ಮಾಜಿ ಅಗ್ರ ಶ್ರೇಯಾಂಕ ಆಟಗಾರ್ತಿ ಜರ್ಮನಿಯ ಏಂಜಲಿಕ್ ಕೆರ್ಬರ್, ಪ್ಯಾರೀಸ್‍ನಲ್ಲಿ ನಡೆಯುತ್ತಿರುವ ಫ್ರೆಂಚ್ ಓಪನ್ ಟೆನಿಸ್ ಪಂದ್ಯಾವಳಿಯ ಮಹಿಳಾ ವಿಭಾಗದ ಸಿಂಗಲ್ಸ್ ಮೂರನೇ ಸುತ್ತಿನ ಪಂದ್ಯದಲ್ಲಿ ಸೋಲು ಅನುಭವಿಸಿ ಪಂದ್ಯಾವಳಿಯಿಂದ ಹೊರ ನಡೆದಿದ್ದಾರೆ.
ಶುಕ್ರವಾರ ನಡೆದ ಮೂರನೇ ಸುತ್ತಿನ ಪಂದ್ಯದಲ್ಲಿ ಅಲಿಯಾಕ್ಸಂದ್ರ ಸಾಸ್ನೋವಿಚ್ 6-4, 7-6 (7-5) ರಿಂದ ಏಂಜಲಿಕ್ ಕೆರ್ಬರ್ ಅವರನ್ನು ಎರಡು ನೇರ ಸೆಟ್‌ಗಳ ಆಟದಲ್ಲಿ ಸೋಲಿಸಿ ಮುನ್ನಡೆದರು.

ಜೋಕೊವಿಕ್‌ಗೆ ಗೆಲುವು
ಪುರುಷರ ವಿಭಾಗದ ಸಿಂಗಲ್ಸ್ ನ ಮೂರನೇ ಸುತ್ತಿನ ಪಂದ್ಯದಲ್ಲಿ ಅಗ್ರ ಶ್ರೇಯಾಂಕ ಆಟಗಾರ ನೋವಾಕ್ ಜೊಕೊವಿಕ್ 6-3, 6-3, 6-2 ರಿಂದ ಸೋಲೊವ್ನಿಯಾದ ಅಲ್ಜಾಜ್ ಬೆಡೆನೆ ಅವರನ್ನು ಮೂರು ನೇರ ಸೆಟ್‌ಗಳ ಆಟದಲ್ಲಿ ಸೋಲಿಸಿ ನಾಲ್ಕನೇ ಸುತ್ತು ಪ್ರವೇಶಿಸಿದರು. ಜೋಕೊ ಒಂದು ಗಂಟೆ 44 ನಿಮಿಷಗಳ ಕಾದಾಟದಲ್ಲಿ ಜಯ ಸಾಧಿಸಿ ಮುನ್ನಡೆದಿದ್ದಾರೆ. ಸೊಗಸಾದ ಆಟ ಪ್ರದರ್ಶನ ನೀಡಿದ ಜೋಕೊ ಮತ್ತೊಂದು ಗ್ರ್ಯಾನ್ ಸ್ಲಾಮ್ ಹತ್ತಿರಕ್ಕೆ ನಡೆದಿದ್ದಾರೆ.
ಇನ್ನೊಂದು ಮೂರನೇ ಸುತ್ತಿನ ಪಂದ್ಯದಲ್ಲಿ ಐದನೇ ಶ್ರೇಯಾಂಕದ ಆಟಗಾರ ರಾಫೆಲ್ ನಡಾಲ್ 6-3, 6-2, 6-4 ರಿಂದ 26 ನೇ ಶ್ರೇಯಾಂಕದ ನೆದರ್‌ಲೆಂಡ್ಸ್ ನ ಬೊಟಿಕ್ ವ್ಯಾನ್ ಡಿ ಝಾಂಡ್ಸಂನಲ್ಪ್ ಅವರನ್ನು ಮೂರು ನೇರ ಸೆಟ್‌ಗಳ ಆಟದಲ್ಲಿ ಪರಾಜಯಗೊಳಿಸಿ ಮುಂದಿನ ಸುತ್ತು ಪ್ರವೇಶಿಸಿದರು. 2 ಗಂಟೆ 11 ನಿಮಿಷ ನಡೆದ ಪಂದ್ಯದಲ್ಲಿ ನಡಾಲ್ ಪಾರುಪತ್ಯ ಮೆರೆದಿದ್ದಾರೆ. ಈ ಮೂಲಕ ನಡಾಲ್ ಪ್ರಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.