ಉತ್ತರ ಪ್ರದೇಶ ಯುವ ಮಹಿಳಾ ಅಥ್ಲೀಟ್ ಶೈಲಿ ಸಿಂಗ್ ಲಾಂಗ್ ಜಂಪ್ನಲ್ಲಿ ಹೊಸ ದಾಖಲೆ ಬರೆದಿದ್ದಾರೆ.
ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಗ್ರ್ಯಾಂಡ್ ಪ್ರಿಕ್ಸ್ನಲ್ಲಿ ಕ್ರೀಡಾಕೂಟದಲ್ಲಿ ಶೈಲಿ ಸಿಂಗ್ 6.76ಮೀ. ದೂರ ಜಿಗಿದು ಚಿನ್ನ ಗೆದ್ದರು. ಮಾಜಿ ಅಥ್ಲೀಟ್ ಅಂಜು ಬಾಬಿ ಜಾರ್ಜ್(6.83ಮೀ.) ನಂತರದ ಎರಡನೆ ಅತಿ ದೊಡ್ಡ ಜಿಗಿತ ಇದಾಗಿದೆ.
19 ವರ್ಷದ ಶೈಲಿ ಸಿಂಗ್ 28 ಸೆ.ಮೀ.ನಿಂದ ಸುಧಾರಣೆ ಕಂಡಿದ್ದಾರೆ. ಐಶ್ವರ್ಯ ಬಾಬು (6.73ಮೀ), ಶೋಭಾ ಮತ್ತು ವೀಣಾ (6.66ಮೀ), ಮಾಯೂಖಾ ಜೋಹ್ನು (6.64), ಪ್ರಾಜುಶಾ, ನಯನಾ ಜೇಮ್ಸ್ ಮತ್ತು ಆನ್ಸಿ ಸೋಜನ್ (6.55ಮೀ.)ಅವರನ್ನು ಹಿಂದಿಕ್ಕಿದರು.
ಶೈಲಿ ಸಿಂಗ್ ಏಷ್ಯಾನ್ ಗೇಮ್ಸ್ ಕ್ರೀಡಾಕೂಟಕ್ಕೆ ಇಟ್ಟಿದ್ದ ಗುರಿಯನ್ನು ಮುಟ್ಟಿದರು. ಆದರೆ ವಿಶ್ವ ಚಾಂಪಿಯನಶಿಪ್ಗೆ ಅರ್ಹತೆ ಪಡೆಯಲು 9 ಸೆ.ಮೀ. ಹಿನ್ನಡೆ ಅನುಭವಿಸಿದರು.
ಶೈಲಿ ಸಿಂಗ್ ಅವರ ನಾಲ್ಕು ಜಿಗಿತಗಳು ನಯನಾ ಜೇಮ್ಸ್ ಅವರ (6.53 ಮೀ.) ದಾಖಲೆಯನ್ನು ಮುರಿದವು.
ಶೈಲಿ ಸಿಂಗ್ ಮೊದಲ ಜಿಗಿತ 6.58 ಮೀ.ಲ್, 2ನೇ ಜಿಗಿತ 6.76ಮೀ., 3ನೇ ಜಿಗಿತ 6.64 ಮೀ., ನಾಲಕ್ನೆ ಜಿಗಿತ 6.66 ಮೀ. ಜಿಗಿದರು.