French Gp: ಮ್ಯಾಕ್ಸ್ ವರ್ಸ್ಟಪ್ಪೆನ್ ಚಾಂಪಿಯನ್
ಭಾನುವಾರ ನಡೆದ ಫ್ರೆಂಚ್ ಗ್ರ್ಯಾಂಡ್ ಪ್ರೀ ಚಾಂಪಿಯನ್ ಶಿಪ್ ನಲ್ಲಿ ರೆಡ್ ಬುಲ್ ತಂಡದ ಮ್ಯಾಕ್ಸ್ ವರ್ಸ್ಟಪ್ಪೆನ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದಾರೆ.

ಅಂತಿಮ ಸುತ್ತಿನ ರೇಸ್ ನಲ್ಲಿ ಮ್ಯಾಕ್ಸ್ ವರ್ಸ್ಟಪ್ಪೆನ್ ಸೊಗಸಾದ ಪ್ರದರ್ಶನ ನೀಡಿ ಪ್ರಶಸ್ತಿ ಪಡೆದರು. ಇವರು ಸ್ಟಾರ್ ರೇಸರ್ ಮರ್ಸಿಡಿಜ್ ತಂಡದ ಲೂಯಿಸ್ ಹ್ಯಾಮಿಲ್ಟನ್ ಅವರಿಗಿಂತ ಸುಮಾರು 11 ಸೆಕೆಂಡ್ ಗಳಿಗೂ ಮುಂಚಿತವಾಗಿ ನಿಗದಿತ ಗೆರೆಯನ್ನು ದಾಟಿದರು.

ಮ್ಯಾಕ್ಸ್ ವರ್ಸ್ಟಪ್ಪೆನ್ ನಿಗದಿತ ಲ್ಯಾಪ್ ಗಳನ್ನು 1 ಗಂಟೆ 30 ನಿಮಿಷ 2.112 ಸೆಕೆಂಡ್ ಗಳಲ್ಲಿ ದೂರ ಕ್ರಮಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದರು.

ಮೊದಲ ಸ್ಥಾನ ಪಡೆದ ಇವರು ಒಟ್ಟು 25 ಅಂಕಗಳನ್ನು ತೆಕ್ಕೆಗೆ ಹಾಕಿಕೊಂಡರು. ಲೂಯಿಸ್ ಹ್ಯಾಮಿಲ್ಟನ್ 18 ಅಂಕ ಪಡೆದರು. ಮೂರನೇ ಸ್ಥಾನವನ್ನು ಮರ್ಸಿಡಿಜ್ ತಂಡದ ಜಾರ್ಜ್ ರಸ್ಸೆಲ್ ಪಡೆದರು. ಇವರು 15 ಅಂಕ ಬಾಚಿಕೊಂಡರು.
French Grand Prix 2022, Max Verstappen, win,