ಈ ಫೈನಲ್ ಪಂದ್ಯದಲ್ಲಿ ಯಾರೇ ಗೆದ್ದರೂ ಟ್ರೋಫಿ ಮಾತ್ರ ಅವರಾದ್ದಾಗುತ್ತದೆ. ಗೆಲುವು ಕ್ರಿಕೆಟ್ನದ್ದಾಗುತ್ತದೆ. ಯಾಕಂದರೆ ಕ್ರಿಕೆಟ್ನ ಫ್ಯೂಚರ್ ಇರುವುದೇ ಇಲ್ಲಿ. ಆಂಟಿಗುವಾದ ಸರ್. ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣ ಅಂಡರ್ 19 ವಿಶ್ವಕಪ್ನ ಫೈನಲ್ಗೆ ವೇದಿಕೆ ಆಗಲಿದೆ. ಭಾರತ ಮತ್ತು ಇಂಗ್ಲೆಂಡ್ ಪ್ರಶಸ್ತಿಗಾಗಿ ಫೈಟ್ ಮಾಡಲಿವೆ.
4 ಬಾರಿ ವಿಶ್ವಕಪ್ ಗೆದ್ದಿರುವ ಭಾರತ ಟೂರ್ನಿಯ ಫೆವರೀಟ್ ಆಗಿ ಮಿಂಚುತ್ತಿದೆ. ಇಂಗ್ಲೆಂಡ್ ಜೂನಿಯರ್ ವಿಶ್ವಕಪ್ ಅನ್ನು ಗೆದ್ದಿದ್ದು 1998ರಲ್ಲಿ ಮಾತ್ರ. ಆದರೆ ಈ ಬಾರಿ ಇತಿಹಾಸ ಸೃಷ್ಟಿಸುವ ತವಕದಲ್ಲಿದೆ. ಹೋರಾಟಕ್ಕೆ ನಿಂತರೆ ಎರಡೂ ತಂಡಗಳಲ್ಲೂ ಸಮಬಲ ಕಾಣುತ್ತಿದೆ.
ಭಾರತದ ಬ್ಯಾಟಿಂಗ್ ಸಖತ್ ಡೀಪ್ ಆಗಿದೆ. ಹರ್ನೂರ್ ಸಿಂಗ್ ಮತ್ತು ಅಂಗ್ ಕ್ರಿಷ್ ರಘುವಂಶಿ ಆರಂಭದಲ್ಲಿ ರನ್ಗಳಿಸಿದರೆ, ಶೇಕ್ ರಶೀದ್, ಯಶ್ ಧುಲ್ ಮತ್ತು ನಿಶಾಂತ್ ಸಂಧು ಆಟದ ವೈಖರಿ ಬದಲಿಸನಲ್ಲರು. ರಾಜ್ ಭಾವಾ, ದಿನೇಶ್ ಬಾನಾ, ಕೌಶಲ್ ಥಾಂಬೆ ಮತ್ತು ರಾಜ್ವರ್ಧನ್ ಹಂಗೇರ್ಕರ್ ಸಿಕ್ಸ್, ಫೋರ್ಗಳ ಮೂಲಕ ಫಿನಿಷಿಂಗ್ ಟಚ್ ಕೊಡಬಲ್ಲರು.
ಬೌಲಿಂಗ್ ಕೂಡ ಭಾರತಕ್ಕೆ ಪಂದ್ಯ ಗೆಲ್ಲಿಸಬಲ್ಲರು. ರಾಜ್ ವರ್ಧನ್ ಜೊತೆ ರವಿಕುಮಾರ್ ಆರಂಭದಲ್ಲೇ ಎದುರಾಳಿಗಳಿಗೆ ಖೆಡ್ಡಾ ತೋಡುತ್ತಿದ್ದಾರೆ. ವಿಕ್ಕಿ ಓಟ್ಸ್ವಾಲ್ ಸ್ಪಿನ್ ಸ್ಪೆಷಲಿಸ್ಟ್. ಕೌಶಲ್ ಥಾಂಬೆ, ರಾಜ್ ಭಾವಾ, ರಘುವಂಶಿ, ಹರ್ನೂರ್, ನಿಶಾಂತ್ ಹೀಗೆ ಯಾರು ಬೇಕಾದರೂ ಬೌಲಿಂಗ್ ಮಾಡಬಲ್ಲರು.
ಇಂಗ್ಲೆಂಡ್ ತಂಡ ಕೂಡ ಕಡಿಮೆ ಅಲ್ಲ. ಸ್ಪಿನ್ ಮುಂದೆ ಕೊಂಚ ವೀಕ್ ಅನ್ನುವುದನ್ನು ಬಿಟ್ಟರೆ ಉಳಿದಿದ್ದರ ಬಗ್ಗೆ ಟೆನ್ಷನ್ ಇಲ್ಲ. ಬ್ಯಾಟಿಂಗ್ನಲ್ಲಿ ಸ್ಪೋಟಕ ಆಟ ಆಡುವುದೇ ಇಂಗ್ಲೆಂಡ್ ಪಾಲಿನ ಬೋನಸ್. ನಾಯಕ ಟಾಮ್ ಪ್ರೆಸ್ಟ್, ಜಾಕೊಬ್ ಬಾಥೆಲ್, ಜಾರ್ಜ್ ಬೆಲ್, ಅಲೆಕ್ಸ್ ಹಾರ್ಟನ್, ವಿಲಿಯಂ ಲಕ್ಸಟನ್, ಜೇಮ್ಸ್ ರೀವ್ ಸೇರಿದಂತೆ ಇಂಗ್ಲೆಂಡ್ ಸೂಪರ್ ಆಟಗಾರರನ್ನು ಹೊಂದಿದೆ. ವೇಗ ಹಾಗೂ ಸ್ವಿಂಗ್ ಬೌಲಿಂಗ್ನಲ್ಲೂ ಇಂಗ್ಲೆಂಡ್ ಶಕ್ತಿ ಪಡೆದಿದೆ. ಆದರೆ ಸ್ಪಿನ್ ವಿಚಾರಕ್ಕೆ ಬಂದರೆ ಎದುರಾಳಿಯನ್ನು ಕಾಡುವ ಸ್ಪಿನ್ನರ್ಗಳಿಲ್ಲ ಅನ್ನುವುದು ಮೈನಸ್ ಪಾಯಿಂಟ್.
ಆಂಟಿಗುವಾ ಪಿಚ್ ನಿಧಾನಗತಿಯ ಪಿಚ್ ಆಗಿರುವುದರಿಂದ ಟೀಮ್ ಇಂಡಿಯಾದ ಸ್ಪಿನ್ನರ್ಗಳು ಮೇಲುಗೈ ಸಾಧಿಸಬಹುದು. ಇಂಗ್ಲೆಂಡ್ ಸ್ಪಿನ್ ಎದುರು ಕೊಂಚ ವೀಕ್ ಆಗಿರುವುದು ಬೋನಸ್ ಆಗಬಹುದು. ಆದರೆ ಇಂಗ್ಲೆಂಡ್ ಫೈನಲ್ ಪಂದ್ಯ ಅನ್ನುವ ಒತ್ತಡದಿಂದ ಹೊರ ಬಂದು ಆಡಿದರೆ ಮ್ಯಾಚ್ ಸೂಪರ್ ಆಗಿರಲಿದೆ. ಕಪ್ ಯಾರೇ ಗೆಲ್ಲಲಿ, ಆದರೆ ಕಟ್ಟ ಕಡೆಯ ನಗು ಕ್ರಿಕೆಟ್ನದ್ದಾಗಿರುತ್ತದೆ.