ಸತತ ಬ್ಯಾಟಿಂಗ್ ಫಾರ್ಮ್ ವೈಫಲ್ಯ ಅನುಭವಿಸುತ್ತಿರುವ ʼರನ್ ಮಷಿನ್ʼ ವಿರಾಟ್ ಕೊಹ್ಲಿ ಬೆನ್ನಿಗೆ ನಿಂತಿರುವ ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಮೈಕಲ್ ವಾನ್, “ಕ್ರಿಕೆಟ್ನಿಂದ ವಿಶ್ರಾಂತಿ ತೆಗೆದುಕೊಳ್ಳುವಂತೆ ಒತ್ತಾಯಿಸುವ ಜೊತೆಗೆ ಉತ್ತಮ ಮನಸ್ಥಿತಿಯೊಂದಿಗೆ ಕ್ರಿಕೆಟ್ಗೆ ಕಮ್ಬ್ಯಾಕ್ ಮಾಡಲು ಕುಟುಂಬದೊಂದಿಗೆ ಸಮಯ ಕಳೆದು ಶ್ರೇಷ್ಠ ಫಾರ್ಮ್ ಮತ್ತು ಉತ್ತಮ ಮನಸ್ಥಿತಿಯೊಂದಿಗೆ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳಿ” ಎಂದು ಸಲಹೆ ನೀಡಿದ್ದಾರೆ.
ವಿರಾಟ್ ಕೊಹ್ಲಿ ಪ್ರತಿಬಾರಿ ಮೈದಾನಕ್ಕಿಳಿದಾಗ ವಿಶ್ವ ಕ್ರಿಕೆಟ್ ಆತನ ಬ್ಯಾಟ್ನಿಂದ ಶತಕವನ್ನ ನಿರೀಕ್ಷಿಸುತ್ತದೆ. ಆದರೆ ವೃತ್ತಿ ಬದುಕಿನ ಉದ್ದಕ್ಕೂ ಒಳ್ಳೆಯ ಸಂಗತಿಗಳೊಂದಿಗೆ ಮುನ್ನಡೆಯಲು ಯಾರಿಗೂ ಸಾಧ್ಯವಿಲ್ಲ. ವಿರಾಟ್ ಕೊಹ್ಲಿ ಸ್ಪರ್ಧಾತ್ಮಕ ಕ್ರಿಕೆಟ್ನಲ್ಲಿ ಸ್ವಲ್ಪಮಟ್ಟಿನ ಹಿನ್ನಡೆಯನ್ನು ಎದುರಿಸುತ್ತಿದ್ದಾರೆ. ನಾಯಕತ್ವ ತ್ಯಜಿಸಿದ ನಂತರದಲ್ಲಿ 2022ರ ಐಪಿಎಲ್ನಲ್ಲಿ ಆಡಲು ಮುಂದಾದ ಕೊಹ್ಲಿ ಮೇಲೆ ಸಾಕಷ್ಟು ನಿರೀಕ್ಷೆ ಹೊಂದಲಾಗಿತ್ತು. ಆದರೆ ಫಾರ್ಮ್ ಕೊರತೆ ಎದುರಿಸಿದ ಕೊಹ್ಲಿ, 16 ಪಂದ್ಯಗಳಲ್ಲಿ 23ಕ್ಕಿಂತ ಕಡಿಮೆ ಸರಾಸರಿಯಲ್ಲಿ 341 ರನ್ಗಳಿಸಿದರು.
ವಿರಾಟ್ ಕೊಹ್ಲಿ ಸುಲಭವಲ್ಲದ ಹಂತಗಳಲ್ಲಿ ಯಶಸ್ವಿಯಾಗಿ ಮುನ್ನಡೆಯುವ ದಿಗ್ಗಜ ಆಟಗಾರ. ಎರಡ-ಮೂರು ವರ್ಷಗಳ ಹಿಂದಿ ವಿರಾಟ್ ಕೊಹ್ಲಿ ಮೈದಾನಕ್ಕಿಳಿದರೆ ಸೆಂಚುರಿ ಬಾರಿಸಲಿದ್ದಾರೆ ಎಂಬ ನಂಬಿಕೆ ಇರುತ್ತಿತ್ತು. ಆದರೆ ಇದೀಗ ಸ್ವಲ್ಪಮಟ್ಟಿನ ಫಾರ್ಮ್ ಕಳೆದುಕೊಂಡಿದ್ದು, ಅವರಿಗೆ ವಿಶ್ರಾಂತಿ ಅಗತ್ಯವಿದೆ. ಆದ್ದರಿಂದ ವಿರಾಟ್ ಕೊಹ್ಲಿ, ಕೆಲಕಾಲ ಕುಟುಂಬದೊಂದಿಗೆ ಕಾಲ ಕಳೆದು ನಂತರ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ ಎಂದು ಮೈಕಲ್ ವಾನ್ ಸಂದರ್ಶನವೊಂದರಲಿಲ್ಲ ತಿಳಿಸಿದ್ದಾರೆ.