ಫಿಫಾ ಫುಟ್ಬಾಲ್ ವಿಶ್ವಕಪ್ನ ಉದ್ಘಾಟನಾ ಪಂದ್ಯದಲ್ಲಿ ಇಕ್ವೆಡರ್ ತಂಡ ಆತಿಥೇಯ ಕತಾರ್ ತಂಡವನ್ನು 2-0 ಗೋಲುಗಳಿಂದ ಸೋಲಿಸಿದೆ.
ಈ ಮೂಲಕ 92 ವರ್ಷಗಳ ಇತಿಹಾಸದಲ್ಲೆ ಆತಿಥೇಯ ತಂಡ ಮೊದಲ ಪಂದ್ಯದಲ್ಲೆ ಸೋಲು ಕಂಡ ತಂಡವೆಂಬ ಕೆಟ್ಟ ದಾಖಲೆಗೆ ಪಾತ್ರವಾಗಿದೆ
ಅಲಖೋರ್ನಲ್ಲಿ ಭಾನುವಾರ ನಡೆದ ಮೊದಲ ಪಂದ್ಯದಲ್ಲಿ ಇಕ್ವಡರ್ ತಂಡದ ಎನ್ನೆರ್ ವೆಲೆನಿಕಾ 2 ಗೋಲುಗಳನ್ನು ಹೊಡೆದು ತಂಡಕ್ಕೆ ಭರ್ಜರಿ ಗೋಲು ತಂದುಕೊಟ್ಟರು.
ಎನ್ನೆರ್ ವೆಲೆನಿಕಾ ಮೊದಲ ಗೋಲನ್ನು ಆಫ್ ಸೈಡ್ನಿಂದ ಹೊಡೆದರು.
ಇಲ್ಲಿಗೆ ಸುಮ್ಮನಿರದ ವೆಲೆನಿಕಾ ಮತ್ತೊಂದು ಗೋಲು ಹೊಡದರು.
ನಂತರ ಇಕ್ವಡರ್ ತಂಡದ ಆಟಗಾರರು ಗೆಲುವನ್ನು ಸಂಭ್ರಮಿಸಿದರು. ಆತಿಥೇಯ ಕತಾರ್ ಮೈದಾನದಲ್ಲಿ ಸೋತರೂ ಹೊರಗೆ ಪ್ರೇಕ್ಷಕರ ಮನ ಗೆದ್ದಿತ್ತು.
ತವರು ಅಭಿಮಾನಿಗಳು ತಂಡದ ಮೇಲೆ ಇನ್ನಿಲ್ಲದ ಪ್ರೀತಿ ತೋರಿಸಿದರು. ತಂಡ ಸೋತರೂ ಚೆನ್ನಾಗಿ ಆಡುವಂತೆ ಶುಭ ಕೋರಿದರು.