ಎಂಟು ಅದ್ಭುತ ಕ್ರೀಡಾಂಗಣಗಳು ಸಜ್ಜು ಫುಟ್ಬಾಲ್ ವಿಶ್ವಕಪ್ ಗಲ್ಫ್ ರಾಷ್ಟ್ರದಲ್ಲಿ ನಡೆಯಲಿದೆ. ಆತಿಥ್ಯ ವಹಿಸಿರುವ ಕತಾರ್ ವಿಶ್ವಕಪ್ಗೆ ತಯಾರಿ ನಡೆಸಿದ ರೀತಿ ಯಾರೂ ಊಹಿಸಲು ಸಾಧ್ಯವಿಲ್ಲ. ಕ್ರೀಡಾಂಗಣವನ್ನು ಮರು ನಿರ್ಮಿಸಿ ಎಲ್ಲರನ್ನೂ ಬೆರಗುಗೊಳಿಸಿದೆ.
974 ದೋಹಾದ ವಿಶಿಷ್ಟ ಕ್ರೀಡಾಂಗಣ
ಕತಾರ್ನ ರಾಜಧಾನಿ ದೋಹಾದಲ್ಲಿ 974 ಕಂಟೈನರ್ಗಳನ್ನು ಬಳಸಿ ಫುಟ್ಬಾಲ್ ಕ್ರೀಡಾಂಗಣವನ್ನು ನಿರ್ಮಿಸಲಾಗಿದೆ.ಕ್ರೀಡಾಂಗಣಕ್ಕೆ 974 ಎಂದು ಹೆಸರಿಡಲಾಗಿದೆ. ಇದು ಕತಾರ್ ದೇಶದ ಅಂತಾರಾಷ್ಟ್ರೀಯ ಡಯಲಿಂಗ್ ಕೋಡ್ ಕೂಡ ಹೌದು. ವಿಶ್ವಕಪ್ ವೀಕ್ಷಿಸಲು ಕತಾರ್ಗೆ ಬರುವ ಅಭಿಮಾನಿಗಳಿಗೆ ಮೊದಲು ಕಾಣುವ ಕ್ರೀಡಾಂಗಣ ಇದಾಗಿದೆ. ಈ ಕ್ರೀಡಾಂಗಣದಲ್ಲಿ 40 ಸಾವಿರ ಮಂದಿ ಪಂದ್ಯ ವೀಕ್ಷಿಸಬಹುದಾಗಿದ್ದು 7 ಪಂದ್ಯಗಳು ನಡೆಯಲಿವೆ.
ಲುಸೈಲ್ ಕ್ರೀಡಾಂಗಣ
ಈ ವಿಶ್ವಕಪ್ನ ಅತಿ ದೊಡ್ಡ ಕ್ರೀಡಾಂಗಣ. ಫೈನಲ್ ಪಂದ್ಯ ಇದೇ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಕ್ರೀಡಾಂಗಣ ಅರಬ್ ದೇಶಗಳಲ್ಲಿ ಜನಪ್ರಿಯವಾಗಿರುವ ಕೈಯಲ್ಲಿ ತಯಾರಿಸಿದ ಬಟ್ಟಲಿನ ಆಕಾರವನ್ನು ಹೋಲುತ್ತದೆ.80 ಸಾವಿರ ಮಂದಿಗೆ ಆಸನದ ಸಾಮರ್ಥ್ಯ ಹೊಂದಿದೆ.
ಅಲ್ ಬೇತ್ನಲ್ಲಿ ಉದ್ಘಾಟನಾ ಪಂದ್ಯ
ಅಲ್ ಖೋರ್ನ ಅಲ್ ಬೇತ್ ಕ್ರೀಡಾಂಗಣದಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದೆ. ಈ ಕ್ರೀಡಾಂಗಣದಲ್ಲಿ 60 ಸಾವಿರ ಮಂದಿ ಪಂದ್ಯವನ್ನು ವೀಕ್ಷಿಸಬಹುದಾಗಿದೆ.ಈ ಮೈದಾನದಲ್ಲಿ 9 ಪಂದ್ಯಗಳು ನಡೆಯಲಿದೆ.
