ಮಹತ್ವದ ಪಂದ್ಯದಲ್ಲಿ ಐದು ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಆತಿಥೇಯ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ.
ಇಲ್ಲಿನ ಏಕನಾ ಮೈದಾನದಲ್ಲಿ ಮುಂಬೈ ಮತ್ತು ಲಖನೌ ತಂಡಗಳು ಕಠಿಣ ಪಿಚ್‍ನಲ್ಲಿ ಗೆಲುವಿಗಾಗಿ ದೊಡ್ಡ ಹೋರಾಟವನ್ನೆ ಮಾಡಲಿವೆ.
ಮುಂಬೈ ಇಂಡಿಯನ್ಸ್ 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೆ ಸ್ಥಾನದಲ್ಲಿದೆ. ಮುಂಬೈಗಿಂತ ಒಂದು ಅಂಕ ಕಡಿಮೆ ಪಡೆದಿರುವ ಲಖನೌ ತಂಡ ನಾಲ್ಕನೆ ಸ್ಥಾನದಲ್ಲಿದೆ.
ಪ್ಲೇ ಆಫ್ಗೆ ಹೋಗಲು ಕಣದಲ್ಲಿ 8 ತಂಡಗಳಿರುವುದರಿಂದ ಉಭಯ ತಂಡಗಳು ಈ ಪಂದ್ಯವನ್ನು ಗೆಲ್ಲಲು ಪಣತೊಟ್ಟಿವೆ.
ಸೂರ್ಯ ಕುಮಾರ್ ಯಾದವ್ ಕಳೆದ ಎರಡೂ ಪಂದ್ಯಗಳಲ್ಲಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರನಿರ್ವಹಿಸುತ್ತಿದ್ದಾರೆ.
ರನ್ ಬರ ಎದುರಿಸುತ್ತಿರುವ ನಾಯಕ ರೋಹಿತ್ ಶರ್ಮಾ ಮೊನ್ನೆ ಗುಜರಾತ್ ವಿರುದ್ಧ ಲಯ ಕಂಡುಕೊಂಡಿದ್ದು ಒಳ್ಳೆಯ ಆರಂಭ ನೀಡಿದ್ದರು.
ತಿಲಕ್ ವರ್ಮಾ ಅನುಪಸ್ಥಿತಿಯಲ್ಲಿ ನೆಹಾಲ್ ವಾದೆರಾ ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳುತ್ತಿದ್ದಾರೆ.
ಇನ್ನು ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್ ಪಿಯೂಷ್ ಚಾವ್ಲಾ ಬ್ಯಾಟರ್‍ಗಳಿಗೆ ಕಂಟಕವಾಗಿದ್ದಾರೆ. ಆಕಾಶ್ ಬಾಧವಾಲ್ ವೇಗದ ವಿಭಾಗಕ್ಕೆ ಜೀವ ತುಂಬಿದ್ದಾರೆ.
ಆದರೆ ಡೆತ್ ಓವರ್ ತಂಡಕ್ಕೆ ತಲೆ ನೋವಾಗಿ ಉಳಿದಿದೆ. ಜೋಫ್ರಾ ಆರ್ಚರ್ ಸ್ಥಾನದಲ್ಲಿ ಆಡುತ್ತಿರುವ ವೇಗಿ ಕ್ರಿಸ್ ಜೋರ್ಡನ್ 2 ಪಂದ್ಯಗಳಿಂದ ಸಾಕಷ್ಟು ರನ್ ಬಿಟ್ಟುಕೊಟ್ಟಿದ್ದಾರೆ.
ನಿಧಾನಗತಿಯ ಪಿಚ್‍ನಲ್ಲಿ ಕಡಿಮೆ ಮೊತ್ತದ ಪಂದ್ಯವಾಗಿರಲಿದೆ.ಸ್ಪಿನ್ನರ್‍ಗಳ ಪಂದ್ಯದ ಗೆಲುವನ್ನು ನಿರ್ಧಾರಿಸಲಿದ್ದಾರೆ.
ಲಖನೌ ಪರ ರವಿಬಿಷ್ಣೋಯಿ ತಂಡದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ನಾಯಕ ಕೃಣಾಲ್ ಪಾಂಡ್ಯ ಸನ್‍ರೈಸರ್ಸ್ ವಿರುದ್ಧ ಸ್ಪಿನ್ ಜಾದೂ ಮಾಡಿದ್ದರು.
ಅಮಿತ್ ಮಿಶ್ರಾಗೂ ಇಲ್ಲಿನ ವಾತಾವರಣ ಸಹಕರಿಸಲಿದೆ. ವೇಗಿ ಆವೇಶ್ ಖಾನ್ 9 ಪಂದ್ಯಗಳಿಂದ 9.75 ಎಕನಾಮಿ ರೇಟ್ ಹೊಂದಿದ್ದು ದುಬಾರಿ ಬೌಲರ್ ಆಗಿದ್ದಾರೆ.
ಕೆ.ಎಲ್.ರಾಹುಲ್ ಅನುಪಸ್ಥಿತಿ ನಡುವೆಯೂ ತಂಡದ ಬ್ಯಾಟಿಂಗ್ ಬಲಿಷ್ಠವಾಗಿದೆ. ರಾಹುಲ್ ಅನುಪಸ್ಥಿತಿಯಲ್ಲಿ ಕ್ವಿಂಟಾನ್ ಡಿಕಾಕ್ ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ. ಓಪನರ್ ಕೈಲೆ ಮೇಯರ್ಸ್ ತಂಡದ ಪರ ಅತಿ ಹೆಚ್ಚು ರನ್ ಹೊಡೆದ ಬ್ಯಾಟರ್ ಆಗಿದ್ದಾರೆ.
ಕಠಿಣ ಸಂದರ್ಭದಲ್ಲೂ ತಂಡವನ್ನು ಗೆಲ್ಲಿಸಿಕೊಡುವ ಬ್ಯಾಟರ್‍ಗಳಿದ್ದಾರೆ. ಸನ್‍ರೈಸರ್ಸ್ ವಿರುದ್ಧ ನಿಕೊಲೊಸ್ ಪೂರಾನ್ ಸೋಟಕ ಬ್ಯಾಟಿಂಗ್ ಮಾಡಿ ಪಂದ್ಯ ಗೆಲ್ಲಿಸಿಕೊಟ್ಟಿದ್ದರು.
ಸೌರಾಷ್ಟ್ರ ಬ್ಯಾಟರ್ ಪ್ರೇರಕ್ ಮಂಕಡ್ ಮೂರನೆ ಕ್ರಮಾಂಕದಲ್ಲಿ ತಾನೊಬ್ಬ ಸಮರ್ಥ ಬ್ಯಾಟರ್ ಅನ್ನೋದನ್ನು ನಿರೂಪಿಸಿದ್ದಾರೆ.