ಐಪಿಎಲ್ 2022 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಏಕೈಕ ಪಂದ್ಯವನ್ನು ಆಡಿರುವ ಪ್ರಶಾಂತ್ ಸೋಲಂಕಿ ಅವರು ಅತ್ಯುತ್ತಮ ಬೌಲಿಂಗ್ ಏಕನಾಮಿ ಹೊಂದಿರುವ ಬೌಲರ್ ಆಗಿದ್ದಾರೆ. ಅವರ IPL ಚೊಚ್ಚಲ ಪಂದ್ಯದಲ್ಲಿ, 18 ರನ್ಗಳನ್ನು ನೀಡಿದರು ಅಂದರೆ ಪ್ರತಿ ಓವರ್ಗೆ 4.50 ರನ್ಗಳನ್ನು ಮಾತ್ರ ನೀಡಿದರು.

ಕೋಲ್ಕತ್ತಾ ನೈಟ್ ರೈಡರ್ಸ್ನ ಸುನಿಲ್ ನರೈನ್ ಅತ್ಯುತ್ತಮ ಬೌಲಿಂಗ್ ಏಕನಾಮಿ ವಿಷಯದಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಪ್ರತಿ ಓವರ್ಗೆ ಇವರು ಕೇವಲ 5.48 ರನ್ ನೀಡುತ್ತಿದ್ದಾರೆ. ಇದುವರೆಗೆ 13 ಪಂದ್ಯಗಳಲ್ಲಿ 52 ಓವರ್ ಬೌಲಿಂಗ್ ಮಾಡಿ 285 ರನ್ ಬಿಟ್ಟುಕೊಟ್ಟಿದ್ದಾರೆ.

ಲಕ್ನೋ ಸೂಪರ್ ಜೈಂಟ್ಸ್ ವೇಗದ ಬೌಲರ್ ಮೊಹ್ಸಿನ್ ಖಾನ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಮೊಹ್ಸಿನ್ ಇದುವರೆಗೆ 7 ಪಂದ್ಯಗಳ 25 ಓವರ್ ಮಾಡಿದ್ದು 152 ರನ್ ನೀಡಿದ್ದಾರೆ. ಅಂದರೆ, ಅವರ ಬೌಲಿಂಗ್ ಏಕನಾಮಿ 6.08 ಆಗಿದೆ.

ಗುಜರಾತ್ ಟೈಟಾನ್ಸ್ನ ಯುವ ಬೌಲರ್ ಸಾಯಿ ಕಿಶೋರ್ ಕೂಡ ಈ ಪಟ್ಟಿಯ ಟಾಪ್-5 ರಲ್ಲಿ ಕಾಣಿಸಿಕೊಂಡಿದ್ದಾರೆ. ಸಾಯಿ ಕಿಶೋರ್ 2 ಪಂದ್ಯಗಳಲ್ಲಿ 6 ಓವರ್ ಮಾಡಿ 38 ರನ್ ನೀಡಿದ್ದಾರೆ. ಅವರ ಏಕನಾಮಿ 6.33 ಆಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಡೇವಿಡ್ ವಿಲ್ಲಿ ಈ ಋತುವಿನಲ್ಲಿ 6.54 ಏಕನಾಮಿ ಹೊಂದಿದ್ದಾರೆ. ಈ ಆಂಗ್ಲ ಬೌಲರ್ 11 ಓವರ್ ಗಳಲ್ಲಿ 72 ರನ್ ಮಾತ್ರ ನೀಡಿದ್ದಾರೆ. ಅತ್ಯಂತ ಬಿಗಿಯಾದ ಬೌಲಿಂಗ್ನಲ್ಲಿ ಇವರಿಗೆ ಐದನೇ ಸ್ಥಾನ.