ಶನಿವಾರ ಕೊಲಂಬೊದಲ್ಲಿ ಶ್ರೀಲಂಕಾ ನಾಯಕ ದಸುನ್ ಶನಕಾ (27 ಎಸೆತಗಳಲ್ಲಿ 54) ವಿಭಿನ್ನ ಅವತಾರವನ್ನು ತೋರಿಸಿದರು. ಇವರ ವಿರಾಟರೂಪಕ್ಕೆ ಕಾಂಗರೂಗಳೂ ತಲೆಬಾಗಿ ನಮಸ್ಕರಿಸಿದ್ದಂತೆ ಕಂಡುಬಂತು.
ಇವರ ಭರ್ಜರಿ ಇನ್ನಿಂಗ್ಸ್‌ನ ನೆರವಿನಿಂದ ಶ್ರೀಲಂಕಾ ಮೂರು ಪಂದ್ಯಗಳ ಸರಣಿಯ ಕೊನೆಯ ಪಂದ್ಯದಲ್ಲಿ ನಾಲ್ಕು ವಿಕೆಟ್‌ಗಳ ಜಯ ದಾಖಲಿಸಿತು. ಕಳೆದ 15 ಟಿ-20 ಪಂದ್ಯಗಳಲ್ಲಿ ಶ್ರೀಲಂಕಾಗೆ ಇದು ಮೂರನೇ ಗೆಲುವು. ಲಂಕಾ ಇನ್ನೂ ಒಂದು ಎಸೆತ ಬಾಕಿ ಇರುವಂತೆ 177 ರನ್‌ಗಳ ಗುರಿಯನ್ನು ಬೆನ್ನಟ್ಟಿತ್ತು. ಇದಕ್ಕೂ ಮುನ್ನ ಕಾಂಗರೂ 20 ಓವರ್ ಗಳಲ್ಲಿ 176 ರನ್ ಗಳಿಸಿತ್ತು. ಟಿ20 ಅಂತಾರಾಷ್ಟ್ರೀಯ ಪಂದ್ಯದ ಕೊನೆಯ ಮೂರು ಓವರ್‌ಗಳಲ್ಲಿ ಚೇಸಿಂಗ್ ಮಾಡುವಾಗ ತಂಡವೊಂದು ಇಷ್ಟು ರನ್ ಗಳಿಸಿದ್ದು ಇದೇ ಮೊದಲು.

ಶ್ರೀಲಂಕಾ 17 ಓವರ್‌ಗಳ ನಂತರ ಶ್ರೀಲಂಕಾ ಸ್ಕೋರ್ 6 ವಿಕೆಟ್‌ಗೆ 118 ಆಗಿತ್ತು. ತಂಡದ ಗೆಲುವಿಗೆ 18 ಎಸೆತಗಳಲ್ಲಿ 59 ರನ್‌ಗಳ ಅಗತ್ಯವಿತ್ತು. ಇದರ ಹೊರತಾಗಿಯೂ ಒಂದು ಎಸೆತ ಬಾಕಿ ಇರುವಂತೆಯೇ 4 ವಿಕೆಟ್‌ಗಳಿಂದ ಪಂದ್ಯವನ್ನು ಆತಿಥೇಯ ತಂಡ ಗೆದ್ದುಕೊಂಡಿತು.

ಶನಕ ಕೊನೆಯ 13 ಎಸೆತಗಳಲ್ಲಿ 48 ರನ್
ದಾಸುನ್ ಶನಕ 25 ಎಸೆತಗಳಲ್ಲಿ 54 ರನ್ ಗಳಿಸಿದರು. ಇವರ ಇನ್ನಿಂಗ್ಸ್‌ನಲ್ಲಿ 4 ಸಿಕ್ಸರ್ ಮತ್ತು 5 ಬೌಂಡರಿಗಳು ಸೇರಿದ್ದವು. ಕೊನೆಯ 13 ಎಸೆತಗಳಲ್ಲಿ 48 ರನ್ ಗಳಿಸಿದರು. ದಸುನ್ ಶನಕ ಮೊದಲ 12 ಎಸೆತಗಳಲ್ಲಿ 6 ರನ್ ಗಳಿಸಿದ್ದರು. ಅವರು ಪಂದ್ಯದ ಶ್ರೇಷ್ಠ ಆಟಗಾರ ಆದರು. ಆಸ್ಟ್ರೇಲಿಯಾ ಪರ ಜೋಶ್ ಹ್ಯಾಜಲ್‌ವುಡ್ 18ನೇ ಓವರ್‌ನಲ್ಲಿ 22 ರನ್, ಜೇ ರಿಚರ್ಡ್ಸನ್ 19ನೇ ಓವರ್‌ನಲ್ಲಿ 18 ರನ್ ಮತ್ತು ಕೇನ್ ರಿಚರ್ಡ್ಸನ್ 20ನೇ ಓವರ್‌ನಲ್ಲಿ 19 ರನ್ ಗಳಿಸಿದರು.

ಆಸ್ಟ್ರೇಲಿಯಕ್ಕೆ ನಾಯಕ ಆರನ್ ಫಿಂಚ್ ಮತ್ತು ಡೇವಿಡ್ ವಾರ್ನರ್ ಉತ್ತಮ ಆರಂಭ ನೀಡಿದರು. ಇವರಿಬ್ಬರ ಮೊದಲ ವಿಕೆಟ್‌ಗೆ 43 ರನ್‌ಗಳ ಜೊತೆಯಾಟ ನೀಡಿದರು. ವಾರ್ನರ್ 39 ಮತ್ತು ಫಿಂಚ್ 29 ರನ್ ಗಳಿಸಿ ಔಟಾದರು. ಅಂತಿಮ ಪಂದ್ಯದಲ್ಲಿ ಮಾರ್ಕಸ್ ಸ್ಟೊಯಿನಿಸ್ 23 ಎಸೆತಗಳಲ್ಲಿ 38 ರನ್ ಗಳಿಸಿದರು. ಸ್ಟೀವ್ ಸ್ಮಿತ್ 27 ಎಸೆತಗಳಲ್ಲಿ 37 ರನ್ ಗಳಿಸಿದರು. ಶ್ರೀಲಂಕಾ ಪರ ಮಹಿಸ್ ತಿಕ್ಷಣ 2 ವಿಕೆಟ್ ಪಡೆದರು. ಆಸ್ಟ್ರೇಲಿಯದ ನಾಯಕ ಆ್ಯರೋನ್ ಫಿಂಚ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.