ಅಹ್ಮದ್ ಬಿನ್ ಅಲಿ ಕ್ರೀಡಾಂಗಣ
ಮರು ಭೂಮಿಯ ಎತ್ತರದ ಜಾಗದಲ್ಲಿರುವ ನೂತನ ಕ್ರೀಡಾಂಗಣ. ಹಳೆ ಕ್ರೀಡಾಂಗಣವನ್ನು ನೆಲಸಮಗೊಳಿಸಿ ಹೊಸ ಕ್ರೀಡಾಂಗಣವನ್ನು ಕಟ್ಟಲಾಗಿದೆ. ಇದೊಂದು ಮುಕ್ತ ಮೈದಾನವಾಗಿದ್ದು ಎಸಿ ಅಳವಡಿಸಲಾಗಿದೆ. ಪಂದ್ಯ ನಡೆಯುವಾಗ 26 ಡಿಗ್ರಿ ತಾಪಮಾನ ಕಾಯ್ದುಕೊಳ್ಳಲಾಗಿದೆ. ಈ ಕ್ರೀಡಾಂಗಣದಲ್ಲಿ 44,740 ಆಸನ ವ್ಯವಸ್ಥೆ ಇದೆ. ಇಲ್ಲಿ 7 ಪಂದ್ಯಗಳು ನಡೆಯಲಿದೆ.
ಅಲ್ ಜನೌಬ್ ಕ್ರೀಡಾಂಗಣ
ಅಲ್ ವಕ್ರಾದ ಅಲ್ ಬೇತ್ನ ಮೈದಾನ ನೋಡಲು ಸಾಂಪ್ರದಾಯಿಕ ` ದೋಣಿಗಳಂತೆ ಇವೆ. ಕ್ರೀಡಾಂಗಣಕ್ಕೆ ಎಸಿ ವ್ಯವಸ್ಥೆ ಇದೆ. ಇಲ್ಲಿ 40 ಸಾವಿರ ಮಂದಿ ಪಂದ್ಯವನ್ನು ವೀಕ್ಷಿಸಬಹುದಾಗಿದೆ. ಇಲ್ಲಿ ಒಟ್ಟು 7 ಪಂದ್ಯಗಳು ನಡೆಯಲಿವೆ.
ಎಜುಕೇಶನ್ ಸಿಟಿ ಕ್ರೀಡಾಂಗಣ ಅಲ್ ರಯ್ಯನ್
ವಿಶ್ವವಿದ್ಯಾಲಯಗಳು ಇರುವ ಕಾರಣಕ್ಕೆ ಎಜುಕೇಶನ್ ಸಿಟಿ ಕ್ರೀಡಾಂಗಣ ಅಲ್ ರಯ್ಯನ್ ಎಂದು ಹೆಸರಡಲಾಗಿದೆ. ಕ್ರೀಡಾಂಗಣದಲ್ಲಿ ಡಿಜಿಟೈಲ್ ಲೈಟ್ ಶೋ ವ್ಯವಸ್ಥೆ ಮಾಡಲಾಗಿದೆ. 45, 350 ಆಸನ ಸಾಮಥ್ರ್ಯ ಇದ್ದು 8 ಪಂದ್ಯಗಳು ನಡೆಯಲಿವೆ.
ಅಲ್ ಥುಮಾಮ, ದೋಹಾ
ಅಂತಾರಾಷ್ಟ್ರಿಯ ಸಮೀಪದಲ್ಲಿ ಅಲ್ ಥುಮಾಮ ಕ್ರೀಡಾಂಗಣವಿದೆ. ವಿಶ್ವಕಪ್ ಹಿನ್ನೆಲೆಯಲ್ಲಿ 40 ಸಾವಿರ ಆಸನವನ್ನು 20 ಸಾವಿರಕ್ಕೆ ಇಳಿಸಲಾಗಿದೆ. ಹೆಚ್ಚುವರಿ ಆಸನಗಳನ್ನು ಬಡ ರಾಷ್ಟ್ರಗಳಿಗೆ ನೀಡಲಾಗಿದೆ. ಈ ಕ್ರೀಡಾಂಗಣದಲ್ಲಿ ಒಟ್ಟು 8 ಪಂದ್ಯಗಳು ನಡೆಯಲಿವೆ.
ಖಲೀಲ್ ಕ್ರೀಡಾಂಗಣ , ಅಲ್ ರಯ್ಯನ್
ಕತರ್ನ ಹಳೆಯ ಕ್ರೀಡಾಂಗಣಗಳ ಪೈಕಿ ಖಲೀಫ್ ಕ್ರೀಡಾಂಗಣ ಕೂಡ ಒಂದು. 2006ರಲ್ಲಿ ಏಷ್ಯನ್ ಗೇಮ್ಸ್ ನಡೆದಿತ್ತು. ವಿಶ್ವಕಪ್ಗಾಗಿ 10450 ಆಸನಗಳ ವ್ಯವಸ್ಥೆ ಮಾಡಲಾಗಿದೆ. 45,416 ಆಸನ ವ್ಯವಸ್ಥೆ ಇದ್ದು 8 ಪಂದ್ಯಗಳು ನಡೆಯಲಿವೆ.