ಫಿಫಾ ವಿಶ್ವಕಪ್‍ನಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡ ಇರಾನ್ ತಂಡವನ್ನು ಇಂದು ಇಲ್ಲಿನ ಖಲೀಲ್ ಮೈದಾನದಲ್ಲಿ ಎದುರಿಸಲಿದೆ.
ಈ ಬಾರಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಇಂಗ್ಲೆಂಡ್ ತಂಡ ಕೂಡ ಒಂದಾಗಿದೆ. ಕಳೆದ ವಿಶ್ವಕಪ್‍ನಲ್ಲಿ ಸೆಮಿಫೈನಲ್ ಪ್ರವೇಶಿಸಿತ್ತು.
ಇಂದಿನ ಪಂದ್ಯದಲ್ಲಿ ಇಂಗ್ಲೆಂಡ್ ಗೆಲ್ಲುವ ನೆಚ್ಚಿನ ತಂಡವಾಗಿದೆ.ಇಂಗ್ಲೆಂಡ್ ತಂಡದಲ್ಲಿ ಹ್ಯಾರಿ ಕೇನ್ ತಾರಾ ಆಟಗಾರರಾಗಿದ್ದಾರೆ.
ಇರಾನ್ ತಂಡದಲ್ಲಿ ಮೆಹಿದಿ ತಾರೆಮಿ ತಾರಾ ಆಟಗಾರರಾಗಿದ್ದಾರೆ. ಫಿಫಾ ರಾಂಕಿಂಗ್‍ನಲ್ಲಿ ಇಂಗ್ಲೆಂಡ್ 5ನೇ ಸ್ಥಾನ ಪಡೆದರೆ ಇರಾನ್ 20ನೇ ಶ್ರೇಯಾಂಕ ಹೊಂದಿದೆ.
ನೆದರ್‍ಲೆಂಡ್‍ಗೆ ಸೆನಗಲ್ ಸವಾಲು
ಮತ್ತೊಂದು ಪಂದ್ಯದಲ್ಲಿ ನೆದರ್‍ಲೆಂಡ್ಸ್ ತಂಡ ಸೆನಗಲ್ ತಂಡವನ್ನು ಎದುರಿಸಲಿದೆ. ಸೆನಗಲ್ ತಂಡ ಅರ್ಹತಾ ಸುತ್ತಿನಲ್ಲಿ ಗೆದ್ದು ವಿಶ್ವಕಪ್ ಪ್ರವೇಶಿಸಿದೆ. ಮೂರನೆ ಬಾರಿ ಸೆನಗಲ್ ತಂಡ ವಿಶ್ವಕಪ್ ಪ್ರವೇಶಿಸಿದದೆ.
2002ರಲ್ಲಿ ಕ್ವಾರ್ಟರ್ ಫೈನಲ್‍ವರೆಗೂ ಬಂದಿತ್ತು.ಸಾಡಿಯೊ ಮಾನೆ ತಂಡದ ತಾರಾ ಆಟಗಾರಾಗಿದ್ದಾರೆ. ಕಳೆದ ಬಾರಿ ಗ್ರೂಪ್ ಹಂತದವರೆಗೂ ಬರುವಲ್ಲಿ ವಿಫಲವಾಗಿತ್ತು. ಇನ್ನು ನೆದರ್‍ಲೆಂಡ್ ತಂಡ ಅರ್ಹತಾ ಸುತ್ತಿನಲ್ಲಿ ಒಂದೂ ಪಂದ್ಯವನ್ನು ಮಾತ್ರ ಕೈಚೆಲ್ಲಿ ಅಗ್ರಸ್ಥಾನ ಪಡೆದಿದೆ.
ಹನ್ನೊಂದನೆ ವಿಶ್ವಕಪ್ ಆಡುತ್ತಿರುವ ನೆದರ್‍ಲೆಂಡ್ 1974, 1978 ಮತ್ತು 2010ರಲ್ಲಿ ರನ್ನರ್‍ಅಪ್ ಆಗಿತ್ತು.