ಇಂಗ್ಲೆಂಡ್ನಲ್ಲಿ ಟೀಮ್ ಇಂಡಿಯಾ (Team India) ಏಕದಿನ ಸರಣಿ ( ODI Seires) ಗೆದ್ದ ಬಳಿಕ ಹೊಸ ದಾಖಲೆ ಸೃಷ್ಟಿಸಿದೆ. ಟೆಸ್ಟ್ ಸರಣಯಲ್ಲಿ ಸಮಬಲ, ಟಿ20 ಹಾಗೂ ಏಕದಿ ಸರಣಿಯಲ್ಲಿ ಗೆಲುವು. ಇದು ಇಂಗ್ಲೆಂಡ್ನಲ್ಲಿ ಭಾರತದ ಬೆಸ್ಟ್ ಫರ್ಪಾಮೆನ್ಸ್. ಆದರೆ ಏಕದಿನ ಸರಣಿ ಗೆಲುವಿನ ಹಿಂದೆ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಾ ಆಟ ನಿರ್ಣಾಯಕ.
ಇಂಗ್ಲೆಂಡ್ನಲ್ಲಿ ಆಡುವಾಗ ತಂಡದಲ್ಲಿ ಮಧ್ಯಮ ವೇಗದ ಬೌಲರ್ ಕಂ ಬ್ಯಾಟಿಂಗ್ ಆಲ್ರೌಂಡರ್ಗೆ ಹೆಚ್ಚು ಮಹತ್ವವಿದೆ. ಪಾಂಡ್ಯಾ ನಿಜವಾಗಲೂ ಟೀಮ್ ಇಂಡಿಯಾಕ್ಕೆ ಆಸ್ತಿಯಾಗಿ ಮಿಂಚಿದರು. ಬೌಲಿಂಗ್ನಲ್ಲಿ ವೇಗ ಮತ್ತು ಬ್ಯಾಟಿಂಗ್ನಲ್ಲಿ ಬಿಗ್ ಹಿಟ್ಟಿಂಗ್ ಸಾಮರ್ಥ್ಯ ಪಾಂಡ್ಯಾರನ್ನು ವಿಶೇಷ ಆಲ್ರೌಂಡರ್ ಆಗಿ ಬೆಳೆಸಿದೆ. ಅಷ್ಟೇ ಅಲ್ಲ ಇತ್ತೀಚಿನ ದಿನಗಳಲ್ಲಿ ಪಾಂಡ್ಯಾ ತೋರಿಸುತ್ತಿರುವ ಸ್ಥಿರ ಪ್ರದರ್ಶನ ಬಿಸಿಸಿಐ ಹಾಗೂ ಟೀಮ್ ಮ್ಯಾನೇಜ್ಮೆಂಟ್ಗೆ ನೆಮ್ಮದಿ ತಂದಿದೆ.
ಇಂಗ್ಲೆಂಡ್ ವಿರುದ್ಧದ ಮ್ಯಾಂಚೆಸ್ಟರ್ ಪಂದ್ಯದಲ್ಲಿ ಪಾಂಡ್ಯಾ ಬ್ಯಾಟಿಂಗ್ನಲ್ಲಿ ಅರ್ಧಶತಕ ಮತ್ತು ಬೌಲಿಂಗ್ನಲ್ಲಿ 4 ವಿಕೆಟ್ ಪಡೆದುಕೊಂಡಿದ್ದು ವಿಶೇಷ ದಾಖಲೆಯಾಗಿದೆ. ಈ ಹಿಂದೆ ಒಂದೇ ಪಂದ್ಯದಲ್ಲಿ ನಾಲ್ಕು ವಿಕೆಟ್ ಮತ್ತು 50+ ರನ್ ದಾಖಲಾಗಿದ್ದು ಕೇವಲ 6 ಬಾರಿ ಮಾತ್ರ. ಅಷ್ಟೇ ಅಲ್ಲ 11 ವರ್ಷಗಳ ಹಿಂದೆ ಟೀಮ್ಇಂಡಿಯಾದಿಂದ ಇಂತಹ ದಾಖಲೆ ಬರೆಯಲ್ಪಟ್ಟಿತ್ತು.
