ಐಪಿಎಲ್ 2022 ರ ಪ್ಲೇಆಫ್ ರೇಸ್‌ನಿಂದ ಹೊರಗುಳಿದಿರುವ ಮುಂಬೈ ಇಂಡಿಯನ್ಸ್ ಗೆ ಮತ್ತೊಂದು ಪೆಟ್ಟು ಬಿದ್ದಿದೆ. ತಂಡದ ವೇಗದ ಬೌಲರ್ ಟೈಮಲ್ ಮಿಲ್ಸ್ ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದ ಹೊರಗುಳಿದಿದ್ದಾರೆ.
ಮುಂಬೈ ದಕ್ಷಿಣ ಆಫ್ರಿಕಾದ ಟ್ರಿಸ್ಟಾನ್ ಸ್ಟಬ್ಸ್ ಅವರನ್ನು ಋತುವಿನ ಉಳಿದ ಭಾಗಕ್ಕೆ ತಂಡಕ್ಕೆ ಸೇರಿಸಿಕೊಂಡಿದೆ. ಈ ಋತುವಿನಲ್ಲಿ ಮುಂಬೈ ಪರ ಆಡಿದ 5 ಪಂದ್ಯಗಳಲ್ಲಿ ಮಿಲ್ಸ್ ಕೇವಲ 6 ವಿಕೆಟ್ ಕಬಳಿಸಿದ್ದರು.

ಮುಂಬೈ ಇಂಡಿಯನ್ಸ್ ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿದೆ. “ಮುಂಬಯಿ ಇಂಡಿಯನ್ಸ್ ದಕ್ಷಿಣ ಆಫ್ರಿಕಾದ ಟ್ರಿಸ್ಟಾನ್ ಸ್ಟಬ್ಸ್‌ಗ ಅವರನ್ನು ತಂಡಕ್ಕೆ ಬರ ಮಾಡಿಕೊಳ್ಳುತ್ತದೆ. ಇವರು ಟೈಮಲ್ ಮಿಲ್ಸ್ ಬದಲಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಮಿಲ್ಸ್ ಗಾಯಗೊಂಡಿದ್ದಾರೆ ಮತ್ತು ಐಪಿಎಲ್‌ನಿಂದ ಹೊರಗುಳಿದಿದ್ದಾರೆ” ಎಂದು ತಿಳಿಸಿದೆ.
“ಈ 21 ವರ್ಷದ ಪ್ರತಿಭಾವಂತ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಇತ್ತೀಚೆಗೆ ಜಿಂಬಾಬ್ವೆ ವಿರುದ್ಧ ದಕ್ಷಿಣ ಆಫ್ರಿಕಾದ ಎ ತಂಡಕ್ಕೆ ಪಾದಾರ್ಪಣೆ ಮಾಡಿದರು. ಟ್ರಿಸ್ಟಾನ್ ಬಹಳ ಭರವಸೆಯ ದೇಶೀಯ ಋತುವನ್ನು ಹೊಂದಿದ್ದಾರೆ. ಮತ್ತು ಇತ್ತೀಚೆಗೆ ಮುಕ್ತಾಯಗೊಂಡ T20 ದೇಶೀಯ ಲೀಗ್‌ನಲ್ಲಿ ಅವರು ಉತ್ತಮ ಪ್ರದರ್ಶನ ನೀಡಿದ್ದಾರೆ. ಅವರ ತಂಡಕ್ಕೆ ಪ್ರಮುಖ ಪಾತ್ರವಹಿಸಲಿದ್ದಾರೆ” ಎಂದು ತಿಳಿಸಿದೆ.

ಸ್ಟಬ್ಸ್ 17 T-20I ಗಳನ್ನು ಆಡಿದ್ದು 157.14 ಸ್ಟ್ರೈಕ್ ರೇಟ್‌ನಲ್ಲಿ ಮೂರು ಅರ್ಧ ಶತಕಗಳೊಂದಿಗೆ 506 ರನ್ ಗಳಿಸಿದ್ದಾರೆ. IPL ಪತ್ರಿಕಾ ಪ್ರಕಟಣೆಯ ಪ್ರಕಾರ, ಸ್ಟಬ್ಸ್ 20 ಲಕ್ಷಗಳ ಮೂಲ ಬೆಲೆಗೆ MI ಸೇರಿದ್ದಾರೆ. ಮಿಲ್ಸ್ ಅನ್ನು ಮುಂಬೈ 1.50 ಕೋಟಿಗೆ ಖರೀದಿಸಿತು.