ಪ್ರತಿಷ್ಠಿತ ಫಿಫಾ ಅಂಡರ್ 17 ಬಾಲಕಿಯರ ವಿಶ್ವಕಪ್ ಫುಟ್ಬಾಲ್ ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ.
ಮುಂದಿನ ವಾರ ಆರಂಭವಾಗಲಿರುವ ಪ್ರತಿಷ್ಠಿತ ಟೂರ್ನಿಗೆ ಮುಖ್ಯ ಕೋಚ್ ಥಾಮಸ್ ಡೆನ್ನರ್ಬೈ ನೇತೃತ್ವದಲ್ಲಿ 21 ಆಟಗಾರ್ತಿಯರ ತಂಡವನ್ನು ಪ್ರಕಟಿಸಲಾಗಿದೆ.
ಎ ಗುಂಪಿನಲ್ಲಿ ಸ್ಥಾನ ಪಡೆದಿರುವ ಭಾರತ ಯುಎಸ್, ಮೊರೊಕೊ ಮತ್ತು ಬ್ರೇಜಿಲ್ ವಿರುದ್ಧ ಸೆಣಸಲಿದೆ.
ಭಾರತ ಹೊಸ ಸವಾಲನ್ನು ಎದುರಿಸುತ್ತಿದೆ. ಈ ಹಿಂದೆ ಭಾರತ ವಿಶ್ವಕಪ್ ಆಡಿರಲಿಲ್ಲ.
ಭಾರತ ಮಹಿಳಾ ತಂಡ
ಗೋಲ್ ಕೀಪರ್ಗಳು: ಮೊನಾಲಿಶಾ ದೇವಿ ಮೊಯಿರಾಂಗಥೆಮ್, ಮೆಲೊಡಿ ಚಾನು ಕೀಶಾಮ್, ಅಂಜಲಿ ಮುಂಡಾ.
ಡಿಫೆಂಡರ್ಸ್: ಅಸ್ತಾಮ ಒರಾನ್, ಕಾಜಲ್, ನಾಕೆತಾ, ಪೂರ್ಣಿಮಾ ಕುಮಾರಿ, ವರ್ಷಿಕಾ, ಶಿಲ್ಕಿ ದೇವಿ ಹೆಮಾಮ್.
ಮಿಡ್ ಫೀಲ್ಡರ್ಸ್:
ಬಬಿನಾ ದೇವಿ ಲಿಶಾಮ್, ನೀತು ಲಿಂಡಾ, ಶೈಲಜಾ, ಶುಭಾಂಗಿ ