ಐಪಿಎಲ್ 2022 ರ 54 ನೇ ಪಂದ್ಯ ಭಾನುವಾರ ಸನ್ ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಕಾದಟ ನಡೆಯಿತು. ಟಾಸ್ ಗೆದ್ದ RCB ಮೊದಲು ಬ್ಯಾಟಿಂಗ್ ಮಾಡಿ 3 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿತು. ಪ್ರತ್ಯುತ್ತರವಾಗಿ ಎಸ್‌ಆರ್‌ಎಚ್ ತಂಡ 125 ರನ್ ಗಳಿಸಲಷ್ಟೇ ಸೇರಿಸಲು ಶಕ್ತವಾಯಿತು. ಈ ಪಂದ್ಯದಲ್ಲಿ ಆರ್‌ಸಿಬಿ 67 ರನ್‌ಗಳ ಜಯ ಸಾಧಿಸಿತು. ಈ ಪಂದ್ಯದಲ್ಲಿ ಆರ್‌ಸಿಬಿ ಬೌಲರ್ ವನೇಂದು ಹಸರಂಗ 5 ವಿಕೆಟ್ ಕಬಳಿಸಿದರು.

ಇದೇ ಆವೃತ್ತಿಯಲ್ಲಿ ಇಬ್ಬರು ಬೌಲರ್ ಗಳು ಇದಕ್ಕೂ ಮೊದಲು ಈ ಸಾಧನೆ ಮಾಡಿದ್ದಾರೆ. ಕೋಲ್ಕತ್ತಾ ವಿರುದ್ಧ ಚಹಾಲ್ 40 ರನ್ ನೀಡಿ 5 ವಿಕೆಟ್ ಕಬಳಿಸಿದ್ದರು. ಗುಜರಾತ್ ಟೈಟಾನ್ಸ್ ವಿರುದ್ಧ ಸನ್ ರೈಸರ್ಸ್ ತಂಡದ ವೇಗಿ ಉಮ್ರನ್ ಮಲಿಕ್ ಸೊಗಸಾದ ದಾಳಿ ನಡೆಸಿ ಐದು ವಿಕೆಟ್ ಪಡೆದಿದ್ದರು. ಭಾನುವಾರ ನಡೆದ ಪಂದ್ಯದಲ್ಲಿ ವನಿಂದು ಹಸರಂಗ ಸಹ ಇದೇ ಸಾಧನೆ ಮಾಡಿದೆ.

ಐಪಿಎಲ್ ಪಂದ್ಯವೊಂದರಲ್ಲಿ 5 ವಿಕೆಟ್ ಪಡೆದ ಬೌಲರ್‌ಗಳು
- ಸೊಹೈಲ್ ತನ್ವೀರ್: 2008 – ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ
- ಲಕ್ಷ್ಮೀಪತಿ ಬಾಲಾಜಿ: 2008 – ಪಂಜಾಬ್ ವಿರುದ್ಧ ಕಿಂಗ್ಸ್ 11
- ಅಮಿತ್ ಮಿಶ್ರಾ: 2008- ಡೆಕ್ಕನ್ ಚಾರ್ಜರ್ಸ್ ವಿರುದ್ಧ
- ಅನಿಲ್ ಕುಂಬ್ಳೆ: 2009- ರಾಜಸ್ಥಾನ್ ರಾಯಲ್ಸ್ ವಿರುದ್ಧ
- ಲಸಿತ್ ಮಾಲಿಂಗ: 2011 – ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ
- ಹರ್ಭಜನ್ ಸಿಂಗ್: 2011 – ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ
- ಇಶಾಂತ್ ಶರ್ಮಾ: 2011- ಕೊಚ್ಚಿ ಟಸ್ಕರ್ಸ್ ವಿರುದ್ಧ
- ಮುನಾಫ್ ಪಟೇಲ್: 2011 – ಪಂಜಾಬ್ ವಿರುದ್ಧ ಕಿಂಗ್ಸ್ 11
- ರವೀಂದ್ರ ಜಡೇಜಾ: 2012 – ಡೆಕ್ಕನ್ ಚಾರ್ಜರ್ಸ್ ವಿರುದ್ಧ
- ಡಿಮಿಟ್ರಿ ಮಸ್ಕರೇನ್ಹಸ್: 2012 – ಪುಣೆ ವಾರಿಯರ್ಸ್ ವಿರುದ್ಧ
- ಸುನಿಲ್ ನರೈನ್: 2012 – ಪಂಜಾಬ್ ವಿರುದ್ಧ ಕಿಂಗ್ಸ್ 11
- ಜೇಮ್ಸ್ ಫಾಕ್ನರ್: 2013 – ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ
- ಜಯದೇವ್ ಉನದ್ಕತ್: 2013- ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ
- ಜೇಮ್ಸ್ ಫಾಕ್ನರ್: 2013 – ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ
- ಆಡಮ್ ಝಂಪಾ: 2016 – ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ
- ಆಂಡ್ರ್ಯೂ ಟೈ: 2017- ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ವಿರುದ್ಧ
- ಭುವನೇಶ್ವರ್ ಕುಮಾರ್: 2017- ಪಂಜಾಬ್ ವಿರುದ್ಧ ಕಿಂಗ್ಸ್ 11
- ಜಯದೇವ್ ಉನದ್ಕತ್: 2017- ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ
- ಅಂಕಿತ್ ರಜಪೂತ್: 2018- ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ
- ಅಲ್ಜಾರಿ ಜೋಸೆಫ್: 2019 – ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ
- ವರುಣ್ ಚಕ್ರವರ್ತಿ: 2020- ದೆಹಲಿ ಕ್ಯಾಪಿಟಲ್ಸ್ ವಿರುದ್ಧ
- ಹರ್ಷಲ್ ಪಟೇಲ್: 2021- ಮುಂಬೈ ಇಂಡಿಯನ್ಸ್ ವಿರುದ್ಧ
- ಆಂಡ್ರೆ ರಸೆಲ್: 2021- ಮುಂಬೈ ಇಂಡಿಯನ್ಸ್ ವಿರುದ್ಧ
- ಅರ್ಷದೀಪ್ ಸಿಂಗ್: 2021- ರಾಜಸ್ಥಾನ್ ರಾಯಲ್ಸ್ ವಿರುದ್ಧ
- ಯುಜ್ವೇಂದ್ರ ಚಹಾಲ್: 2022 – ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ
- ಉಮ್ರಾನ್ ಮಲಿಕ್: 2022- ಗುಜರಾತ್ ಟೈಟಾನ್ಸ್ ವಿರುದ್ಧ
- ವನೇಂದು ಹಸರಂಗ: 2022 – ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