ಐಪಿಎಲ್ 2022 ರ ಫೈನಲ್ ಪಂದ್ಯ ಜೂನ್ 29 ರಂದು ನಡೆಯಲಿದೆ. ಗುಜರಾತ್ ಟೈಟಾನ್ಸ್ ಈಗಾಗಲೇ ಅದ್ಭುತ ಪ್ರದರ್ಶನ ನೀಡುವ ಮೂಲಕ ಫೈನಲ್‌ಗೆ ಲಗ್ಗೆ ಇಟ್ಟಿದೆ. ಈ ಋತುವಿನಲ್ಲಿ ಬೌಲರ್‌ಗಳ ಪ್ರದರ್ಶನವನ್ನು ಗಮನಿಸಿದರೆ, ಅನೇಕ ದೇಶೀಯ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದಾರೆ. ಇದು ಅನೇಕ ಅನ್‌ಕ್ಯಾಪ್ಡ್ ಆಟಗಾರರನ್ನು ಸಹ ಒಳಗೊಂಡಿದೆ. ಈ ಋತುವಿನಲ್ಲಿ ಎಡಗೈ ಬೌಲರ್‌ಗಳೂ ಮೇಲುಗೈ ಸಾಧಿಸಿದ್ದಾರೆ. ಈ ಬೌಲರ್‌ಗಳು ಬ್ಯಾಟ್ಸ್‌ಮನ್‌ಗಳಿಗೆ ರನ್ ಗಳಿಗೆ ಕಡಿವಾಣ ಹಾಕಿದ್ದಾರೆ. ಅವರ ವಿರುದ್ಧ ಬ್ಯಾಟ್ಸ್‌ಮನ್‌ಗಳು ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ.
ಸನ್ ರೈಸರ್ಸ್ ಹೈದರಾಬಾದ್ ಬೌಲರ್ ಟಿ.ನಟರಾಜನ್ ಈ ಋತುವಿನಲ್ಲಿ 11 ಪಂದ್ಯಗಳನ್ನು ಆಡಿ 18 ವಿಕೆಟ್ ಕಬಳಿಸಿದ್ದಾರೆ. ಈ ಸಮಯದಲ್ಲಿ, ಅವರು ಅನೇಕ ಪ್ರಮುಖ ಪಂದ್ಯಗಳಲ್ಲಿ ಮಾರಣಾಂತಿಕ ಬೌಲಿಂಗ್ ಮಾಡಿದ್ದಾರೆ. ನಟರಾಜನಿಗೆ ಕೊನೆಯವರೆಗೂ ಆಡಲು ಸಾಧ್ಯವಾಗಲಿಲ್ಲ. ಗಾಯದ ಸಮಸ್ಯೆಯಿಂದ ಅವರು ಟೂರ್ನಿಯ ಮಧ್ಯದಲ್ಲೇ ಹೊರಗುಳಿದಿದ್ದರು.
ಡೆಲ್ಲಿ ಕ್ಯಾಪಿಟಲ್ಸ್ ಬೌಲರ್ ಖಲೀಲ್ ಅಹ್ಮದ್ ಕೂಡ ಅದ್ಭುತ ಪ್ರದರ್ಶನ ನೀಡಿದರು. ಖಲೀಲ್ 10 ಪಂದ್ಯಗಳಲ್ಲಿ 16 ವಿಕೆಟ್ ಪಡೆದಿದ್ದಾರೆ. ಹರಾಜಿನಲ್ಲಿ ಅವರನ್ನು 5.25 ಕೋಟಿ ರೂಪಾಯಿಗೆ ದೆಹಲಿ ಖರೀದಿಸಿತ್ತು.
ಗುಜರಾತ್ ಟೈಟಾನ್ಸ್ ಬೌಲರ್ ಯಶ್ ದಯಾಳ್ ಈ ಋತುವಿನಲ್ಲಿ ಎಲ್ಲರ ಗಮನ ಸೆಳೆದರು. ಅವರು ಐಪಿಎಲ್ 2022 ರಲ್ಲಿ ಮಾರಕ ಬೌಲಿಂಗ್ ಮಾಡುವ ಮೂಲಕ ತಮ್ಮ ಛಾಪು ಮೂಡಿಸಿದ್ದಾರೆ. ಯಶ್ 8 ಪಂದ್ಯಗಳಲ್ಲಿ 10 ವಿಕೆಟ್ ಕಬಳಿಸಿದ್ದಾರೆ. ಯಶ್ ಕಡಿಮೆ ವಿಕೆಟ್‌ಗಳನ್ನು ಪಡೆದಿರಬಹುದು, ಆದರೆ ಅವರ ಬೌಲಿಂಗ್ ತುಂಬಾ ಪರಿಣಾಮಕಾರಿಯಾಗಿತ್ತು.
ಲಕ್ನೋ ಸೂಪರ್ ಜೈಂಟ್ಸ್‌ನ ಮೊಹ್ಸಿನ್ ಖಾನ್ ಕೂಡ ಅತ್ಯಂತ ಪರಿಣಾಮಕಾರಿ. ಮೊಹ್ಸಿನ್ ಈ ಋತುವಿನ 9 ಪಂದ್ಯಗಳಲ್ಲಿ 14 ವಿಕೆಟ್ ಕಬಳಿಸಿದ್ದಾರೆ. ಇವರು 16 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಬಳಿಸಿದ್ದು ಅವರ ಅತ್ಯುತ್ತಮ ಪ್ರದರ್ಶನವಾಗಿತ್ತು.