15ನೇ ಆವೃತ್ತಿಯ ಐಪಿಎಲ್ ನಲ್ಲಿ ಧೋನಿ ಹೊರತುಪಡಿಸಿ ಇತರ ಇಬ್ಬರು ಫಿನಿಶರ್‌ಗಳ ಬಗ್ಗೆ ಹೆಚ್ಚು ಚರ್ಚಿಸಲಾಗುತ್ತಿದೆ. ಈ ಇಬ್ಬರೂ ಆಟಗಾರರು ತಮ್ಮ ಫಿನಿಶಿಂಗ್ ಕೌಶಲ್ಯದಿಂದ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಇದರಲ್ಲಿ ಒಬ್ಬ ಗುಜರಾತ್ ಪರ ಕಣಕ್ಕೆ ಇಳಿದರೆ ಇನ್ನೊಬ್ಬ ಆರ್ ಸಿಬಿ ಪರ ಬ್ಯಾಟ್ ಮಾಡುತ್ತಾರೆ.
ಹೌದು ಇವರೇ ಗುಜರಾತ್ ಟೈಟನ್ಸ್ ನ ರಾಹುಲ್ ತೆವಾಟಿಯಾ ಮತ್ತು ಬೆಂಗಳೂರಿನ ದಿನೇಶ್ ಕಾರ್ತಿಕ್. ಈ ಋತುವಿನಲ್ಲಿ ಗುಜರಾತ್ ನ ಯಶಸ್ಸಿಗೆ ರಾಹುಲ್ ಸಾಕಷ್ಟು ಕೊಡುಗೆ ನೀಡಿದ್ದಾರೆ. ಹಲವು ರೋಚಕ ಪಂದ್ಯಗಳಲ್ಲಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದಾರೆ. ದಿನೇಶ್ ಕಾರ್ತಿಕ್ ಕೂಡ ತಮ್ಮ ಫಿನಿಶಿಂಗ್ ಕೌಶಲ್ಯದಿಂದ ಟೀಮ್ ಇಂಡಿಯಾದ ಬಾಗಿಲು ಬಡೆಯುತ್ತಿದ್ದಾರೆ.
ಈ ಋತುವಿನಲ್ಲಿ ದಿನೇಶ್ ಕಾರ್ತಿಕ್ ಅವರ ಪ್ರದರ್ಶನ ಉತ್ತಮವಾಗಿದೆ. ಅವರು ಇಲ್ಲಿಯವರೆಗೆ 11 ಪಂದ್ಯಗಳನ್ನು ಆಡಿದ್ದು. ಈ ಸಮಯದಲ್ಲಿ, ಅವರು 7 ಬಾರಿ ಅಜೇಯರಾಗಿ ಉಳಿದಿದ್ದಾರೆ. ಮತ್ತು 61 ರ ಸರಾಸರಿಯಲ್ಲಿ ಮತ್ತು 189.15 ರ ಸ್ಟ್ರೈಕ್ ರೇಟ್‌ನಲ್ಲಿ 244 ರನ್ ಗಳಿಸಿದ್ದಾರೆ. ಒಂದು ಬಾರಿ ಔಟಾಗದೆ 66 ರನ್ ಬಾರಿಸಿರುವುದು ಅವರ ಗರಿಷ್ಠ ಸ್ಕೋರ್ ಆಗಿದೆ. ಇದಲ್ಲದೆ, ಈ ಋತುವಿನಲ್ಲಿ ಅವರು ಒಟ್ಟು 129 ಎಸೆತಗಳನ್ನು ಎದುರಿಸಿದ್ದು ಮತ್ತು 20 ಬೌಂಡರಿ ಮತ್ತು 17 ಸಿಕ್ಸರ್ ಗಳನ್ನು ಬಾರಿಸಿದ್ದಾರೆ. ಕಾರ್ತಿಕ್ ತನ್ನ 244 ರನ್‌ಗಳಲ್ಲಿ 182 ರನ್ ಗಳಿಸಿದ್ದು ಕೇವಲ ಬೌಂಡರಿ ಮತ್ತು ಸಿಕ್ಸರ್‌ಗಳ ಸಹಾಯದಿಂದ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ.
ಈ ಋತುವಿನಲ್ಲಿ ಗುಜರಾತ್ ಪರ ರಾಹುಲ್ ತೆವಾಟಿಯಾ ಉತ್ತಮ ಪ್ರದರ್ಶನ ನೀಡಿದ್ದಾರೆ. ಅವರು ಈ ಋತುವಿನಲ್ಲಿ 11 ಪಂದ್ಯಗಳಲ್ಲಿ 150.78 ಸ್ಟ್ರೈಕ್‌ನಲ್ಲಿ 193 ರನ್ ಗಳಿಸಿದ್ದಾರೆ. ಅವರ ಅಜೇಯ 43 ಗಳಿಸಿದ್ದು ಗರಿಷ್ಠ ಸ್ಕೋರ್ ಆಗಿದೆ. ಈ ಋತುವಿನಲ್ಲಿ ಅವರು ಕೇವಲ ನಾಲ್ಕು ಬಾರಿ ಔಟಾಗದೆ ಉಳಿದಿದ್ದಾರೆ.
ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿರುವ ತೆವಾಟಿಯಾ ಪ್ರತಿ ಗೆಲುವಿನ ಸನಿಹದಲ್ಲಿರುವ ಪಂದ್ಯದಲ್ಲೂ ಗುಜರಾತ್ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದಾರೆ. ಬೆಂಗಳೂರು ವಿರುದ್ಧದ ಪಂದ್ಯದಲ್ಲೂ ತೆವಾಟಿಯಾ ಇದೇ ರೀತಿ ಮಾಡಿದರು. ತೆವಾಟಿಯಾ ಬ್ಯಾಟಿಂಗ್‌ಗೆ ಬಂದಾಗ ಗುಜರಾತ್ ಗೆಲುವಿಗೆ 43 ಎಸೆತಗಳಲ್ಲಿ 76 ರನ್‌ಗಳ ಅಗತ್ಯವಿತ್ತು. ತೆವಾಟಿಯಾ 25 ಎಸೆತಗಳಲ್ಲಿ 43 ರನ್‌ಗಳ ಅಜೇಯ ಇನ್ನಿಂಗ್ಸ್ ಬಾರಿಸಿ ಮಿಂಚಿದರು. ಈ ವೇಳೆ ತೆವಾಟಿಯಾಗೆ ಡೇವಿಡ್ ಮಿಲ್ಲರ್ (24 ಎಸೆತಗಳಲ್ಲಿ 39 ರನ್) ಉತ್ತಮ ಬೆಂಬಲ ದೊರೆಯಿತು.
ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 2 ಎಸೆತಗಳಲ್ಲಿ 2 ಸಿಕ್ಸರ್ ಬಾರಿಸಿ ಗುಜರಾತ್ ಗೆಲುವಿಗೆ ಕಾರಣರಾದ ರಶೀದ್ ಖಾನ್ ಪಂದ್ಯದ ಹೀರೋ ಆದರು ಆದರೆ ನಾನ್ ಸ್ಟ್ರೈಕ್ ನಲ್ಲಿ 40 ರನ್ ಗಳಿಸಿದ ತೆವಾಟಿಯಾ ಇದ್ದರು ಎಂಬುದನ್ನು ನಾವು ಮರೆಯಬಾರದು.