ಭಾನುವಾರ ಸ್ಪಾ-ಫ್ರಾಂಕೋರ್ಚಾಂಪ್ಸ್ ಅಂಗಳದಲ್ಲಿ ನಡೆದ ಬೆಲ್ಜಿಯಂ ಜಿಪಿ ಎಫ್-1 ರೇಸ್ ನಲ್ಲಿ ರೆಡ್ ಬುಲ್ ತಂಡದ ಚಾಲಕ ಮ್ಯಾಕ್ಸ್ ವರ್ಸ್ಟಪ್ಪೆನ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದಾರೆ.
ಫೈನಲ್ ನಲ್ಲಿ ನಡೆದ 44 ಲ್ಯಾಪ್ ಗಳ ರೇಸ್ ನಲ್ಲಿ ಮ್ಯಾಕ್ಸ್ ವರ್ಸ್ಟಪ್ಪೆನ್ ಅಮೋಘ ಚಾಲನೆಯ ಕೌಶಲ್ಯಗಳನ್ನು ಮೆರೆದರು. ಪರಿಣಾಮ ಇವರು ತಮ್ಮ ಸಮೀಪದ ಪ್ರತಿ ಸ್ಪರ್ಧಿ ರೆಡ್ ಬುಲ್ ಕಾರು ಚಾಲಕ ಸೆರ್ಗಿಯೋ ಪೆರೆಜ್ ಅವರಿಗಿಂತ 17.84 ಸೆಕೆಂಡ್ ಗಳಿಗಿಂತಲೂ ಮುನ್ನ ಮ್ಯಾಕ್ಸ್ ವರ್ಸ್ಟಪ್ಪೆನ್ ಗುರಿ ತಲುಪಿದರು. ಈ ಟೂರ್ನಿಯ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ ಮ್ಯಾಕ್ಸ್ ವರ್ಸ್ಟಪ್ಪೆನ್ 26 ಅಂಕವನ್ನು ತಮ್ಮ ಬುಟ್ಟೆಗೆ ಹಾಕಿಕೊಂಡರು.
ರೆಡ್ ಬುಲ್ ಕಾರು ಚಾಲಕ ಸೆರ್ಗಿಯೋ ಪೆರೆಜ್ ಎರಡನೇ ಸ್ಥಾನ ಪಡೆದು 18 ಅಂಕ ಗಳನ್ನು ಪಡೆದರು. ಇನ್ನು ಮೂರನೇ ಸ್ಥಾನವನ್ನು ಪಡೆದ ಫೆರಾರೆ ತಂಡದ ಕಾರ್ಲೋಸ್ ಸೈನ್ಜ್ ಮೊದಲ ಸ್ಥಾನ ಪಡೆದ ಚಾಲಕನಿಗಿಂತಲೂ 26.886 ಸೆಕೆಂಡ್ ತಡವಾಗಿ ಗುರಿ ಮುಟ್ಟಿದರು.
Formula 1, Max Verstappen, Belgian GP,