ಕಾಮನ್‌ವೆಲ್ತ್ ಗೇಮ್ಸ್‌ಗಾಗಿ ಭಾರತ ಪುರುಷರ ಹಾಕಿ ತಂಡವನ್ನು ಹಾಕಿ ಇಂಡಿಯಾ ಸೋಮವಾರ ಪ್ರಕಟಿಸಿದೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ತಂಡದ ನಾಯಕರಾಗಿದ್ದ ಮನ್‌ಪ್ರೀತ್ ಸಿಂಗ್ ಅವರನ್ನು ಮತ್ತೊಮ್ಮೆ ನಾಯಕರನ್ನಾಗಿ ಮಾಡಲಾಗಿದೆ.
ಅವರ ನಾಯಕತ್ವದಲ್ಲಿ ಭಾರತ ಹಾಕಿ ತಂಡ 41 ವರ್ಷಗಳ ಬಳಿಕ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದುಕೊಂಡಿತು. ಈ ತಂಡದಲ್ಲಿ ಟೋಕಿಯೊದ ಕಂಚಿನ ಪದಕ ವಿಜೇತ ತಂಡದ 11 ಆಟಗಾರರಿಗೆ ಸ್ಥಾನ ನೀಡಲಾಗಿದೆ. ನಾಲ್ವರು ಆಟಗಾರರನ್ನು ತಂಡದಿಂದ ಕೈಬಿಡಲಾಗಿದೆ.
ಅನುಭವಿ ಗೋಲ್‌ಕೀಪರ್‌ಗಳಾದ ಪಿಆರ್ ಶ್ರೀಜೇಶ್, ಕೃಷ್ಣ ಬಹದ್ದೂರ್ ಥಾಪಾ ಗಾಯದ ನಂತರ ತಂಡಕ್ಕೆ ಮರಳಿದ್ದಾರೆ. ಡ್ರ್ಯಾಗ್ ಫ್ಲಿಕ್ಕರ್ ರೂಪಿಂದರ್ ಪಾಲ್ ಸಿಂಗ್ ಅವರನ್ನು ಈ ತಂಡದಿಂದ ಕೈಬಿಡಲಾಗಿದೆ. ಅವರು ತಮ್ಮ ಡ್ರ್ಯಾಗ್ ಫ್ಲಿಕ್‌ನಿಂದ ವಿಶ್ವದಾದ್ಯಂತ ಗೋಲ್‌ಕೀಪರ್‌ಗಳನ್ನು ಸೋಲಿಸಿದ್ದಾರೆ. ಆದರೆ, ರೂಪಿಂದರ್ ಅವರನ್ನು ಹೊರಗಿಡಲು ಅವರ ಗಾಯವೇ ಕಾರಣ ಎನ್ನಲಾಗಿದೆ. ಏಷ್ಯಾಕಪ್‌ಗೆ ಮುನ್ನ ಅವರು ಗಾಯಗೊಂಡಿದ್ದರು. ಇದರಿಂದಾಗಿ ಅವರು ಟೂರ್ನಿಯಿಂದಲೂ ನಿರ್ಗಮಿಸಬೇಕಾಯಿತು.

ಅವರ ಸ್ಥಾನದಲ್ಲಿ ಡ್ರ್ಯಾಗ್-ಫ್ಲಿಕ್ಕರ್ ಹರ್ಮನ್‌ಪ್ರೀತ್ ಸಿಂಗ್‌ಗೆ ಅವಕಾಶ ನೀಡಲಾಗಿದೆ. ಹರ್ಮನ್‌ಪ್ರೀತ್ ಎಫ್‌ಐಎಚ್ ಪ್ರೊ ಹಾಕಿ ಲೀಗ್‌ನಲ್ಲಿ ಅತಿ ಹೆಚ್ಚು ಗೋಲು ಗಳಿಸಿದ್ದಾರೆ. ಅವರನ್ನು ತಂಡದ ಉಪನಾಯಕರನ್ನಾಗಿಯೂ ಮಾಡಲಾಗಿದೆ.
ಕಾಮನ್‌ವೆಲ್ತ್ ಗೇಮ್ಸ್ ಜುಲೈ 28 ರಿಂದ ಆಗಸ್ಟ್ 8 ರವರೆಗೆ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿದೆ. ಭಾರತ ತಂಡ ಇಂಗ್ಲೆಂಡ್, ಕೆನಡಾ, ವೇಲ್ಸ್ ಮತ್ತು ಘಾನಾ ಜೊತೆಗೆ ಪೂಲ್ ಬಿಯಲ್ಲಿ ಸ್ಥಾನ ಪಡೆದಿದೆ. ಜುಲೈ 31 ರಂದು ಘಾನಾ ವಿರುದ್ಧ ಟೀಂ ಇಂಡಿಯಾ ಅಭಿಯಾನ ಆರಂಭಿಸಲಿದೆ. 2018ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಟೀಮ್ ಇಂಡಿಯಾ ನಾಲ್ಕನೇ ಸ್ಥಾನ ಗಳಿಸಿದೆ.
CWG ನಲ್ಲಿ ಭಾರತ ಪಂದ್ಯಗಳು
ಮೊದಲನೇ ಪಂದ್ಯ: ಜುಲೈ 31, ಭಾರತ ವಿರುದ್ಧ ಘಾನಾ: ರಾತ್ರಿ 7:30.
ಎರಡನೇ ಪಂದ್ಯ: ಆಗಸ್ಟ್ 1, ಭಾರತ vs ಇಂಗ್ಲೆಂಡ್: ರಾತ್ರಿ 7:30.
ಮೂರನೇ ಪಂದ್ಯ: ಆಗಸ್ಟ್ 3, ಭಾರತ ವಿರುದ್ಧ ಕೆನಡಾ: ರಾತ್ರಿ 7:30.
ನಾಲ್ಕನೇ ಪಂದ್ಯ: ಆಗಸ್ಟ್ 4, ಭಾರತ ವಿರುದ್ಧ ವೇಲ್ಸ್: ರಾತ್ರಿ 7:30.

ಭಾರತ ತಂಡ:
ಗೋಲ್‌ಕೀಪರ್‌ಗಳು: ಪಿಆರ್ ಶ್ರೀಜೇಶ್, ಕೃಷ್ಣ ಬಹದ್ದೂರ್ ಪಾಠಕ್.
ಡಿಫೆಂಡರ್ಸ್: ವರುಣ್ ಕುಮಾರ್, ಸುರೇಂದ್ರ ಕುಮಾರ್, ಹರ್ಮನ್ಪ್ರೀತ್ ಸಿಂಗ್ (ಉಪನಾಯಕ), ಅಮಿತ್ ರೋಹಿದಾಸ್, ಜುಗ್ರಾಜ್ ಸಿಂಗ್, ಜರ್ಮನ್ ಪ್ರೀತ್ ಸಿಂಗ್.
ಮಿಡ್‌ಫೀಲ್ಡರ್‌ಗಳು: ಮನ್‌ಪ್ರೀತ್ ಸಿಂಗ್ (ನಾಯಕ), ಹಾರ್ದಿಕ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್, ಶಂಶೇರ್ ಸಿಂಗ್, ಆಕಾಶದೀಪ್ ಸಿಂಗ್, ನೀಲಕಂಠ ಶರ್ಮಾ.