ನಾಲ್ಕು ವಿಶ್ವಕಪ್ ಗಳ ಹೀರೋ ಯುವಿಯ ಜನ್ಮದಿನ yuvaraja singh saaksha tv
ಇಂದು ಭಾರತೀಯ ಕ್ರಿಕೆಟ್ ನ ಯುವರಾಜ. ಪಂಜಾಬ್ ಕಾ ಪುತ್ತರ್, ಸಿಕ್ಸರ್ ಕಿಂಗ್, ನಮ್ಮೆಲ್ಲರಾ ಪ್ರೀತಿಯ ಯುವಿಯ ಜನ್ಮದಿನ. ಸದ್ಯ ಕ್ರಿಕೆಟ್ ನಿಂದ ದೂರ ಇರುವ ಯುವರಾಜ್ ಸಿಂಗ್ ತಮ್ಮ 40ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಭಾರತಕ್ಕೆ ನಾಲ್ಕು ವಿಶ್ವಕಪ್ ಗೆದ್ದುಕೊಟ್ಟ ಅದ್ಭುತ ಆಟಗಾರನಿಗೆ ಕ್ರಿಕೆಟ್ ದಿಗ್ಗಜರು ಶುಭಕೋರುತ್ತಿದ್ದಾರೆ.
ಯುವರಾಜ್ ಸಿಂಗ್ 1981 ಡಿಸೆಂಬರ್ 12ರಂದು ಜನಿಸಿದ್ದು, ತಂದೆಯೇ ಅವರ ಮೊದಲ ಕೋಚ್. ತಂದೆಯಿಂದ ಕ್ರಿಕೆಟ್ ನ ಅಕ್ಷರಗಳನ್ನು ಕಲಿತ ಯುವಿಗೆ ಇಂದು ಇಡೀ ಕ್ರಿಕೆಟ್ ಜಗತ್ತು ಸಲಾಂ ಎನ್ನುತ್ತಿದೆ.
ಅಭೂತಪೂರ್ವ ಬ್ಯಾಟಿಂಗ್ ವೈಭವ, ಚಾಕಚಕ್ಯತೆಯ ಫೀಲ್ಡಿಂಗ್, ಕೆಲವೊಮ್ಮೆ ಆರನೆಯ ಪರಿಣಿತ ಬೌಲರ್ ಆಗಿ ಮಿಂಚಿ ಭರಪೂರ ಮನೋರಂಜನೆ ಕೊಟ್ಟ ಯುವಿಗೆ ಯುವಿಯೇ ಸಾಟಿ.
ಅಂದಹಾಗೆ ಯುವರಾಜ್ ಸಿಂಗ್ ಅಂದ್ರೆ ನೆನಪಾಗೋದು 2007ರ ಟಿ 20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್. ಈ ವಿಶ್ವಕಪ್ ನಲ್ಲಿ ಯುವರಾಜ್ ಆಟ ನಃ ಭೂತೋ ನಃ ಭವಿಷ್ಯತಿ. ಯಾಕಂದ್ರೆ ಈ ಟೂರ್ನಿಗಳಲ್ಲಿ ಟೀಂ ಇಂಡಿಯಾ ಚಾಂಪಿಯನ್ ಆಗಲು ಯುವಿ ಆಟವೇ ಕಾರಣ. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಹೀಗೆ ಮೂರು ವಿಭಾಗದಲ್ಲೂ ಯುವಿ ಮಿಂಚುಹರಿಸಿದ್ದರು.
ಪ್ರಾಯಶಃ ಕ್ರಿಕೆಟ್ ಜಗತ್ತಿನ ಬಹುತೇಕ ಅಭಿಮಾನಿಗಳಿಗೆ ಒಂದು ವಿಚಾರ ಗೊತ್ತಿರುವುದಿಲ್ಲ. ಅದೇನಂದರೆ ಯುವಿ ಭಾರತಕ್ಕೆ ತಂದು ಕೊಟ್ಟಿದ್ದು, 2 ವಿಶ್ವಕಪ್ ಅಲ್ಲ ನಾಲ್ಕು ವಿಶ್ವಕಪ್ ಗಳು.
ಹೌದು..! 1996ರಲ್ಲಿ ಯುವಿ ಟೀಂ ಇಂಡಿಯಾದ ಅಂಡರ್ 15 ಟೀಮ್ ನಲ್ಲಿ ಸ್ಥಾನ ಪಡೆದು ವಿಶ್ವ ಕಪ್ ಮುಡಿಗೇರಿಸಿಕೊಂಡಾಗ ಸರಣಿ ಶ್ರೇಷ್ಠರಾಗಿದ್ದರು. 2000ರಲ್ಲಿ ಅಂಡರ್ 19 ವಿಶ್ವ ಕಪ್ ಪಂದ್ಯಾವಳಿಯಲ್ಲೂ ಭಾರತ ವಿಶ್ವ ಚಾಂಪಿಯನ್ ಆದಾಗಲೂ ಮ್ಯಾನ್ ಆಫ್ ದ ಸೀರಿಸ್ ಯುವಿ ಮುಡಿಗೇರಿತ್ತು. 2007ರಲ್ಲಿ ಧೋನಿ ನೇತೃತ್ವದ ಟೀಂ ಇಂಡಿಯಾ ಟಿ-20 ವಿಶ್ವಕಪ್ ಗೆದ್ದಾಗಲೂ ಬೆಸ್ಟ್ ಪ್ಲೇಯರ್ ಆಫ್ ದಿ ಸೀರಿಸ್ ಒನ್ಸ್ ಎಗೈನ್ ಯುವಿ. 2011ರಲ್ಲಿ 28 ವರ್ಷಗಳ ಬಳಿಕ ಏಕದಿನ ವಿಶ್ವಕಪ್ ಮುಡಿಗೇರಿಸಿಕೊಂಡಾಗಲೂ ಯುವಿವೇ ಮ್ಯಾನ್ ಆಫ್ ದಿ ಸಿರೀಸ್. ಯುವರಾಜ್ ಸಿಂಗ್ ಚಾಂಪಿಯನ್ ತಂಡದಲ್ಲಿದ್ದ ಅಸಲಿ ಚಾಂಪಿಯನ್.