T20 World Cup : ಅಫ್ಘಾನಿಸ್ತಾನ ವಿರುದ್ಧದ ಮಹತ್ವದ ಪಂದ್ಯಕ್ಕೂ ಮುನ್ನ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ತಂಡ ಗಾಯದ ಸಮಸ್ಯೆಗೆ ಗುರಿಯಾಗಿದೆ.
ತಂಡದ ನಾಯಕ ಆರೋನ್ ಫಿಂಚ್ ಸೇರಿದಂತೆ ಪ್ರಮುಖ ಮೂರು ಆಟಗಾರರು ಗಾಯದ ಸಮಸ್ಯೆ ಎದುರಿಸುತ್ತಿದ್ದಾರೆ. ಶುಕ್ರವಾರ ಅಫ್ಘಾನಿಸ್ತಾನ ವಿರುದ್ಧದ ಪಂದ್ಯ ಆತಿಥೇಯರಿಗೆ ಮಹತ್ವದ ಪಂದ್ಯವಾಗಿದೆ.
ಮೊನ್ನೆ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಆಲ್ರೌಂಡರ್ ಮಾರ್ಕಸ್ ಸ್ಟೋಯ್ನಿಸ್, ನಾಯಕ ಫಿಂಚ್ ಹಾಗೂ ಟಿಮ್ ಡೇವಿಡ್ ಹ್ಯಾಮ್ ಸ್ಟ್ರಿಂಗ್ ಇಂಜುರಿಗೆ ಗುರಿಯಾದರು.
ಆ ಪಂದ್ಯದಲ್ಲಿ ಟಿಮ್ ಡೇವಿಡ್ ಹಾಗೂ ಸ್ಟೋಯ್ನಿಸ್ ಫೀಲ್ಡಿಂಗ್ಗೆ ಇಳಿಯಲಿಲ್ಲ.ಫಿಂಚ್ ಅವರನ್ನು ಸ್ಕ್ಯಾನಿಂಗ್ ಒಳಪಡಿಸಲಾಗಿದೆ. ಒಂದು ವೇಳೆ ನಾಯಕ ಫಿಂಚ್ ಅಲಭ್ಯರಾದರೆ ಮ್ಯಾಥೀವ್ ವೇಡ್ ತಂಡವನ್ನು ಮುನ್ನಡೆಸಲಿದ್ದಾರೆ. ಓಪನರ್ರಾಗಿ ಕ್ಯಾಮರಾನ್ ಗ್ರೀನ್ ಕಣಕ್ಕಿಳಿಯಲಿದ್ದಾರೆ ಎಂದು ತಿಳಿದು ಬಂದಿದೆ.
ಆಫ್ಘಾನ್ ವಿರುದ್ಧ ಗೆದ್ದರೆ ಆಸ್ಟ್ರೇಲಿಯಾ ಸೆಮಿಫೈನಲ್ಗೆ ಅರ್ಹತೆ ಪಡೆಯಲಿದೆ.ನೆಟ್ ರನ್ ರೇಟ್ ಆಸ್ಟ್ರೇಲಿಯಾ ತಂಡದ ಸೆಮಿ ಹಾದಿಯನ್ನು ನಿರ್ಧರಿಸಲಿದೆ. ಐರ್ಲೆಂಡ್ ವಿರುದ್ಧದ ಗೆಲುವಿನ ನಂತರ -0.304 ಅಂಕ ಏರಿಕೆ ಕಂಡಿದೆ.
ಇಂಗ್ಲೆಂಡ್ 0.239 ಮತ್ತು ನ್ಯೂಜಿಲೆಂಡ್ 2.333 ನೆಟ್ ರನ್ ರೇಟ್ ಹೊಂದಿದೆ. ನಾಲ್ಕು ಪಂದ್ಯಗಳ ನಂತರ ಎಲ್ಲಾ ತಂಡಗಳು ತಲಾ 5 ಅಂಕಗಳನ್ನು ಪಡೆದಿವೆ.