ಇಂಡಿಯನ್ ಪ್ರೀಮಿಯರ್ ಲೀಗ್ ಹೊಸ ಆವೃತ್ತಿಗೆ ತಂಡಗಳು ಸಿದ್ಧವಾಗುತ್ತಿವೆ. ಫ್ರಾಂಚೈಸಿಗಳ ಕ್ಯಾಂಪ್ ವಿವಿದೆಡೆ ಆರಂಭವಾಗಿದೆ. ಮಾರ್ಚ್ 26 ರಿಂದ ಐಪಿಎಲ್ ಹಬ್ಬ ಆರಂಭವಾಗಲಿದೆ. ಈ ಬಾರಿ ಕಪ್ ಎತ್ತುವ ತಂಡಗಳ ಬಲಾಬಲದ ಬಗ್ಗೆ ಕೂಡ ಚರ್ಚೆ ನಡೆಯುತ್ತಿದೆ.
ಸನ್ ರೈಸರ್ಸ್ ಹೈದ್ರಾಬಾದ್ ಆಟಗಾರರ ಮೆಗಾ ಹರಾಜಿನಲ್ಲಿ ಉತ್ತಮ ಖರೀದಿಗಳನ್ನು ಮಾಡಿದೆ. ಟಿ20 ಪಂದ್ಯವನ್ನು ಗೆಲ್ಲಿಸುವಂತಹ ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಆಲ್ರೌಂಡರ್ಗಳು ಸನ್ ರೈಸರ್ಸ್ ತಂಡದ ದೊಡ್ಡ ಬಲವಾಗಿ ಕಾಣುತ್ತಾರೆ.
ಸನ್ರೈಸರ್ಸ್ ಹೈದ್ರಾಬಾದ್ ಸಂಭಾವ್ಯ XI
-
ರಾಹುಲ್ ತ್ರಿಪಾಠಿ
-
ಅಭಿಷೇಕ್ ಶರ್ಮಾ
-
ಕೇನ್ ವಿಲಿಯಮ್ಸ್
-
ನಿಕೊಲಸ್ ಪೂರನ್
-
ಅಬ್ದುಲ್ ಸಮದ್
-
ಏಡಿಯನ್ ಮಾರ್ಕ್ ರಾಂ
-
ಮಾರ್ಕೊ ಜನ್ಸೆನ್/ ಶಾನ್ ಅಬೊಟ್/ ರೊಮೊರಿಯೊ ಶೆಫರ್ಡ್
-
ವಾಷಿಂಗ್ಟನ್ ಸುಂದರ್
-
ಭುವನೇಶ್ವರ್ ಕುಮಾರ್
-
ಉಮ್ರನ್ ಮಲಿಕ್
-
ಟಿ. ನಟರಾಜನ್/ ಕಾರ್ತಿಕ್ ತ್ಯಾಗಿ/ ಶ್ರೇಯಸ್ ಗೋಪಾಲ್
ರಾಹುಲ್ ತ್ರಿಪಾಠಿ ಮತ್ತು ಅಭಿಷೇಕ್ ಶರ್ಮಾ ಮೂಲಕ ಇನ್ನಿಂಗ್ಸ್ ಆರಂಭಿಸಬಹುದು. ಕೇನ್ ವಿಲಿಯಮ್ಸ್ ಕೂಡ ಸ್ಥಾನ ಅದಲು ಬದಲು ಮಾಡಿಕೊಳ್ಳಬಹುದು. ನಿಕೊಲಸ್ ಪೂರನ್ ಸೇರ್ಪಡೆ ಹೊಸ ಬಲ ತಂದುಕೊಟ್ಟಿದೆ. ಅಬ್ದುಲ್ ಸಮದ್ ಮತ್ತು ಏಡಿಯನ್ ಮಾರ್ಕ್ ರಾಂ ಬೌಲಿಂಗ್ ಜೊತೆಗೆ ಸ್ಪೋಟಕ ಬ್ಯಾಟಿಂಗ್ ಕೂಡ ಮಾಡಬಲ್ಲರು. ಮಾರ್ಕೋ ಜನ್ಸೆನ್, ಶಾನ್ ಅಬೊಟ್ ಮತ್ತು ರೊಮೊರಿಯೊ ಶೆಫರ್ಡ್ ನಡುವೆ ಸ್ಥಾನ ಬದಲಾವಣೆ ಆಗಬಹುದು. ವಾಷಿಂಗ್ಟನ್ ಸುಂದರ್ ತಂಡದಲ್ಲಿರುವ ಮತ್ತೊಬ್ಬ ಆಲ್ರೌಂಡರ್. ಭುವನೇಶ್ವರ್ಕುಮಾರ್, ಉಮ್ರನ್ ಮಲಿಕ್ ಸ್ಥಾನ ಗಟ್ಟಿಯಾದರೆ, ಟಿ ನಟರಾಜನ್, ಕಾರ್ತಿಕ್ ತ್ಯಾಗಿ ಮತ್ತು ಶ್ರೇಯಸ್ ಗೋಪಾಲ್ ಸ್ಥಾನ ಪಂದ್ಯದಿಂದ ಪಂದ್ಯಕ್ಕೆ ಬದಲಾಗುವುದು ಗ್ಯಾರೆಂಟಿ.
ಸನ್ ರೈಸರ್ಸ್ ಹೈದ್ರಾಬಾದ್ ತಂಡ ಆಲ್ರೌಂಡರ್ಗಳನ್ನೇ ಹೆಚ್ಚು ನೆಚ್ಚಿಕೊಂಡಿದೆ. ಆಡುವ 11ರ ಬಳಗದಲ್ಲಿಆಲ್ರೌಂಡರ್ಗಳು ಹೆಚ್ಚಿದ್ದಾರೆ. ಹೀಗಾಗಿ ತಂಡಕ್ಕೆ ಎಡ್ವಾಂಟೇಜ್ ಹೆಚ್ಚಿದೆ.