ನಿರೀಕ್ಷೆಯಂತೆ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ 16ನೇ ಆವೃತ್ತಿಯ ಐಪಿಎಲ್ನಲ್ಲಿ ಪ್ಲೇ ಆಫ್ ಪ್ರವೇಶಿಸಿದೆ.ಪ್ಲೇ ಆಫ್ಗೆ ಹೋದ ಮೊದಲ ತಂಡವಾಗಿದೆ.
ಟೈಟಾನ್ಸ್ 13 ಪಂದ್ಯಗಳಲ್ಲಿ 9 ಗೆಲುವುಗಳೊಂದಿಗೆ 18 ಅಂಕಪಡೆದು ಅಂಕಪಟ್ಟಿಯಲ್ಲಿ ಅಗ್ರ 2 ಸ್ಥಾನ ಖಚಿತಪಡಿಸಿಕೊಂಡಿದ್ದು ಕ್ವಾಲಿಫೈಯರ್ 1ಕ್ಕೆ ಅರ್ಹತೆ ಪಡೆದಿದೆ.
ಸನ್ ರೈಸರ್ಸ್ 12 ಪಂದ್ಯಗಳಲ್ಲಿ 4 ಗೆಲುವು ಒಟ್ಟು 8 ಅಂಕಗಳೊಂದಿಗೆ ಪ್ಲೇ ಆಫ್ ರೇಸ್ನಿಂದ ಟೂರ್ನಿಯಿಂದ ಹೊರ ಬಿದ್ದ ಎರಡನೆ ತಂಡವೆನಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 188 ರನ್ ಕಲೆ ಹಾಕಿತು.ಸನ್ ರೈಸರ್ಸ್20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 154 ರನ್ ಕಲೆ ಹಾಕಿದೆ.
ಟೈಟಾನ್ಸ್ ಪರ ಶುಭ್ಮನ್ ಗಿಲ್ 101,ಸಾಯಿ ಸುದರ್ಶನ್ 47, ಹಾರ್ದಿಕ್
ಪಾಂಡ್ಯ 8, ಡೇವಿಡ್ ಮಿಲ್ಲರ್ 7 ರನ್ ಗಳಿಸಿದರು.
ಸನ್ ರೈಸರ್ಸ್ ಪರ ಭುವನೇಶ್ವರ್ ಕುಮಾರ್ 30ಕ್ಕೆ 5 ವಿಕೆಟ್ ಪಡೆದರು.
ಹೆನ್ಸನ್, ಫಾರೂಕಿ,ನಟರಾಜನ್ ತಲಾ 1 ವಿಕೆಟ್ ಪಡೆದರು.
ಸನ್ ರೈಸರ್ಸ್ ಪರ ಏಡಿನ್ ಮಾರ್ಕರಮ್ 10,ಹೆನ್ರಿಕ್ ಕ್ಲಾಸೆನ್ 64,ಭುವನೇಶ್ವರ್ ಕುಮಾರ್ 27 ರನ್ ಗಳಿಸಿದರು.
ಟೈಟಾನ್ಸ್ ಪರ ಮೊಹ್ಮದ್ ಶಮಿ 21ಕ್ಕೆ 4, ಮೋಹಿತ್ ಶರ್ಮಾ 28ಕ್ಕೆ 4 ವಿಕೆಟ್ ಪಡೆದರು.