ಭಾರತದ ಮಾಜಿ ನಾಯಕ ಮತ್ತು ದಿಗ್ಗಜ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ 2011 ರಲ್ಲಿ ಇದೇ ದಿನ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ್ದರು. ವಿರಾಟ್ ಸಾಮಾಜಿಕ ಜಾಲತಾಣದಲ್ಲಿದೀ ಬಗ್ಗೆ ವಿಡಿಯೋ ಹಂಚಿಕೊಂಡಿದ್ದಾರೆ. ಅವರು ತಮ್ಮ 11 ವರ್ಷಗಳಲ್ಲಿ ಆಡಿದ ಪ್ರತಿ ಟೆಸ್ಟ್ ಅನ್ನು ತಮ್ಮ ಲ್ಯಾಪ್‌ಟಾಪ್‌ನಲ್ಲಿ ಇಟ್ಟುಕೊಂಡಿದ್ದಾರೆ.
Time flies 🇮🇳#20June #TestDebut pic.twitter.com/eIktcGLg6i
— Virat Kohli (@imVkohli) June 20, 2022
ವೀಡಿಯೊದಲ್ಲಿ, 33 ವರ್ಷದ ವಿರಾಟ್ ತನ್ನ ಲ್ಯಾಪ್‌ಟಾಪ್ ಅನ್ನು ತೆರೆಯುತ್ತಾರೆ. ಮತ್ತು ಟೆಸ್ಟ್ ಎಂಬ ಫೋಲ್ಡರ್‌ನಲ್ಲಿ, ಅವರ ಪ್ರತಿಯೊಂದು ಪಂದ್ಯದ ಫೋಟೋಗಳು ತೋರಿಸುತ್ತಾರೆ. ಇದೀಗ ಕೊಹ್ಲಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿರಾಟ್ ತಮ್ಮ ಮೊದಲ ಟೆಸ್ಟ್ ಪಂದ್ಯವನ್ನು ವೆಸ್ಟ್ ಇಂಡೀಸ್ ವಿರುದ್ಧ ಆಡಿದ್ದರು.

ಇದೇ ದಿನ ಪದಾರ್ಪಣೆ ಮಾಡಿದ್ದ ಗಂಗೂಲಿ ಮತ್ತು ದ್ರಾವಿಡ್
ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಅಲ್ಲದೆ, ಸೌರವ್ ಗಂಗೂಲಿ ಮತ್ತು ರಾಹುಲ್ ದ್ರಾವಿಡ್ ಕೂಡ ಈ ದಿನ ತಮ್ಮ ಟೆಸ್ಟ್ ಗೆ ಪದಾರ್ಪಣೆ ಮಾಡಿದ್ದರು. ಸೌರವ್ ಮತ್ತು ದ್ರಾವಿಡ್ 1996 ರಲ್ಲಿ ಒಟ್ಟಿಗೆ ಟೀಮ್ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದರು.
ಪ್ರಸ್ತುತ ಮೂವರೂ ಭಾರತೀಯ ಕ್ರಿಕೆಟ್‌ಗೆ ಕೊಡುಗೆ ನೀಡುತ್ತಿದ್ದಾರೆ. ವಿರಾಟ್ ಎಲ್ಲಾ ಮೂರು ಮಾದರಿಗಳಲ್ಲಿ ಭಾರತಕ್ಕಾಗಿ ಆಡುತ್ತಿದ್ದಾರೆ. ದಿದೇ ಸಮಯದಲ್ಲಿ ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ರಾಹುಲ್ ದ್ರಾವಿಡ್ ತಂಡದ ಕೋಚ್ ಪಾತ್ರದಲ್ಲಿದ್ದಾರೆ.

ವಿರಾಟ್ ಕೊಹ್ಲಿ ಅತಿ ಹೆಚ್ಚು ಟೆಸ್ಟ್ ಜಯಗಳಿಸಿದ ಭಾರತ ತಂಡದ ನಾಯಕರಾಗಿದ್ದಾರೆ. ಕೊಹ್ಲಿ ನಾಯಕತ್ವದಲ್ಲಿ ಭಾರತ 68 ಟೆಸ್ಟ್‌ಗಳಲ್ಲಿ 40 ಪಂದ್ಯಗಳನ್ನು ಗೆದ್ದಿದೆ. ಇದೇ ಸಮಯದಲ್ಲಿ, ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ 60 ಟೆಸ್ಟ್‌ಗಳಲ್ಲಿ 27 ಅನ್ನು ಗೆದ್ದಿದೆ. ಗಂಗೂಲಿ ನಾಯಕತ್ವದಲ್ಲಿ ತಂಡ 21 ಟೆಸ್ಟ್‌ಗಳನ್ನು ಗೆದ್ದಿದೆ. ವಿರಾಟ್ ನಾಯಕತ್ವದಲ್ಲಿ ಭಾರತ ತಂಡ ಟೆಸ್ಟ್ ಶ್ರೇಯಾಂಕದಲ್ಲಿ ಅತಿ ಹೆಚ್ಚು ಕಾಲ ನಂಬರ್-1 ಸ್ಥಾನದಲ್ಲಿ ಉಳಿದಿತ್ತು. ತಂಡವು 42 ತಿಂಗಳುಗಳ ಕಾಲ ಟೆಸ್ಟ್‌ನ ಅಗ್ರ ಶ್ರೇಯಾಂಕವನ್ನು ಕಾಯ್ದುಕೊಂಡಿತ್ತು.

ಭಾರತದ ಪರ ನೂರಕ್ಕೂ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿದ 12ನೇ ಭಾರತೀಯ ಕ್ರಿಕೆಟಿಗ ವಿರಾಟ್. ಒಟ್ಟಾರೆ, ಅವರಿಗಿಂತ ಮೊದಲು ವಿಶ್ವದ 71 ಆಟಗಾರರು ಈ ಸಾಧನೆ ಮಾಡಲು ಸಮರ್ಥರಾಗಿದ್ದಾರೆ.
2019 ರಿಂದ ಕೊಹ್ಲಿ ತಮ್ಮ ಬ್ಯಾಟ್‌ನಿಂದ ಟೆಸ್ಟ್ ಶತಕವನ್ನು ಗಳಿಸಿಲ್ಲ. ಅವರು ಕೊನೆಯದಾಗಿ 23 ನವೆಂಬರ್ 2019 ರಂದು ಬಾಂಗ್ಲಾದೇಶದ ವಿರುದ್ಧ ಕೋಲ್ಕತ್ತಾದಲ್ಲಿ ಶತಕ ಗಳಿಸಿದರು.