ಐಪಿಎಲ್ 2022 ರ ಐದನೇ ಲೀಗ್ ಪಂದ್ಯದಲ್ಲಿ ರಾಜಸ್ಥಾನ ವಿರುದ್ಧ ಹೈದರಾಬಾದ್ ಎರಡನೇ ಇನ್ನಿಂಗ್ಸ್ನಲ್ಲಿ ಕಳಪೆ ಆರಂಭವನ್ನು ಕಂಡಿದೆ. ಈ ಪಂದ್ಯದಲ್ಲಿ ರಾಜಸ್ಥಾನ ತಂಡ ಅಮೋಘ ಬ್ಯಾಟಿಂಗ್ ಪ್ರದರ್ಶನದ ಬಲದಿಂದ 20 ಓವರ್ಗಳಲ್ಲಿ 6 ವಿಕೆಟ್ಗೆ 210 ರನ್ಗಳ ಬೃಹತ್ ಮೊತ್ತ ಗಳಿಸಿತು. ಹೈದರಾಬಾದ್ ಗೆಲುವಿಗೆ 211 ರನ್ ಗಳ ಗುರಿ ನೀಡಿತ್ತು. ಆದರೆ ತಂಡದ ಬ್ಯಾಟ್ಸ್ ಮನ್ ಗಳು ಕಳಪೆ ಪ್ರದರ್ಶನ ನೀಡಿದರು. ಈ ತಂಡವು ಪವರ್ ಪ್ಲೇ ಅಂದರೆ ಮೊದಲ ಆರು ಓವರ್ಗಳಲ್ಲಿ 14 ರನ್ಗಳಿಗೆ ತನ್ನ 3 ವಿಕೆಟ್ಗಳನ್ನು ಕಳೆದುಕೊಂಡಿತು. ಪವರ್ ಪ್ಲೇನಲ್ಲಿ ಹೈದರಾಬಾದ್ನ ಈ ಪ್ರದರ್ಶನ ತಂಡವು ಐಪಿಎಲ್ ಇತಿಹಾಸದಲ್ಲಿ ಇದುವರೆಗಿನ ಪವರ್ಪ್ಲೇನಲ್ಲಿ ಅತ್ಯಂತ ಕಳಪೆ ಪ್ರದರ್ಶನವಾಗಿದೆ.
ಐಪಿಎಲ್ 2022 ರಲ್ಲಿ ರಾಜಸ್ಥಾನ ವಿರುದ್ಧದ ಪವರ್ಪ್ಲೇಯಲ್ಲಿ ಹೈದರಾಬಾದ್ 14 ರನ್ಗಳಿಗೆ ಮೂರು ವಿಕೆಟ್ಗಳನ್ನು ಕಳೆದುಕೊಂಡಿತು. ಮತ್ತು ಇದು ಲೀಗ್ನ ಇತಿಹಾಸದಲ್ಲಿ ಪವರ್ಪ್ಲೇನಲ್ಲಿ ಅತ್ಯಂತ ಕೆಟ್ಟ ಪ್ರದರ್ಶನ. ಇದಕ್ಕೂ ಮುನ್ನ ಐಪಿಎಲ್ನ ಪವರ್ಪ್ಲೇಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ ದಾಖಲೆ ರಾಜಸ್ಥಾನ್ ರಾಯಲ್ಸ್ ಹೆಸರಿನಲ್ಲಿತ್ತು. 2009 ರಲ್ಲಿ RCB ವಿರುದ್ಧದ ಪವರ್ಪ್ಲೇಯಲ್ಲಿ ರಾಜಸ್ಥಾನ ತಂಡ 14 ರನ್ಗಳಿಗೆ ಎರಡು ವಿಕೆಟ್ಗಳನ್ನು ಕಳೆದುಕೊಂಡಿತು. ಆದರೆ ಈಗ ಹೈದರಾಬಾದ್ ರಾಜಸ್ಥಾನವನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೆ ಬಂದಿದೆ.
ರಾಜಸ್ಥಾನ ವಿರುದ್ಧದ ಈ ಪಂದ್ಯದಲ್ಲಿ ಹೈದರಾಬಾದ್ ಕೇವಲ 9 ರನ್ಗಳಿಗೆ ಮೊದಲ ಮೂರು ವಿಕೆಟ್ಗಳನ್ನು ಕಳೆದುಕೊಂಡಿತ್ತು. ಆದಾಗ್ಯೂ, ಪವರ್ಪ್ಲೇ ಅಂತ್ಯದ ವೇಳೆಗೆ ಈ ತಂಡದ ಸ್ಕೋರ್ 14 ರನ್ಗಳಿಗೆ ತಲುಪಿತು. ಪವರ್ಪ್ಲೇಯಲ್ಲಿ ನಾಯಕ ಕೇನ್ ವಿಲಿಯಮ್ಸನ್ 2 ರನ್ ಗಳಿಸಿದ್ದಾಗ ಪ್ರಸಿದ್ಧ ಕೃಷ್ಣ ಅವರಿಗೆ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ರಾಹುಲ್ ತ್ರಿಪಾಠಿ ಅವರನ್ನು ಕೃಷ್ಣ ಖಾತೆ ತೆರೆಯುವ ಮುನ್ನವೇ ಪೆವಿಲಿಯನ್ ಗೆ ಅಟ್ಟಿದರು. ನಿಕೋಲಸ್ ಪೊರನ್ ಅವರಿಗೆ ಅನುಭವಿ ವೇಗಿ ಟ್ರೆಂಟ್ ಬೌಲ್ಟ್ ವಂಚಿಸಿ ಎದುರಾಳಿ ತಂಡಕ್ಕೆ ಪೆಟ್ಟು ನೀಡಿದರು.