ಸ್ಪೆಷಲ್ ರೆಕಾರ್ಡ್
ಆಟಗಾರ ವರ್ಷ ವಿರುದ್ಧ ಸ್ಥಳ
ಕೃಷ್ಣಮಾಚಾರಿ ಶ್ರಿಕಾಂತ್ 1968 ನ್ಯೂಜಿಲೆಂಡ್ ವೈಜಾಗ್
ಸಚಿನ್ ತೆಂಡುಲ್ಕರ್ 1998 ಆಸ್ಟ್ರೇಲಿಯಾ ಢಾಕಾ
ಸೌರವ್ ಗಂಗೂಲಿ 1999 ಶ್ರೀಲಂಕಾ ನಾಗ್ಪುರ
ಸೌರವ್ ಗಂಗೂಲಿ 2000 ಜಿಂಬಾಬ್ವೆ ಕಾನ್ಪುರ
ಯುವರಾಜ್ ಸಿಂಗ್ 2011 ಐರ್ಲೆಂಡ್ ಬೆಂಗಳೂರು
ಹಾರ್ದಿಕ್ ಪಾಂಡ್ಯಾ 2022 ಇಂಗ್ಲೆಂಡ್ ಮ್ಯಾಂಚೆಸ್ಟರ್
ಟೀಮ್ ಇಂಡಿಯಾದ ಮೊತ್ತ ಮೊದಲ ಹಾರ್ಡ್ ಹಿಟ್ಟರ್ ಖ್ಯಾತಿಯ ಕೃಷ್ಣಮಾಚಾರಿ ಶ್ರೀಕಾಂತ್ ಪಂದ್ಯವೊಂದರಲ್ಲಿ 4 ವಿಕೆಟ್ ಜೊತೆಗೆ 50ಕ್ಕಿಂತ ಅಧಿಕ ರನ್ಗಳಿಸಿದ ಮೊದಲ ಬ್ಯಾಟ್ಸ್ಮನ್. ಶ್ರೀಕಾಂತ್ ವೈಜಾಗ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಈ ಸಾಧನೆ ಮಾಡಿದ್ದರು. ಆ ಬಳಿಕ 1998ರಲ್ಲಿ ಸಚಿನ್ ತೆಂಡುಲ್ಕರ್ ಆಸ್ಟ್ರೇಲಿಯಾ ವಿರುದ್ಧ, ಸೌರವ್ ಗಂಗೂಲಿ ಎರಡು ಬಾರಿ ಶ್ರೀಲಂಕಾ ಹಾಗೂ ಜಿಂಬಾಬ್ವೆ ವಿರುದ್ಧ ಈ ದಾಖಲೆ ಬರೆದಿದ್ದರು. 2011ರ ವಿಶ್ವಕಪ್ ಪಂದ್ಯದಲ್ಲಿ ಯುವರಾಜ್ ಸಿಂಗ್ ಇಂತಹ ದಾಖಲೆ ಮಾಡಿದ್ದರು. ಈಗ ಪಾಂಡ್ಯಾ ಆ ಲಿಸ್ಟ್ ಸೇರ್ಪಡೆಯಾಗಿದ್ದಾರೆ.
ಪಾಂಡ್ಯಾ ದಾಖಲೆಯ ಆಟದಿಂದ ಟೀಮ್ ಇಂಡಿಯಾ ಗೆಲುವಿನ ಸಂಭ್ರಮ ಆಚರಿಸಿದರೆ. ಆಲ್ ಕಂಡೀಷನ್ ಮತ್ತು ಆಲ್ ಫಾರ್ಮೆಟ್ ಪ್ಲೇಯರ್ ಆಗಿರುವ ಪಾಂಡ್ಯಾರನ್ನು ಕಾಪಾಡಿಕೊಳ್ಳುವುದು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಕರ್ತವ್ಯವಾಗಿದೆ.