ಫಿಫಾ ಫುಟ್ಬಾಲ್ ವಿಶ್ವಕಪ್ ಆರಂಭಕ್ಕೆ ಒಂದು ದಿನ ಬಾಕಿ ಇದೆ. ಭಾನುವಾರ
ಫುಟ್ಬಾಲ್ ಹಬ್ಬಕ್ಕೆ ಅಧಿಕೃತ ಚಾಲನೆ ಸಿಗಲಿದೆ.
ಟೂರ್ನಿಯಲ್ಲಿ ಭಾಗವಹಿಸಲು 32 ತಂಡಗಳು ಕಾತರ್ಗೆ ಬಂದಿಳಿದಿವೆ. ಲಿಯೊನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟಿನಾ ತಂಡ ಫೈವ್ ಸ್ಟಾರ್ ಹೋಟೇಲ್ ಬದಲು ದೋಹಾದಲ್ಲಿರುವ ಕತಾರ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ನಿಲಯದಲ್ಲಿ ವಾಸ್ತವ್ಯ ಹೂಡಿದೆ.
ಅರ್ಜೆಂಟಿನಾ ತಂಡ ಆಯೋಜಕರಿಗೆ ಒಂದು ಷರತ್ತು ಹಾಕಿತ್ತು. ಅರ್ಜೆಂಟಿನಾದ ಖ್ಯಾತ ಅಸಾಡೊಸ್ ಎನ್ನುವ ಖಾದ್ಯ ಸವಿಯುವುದಕ್ಕಾಗಿ ಈ ವ್ಯವಸ್ಥೆ ಮಾಡಿಕೊಂಡಿದೆ.
ಬಾರ್ಬೆಕ್ಯೂಮೇಲೆ ಮಾಂಸವನ್ನಿರಿಸಿ ಅದನ್ನು ಸುಟ್ಟು ಅದರ ಮೇಲೆ ಉಪ್ಪು ಸವರಿ ತರಕಾರಿ ಹಾಗೂ ವೈನ್ ಜೋತೆ ಸೇವಿಸಲಾಗುತ್ತದೆ. ಆಟಗಾರರಿಗಾಗಿಯೇ ವಿಶ್ವವಿದ್ಯಾನಿಲಯದ ಕ್ಯಾಂಪಸ್ನಲ್ಲಿ ಬಾರ್ಬೆಕ್ಯೂ ಅಳವಡಿಸಲಾಗಿದೆ.
ಅರ್ಜೆಂಟಿನಾ ಮತ್ತು ಉರುಗ್ವೆ ತಂಡಗಳು ಕತಾರ್ಗೆ ಬರುವಾಗ 900 ಕೆಜಿ ತೂಕದ ಮಾಂಸ ಹೊತ್ತು ಬಂದಿವೆ.ಆಟಗಾರರ ಆಹಾ ಪದ್ಧತಿಗೆ ಆ ದೇಶಗಳ ಫುಟ್ಬಾಲ್ ಸಂಸ್ಥೆಗಳು ವಿಶೇಷ ಕಾಳಜಿ ವಹಿಸಿವೆ.
ಇನ್ನು ಪೋಲೆಂಡ್ ತಂಡ ಕಾತರ್ಗೆ ಬರುವಾಗ ಎಫ್ 16 ಫೈಟರ್ ಜೆಟ್ಗಳ ರಕ್ಷಣೆ ಪಡೆದಿದ್ದವು. ವಿಮಾನ ಜೆಟ್ಗಳು ವಾಯು ಸೀಮೆ ದಾಟುವ ವರೆಗೂ ಭದ್ರತೆ ನೀಡಲಾಗಿತ್ತು.
ಇತ್ತಿಚೆಗೆ ಉಕ್ರೇನ್ ರಷ್ಯಾ ಮೇಲೆ ಹಾರಿಸಿದ ಕ್ಷಿಪಣಿ ನೇರವಾಗಿ ಪೋಲೆಂಡ್ನ ಹಳ್ಳಿಯೊಂದರ ಮೇಲೆ ಬಿದ್ದು ಇಬ್ಬರನ್ನು ಬಲಿ ತೆಗೆದುಕೊಂಡಿತ್ತು. ಈ ಕಾರಣಕ್ಕಾಗಿ ತನ್ನ ಆಟಗಾರರಿಗೆ ಭದ್ರತೆ ನೀಡುವ ಸಲುವಾಗಿ ಪೋಲೆಂಡ್ ಸರ್ಕಾರ ಈ ಕ್ರಮ ಕೈಗೊಂಡಿತು.