೆ.