ಭಾರತ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ಅರುಣ್ ಲಾಲ್ ಸೋಮವಾರ ತಮಗಿಂತ 28 ವರ್ಷ ಕಿರಿಯ ಬುಲ್ ಬುಲ್ ಸಹಾ ಅವರನ್ನು ವಿವಾಹವಾದರು. ಕಳೆದ ತಿಂಗಳು ಇವರಿಬ್ಬರ ನಿಶ್ಚಿತಾರ್ಥ ನಡೆದಿತ್ತು.
66 ವರ್ಷದ ಅರುಣ್ ಲಾಲ್ ಅವರಿಗೆ ಇದು ಎರಡನೇ ಮದುವೆ. ಕೋಲ್ಕತ್ತಾದ ಹೋಟೆಲ್ ಒಂದರಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಇಬ್ಬರೂ ಪರಸ್ಪರ ಮದುವೆ ಆದರು. ಇಬ್ಬರ ಮದುವೆಯ ಫೋಟೋಗಳು ಅಂತರ್ಜಾಲಲ್ಲಿ ವೈರಲ್ ಆಗುತ್ತಿವೆ. ಮದುವೆಯ ನಂತರ, ಇಬ್ಬರೂ ಒಟ್ಟಿಗೆ ಕೇಕ್ ಕತ್ತರಿಸಿದರು ಮತ್ತು ಇಬ್ಬರೂ ತುಂಬಾ ಸಂತೋಷವಾಗಿದ್ದರು.

ಬುಲ್‌ಬಲ್ ವೃತ್ತಿಯಲ್ಲಿ ಶಾಲಾ ಶಿಕ್ಷಕಿ. ಅರುಣ್ ಲಾಲ್ ಮೊದಲ ಪತ್ನಿಯಿಂದ ವಿಚ್ಛೇದನ ಪಡೆದಿದ್ದಾರೆ. ಮೊದಲ ಪತ್ನಿಯ ಒಪ್ಪಿಗೆ ಮೇರೆಗೆ ಎರಡನೇ ಮದುವೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಅರುಣ್ ಮತ್ತು ಬುಲ್‌ಬಲ್ ಪರಸ್ಪರ ಬಹಳ ಹಿಂದಿನಿಂದಲೂ ಪರಿಚಿತರು.

ಅರುಣ್ ಲಾಲ್ ಭಾರತದ ಪರ 16 ಟೆಸ್ಟ್ ಪಂದ್ಯಗಳನ್ನು ಆಡಿದ್ದರು 729 ರನ್ ಗಳಿಸಿದ್ದಾರೆ. ಅವರು 13 ODIಗಳನ್ನು ಆಡಿದ್ದು, 122 ರನ್ ಗಳಿಸಿದ್ದಾರೆ. ಅರುಣ್ ಲಾಲ್ 1982 ರಲ್ಲಿ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದರು. ಕೊನೆಯದಾಗಿ 1989 ರಲ್ಲಿ ಆಡಿದ್ದರು.
ಅರುಣ್ ಲಾಲ್ ಟೆಸ್ಟ್ ಅಥವಾ ಏಕದಿನದಲ್ಲಿ ಒಂದೇ ಒಂದು ಶತಕವನ್ನು ಗಳಿಸಿಲ್ಲ. ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 6 ಅರ್ಧಶತಕಗಳನ್ನು ಗಳಿಸಿದ್ದು, ಅವರ ಅತ್ಯುತ್ತಮ ಸ್ಕೋರ್ 93 ರನ್ ಆಗಿದೆ.