ಯೂರೋಪ್ ಫುಟ್ಬಾಲ್‍ನ ದೈತ್ಯ ಜರ್ಮನಿ ತಂಡ ಫಿಫಾ ಫುಟ್ಬಾಲ್ ವಿಶ್ವಕಪ್‍ನಿಂದ ಹೊರ ಬಿದ್ದು ಆಘಾತ ಅನುಭವಿಸಿದೆ. ಸತತ ಎರಡನೆ ಬಾರಿಯೂ ಗುಂಪು ಹಂತದಲ್ಲೆ ಹೊರ ಬಿದ್ದು ನಿರಾಸೆ ಅನುಭವಿಸಿದೆ.
ಇ ಗುಂಪಿನಲ್ಲಿ ಪಂದ್ಯದಲ್ಲಿ ಕೋಸ್ಟರಿಕಾ ವಿರುದ್ಧ 4-2 ಗೋಲುಗಳಿಂದ ಗೆದ್ದುಕೊಂಡಿತು.
ಜರ್ಮನಿ ಪರ ಘ್ನಾಬ್ರೈ (10ನೇ ನಿಮಿಷ), ಹಾವೆಟ್ಜ್(73ನೇ ನಿಮಿಷ), ಹಾವೆಟ್ಜ್(85ನೇ ನಿಮಿಷ),ಫುಲ್‍ಕ್ರುಗ್ (89ನೇ ನಿಮಿ) ಗೋಲುಗಳನ್ನು ಹೊಡೆದರು.
ಕೋಸ್ಟರಿಕಾ ಪರ ತೆಜೆಡಾ (58ನೇ ನಿಮಿ), ನೀಯೂರ್ (70ನೇ ನಿಮಿಷ)ಗೋಲುಗಳನ್ನು ಹೊಡೆದರು.
ಆದರೆ ನಾಕೌಟ್ ಹಂತಕ್ಕೇರಲು ಈ ಗೆಲುವು ಸಾಕಾಗಲಿಲ್ಲ. ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು.
ಸ್ಪೇನ್ ಹಾಗೂ ಜರ್ಮನಿ ತಲಾ 4 ಅಂಕ ಪಡೆದಿದ್ದರೂ ಗೋಲುಗಳ ವ್ಯತ್ಯಾಸದಲ್ಲಿ ಜರ್ಮನಿ ಹಿಂದೆ ಉಳಿಯಿತು. ಕೋಸ್ಟರಿಕಾ ಜೊತೆ ಜರ್ಮನಿ ಕೂಡ ಟೂರ್ನಿಯಿಂದ ಹೊರ ಬಿದ್ದಿದೆ.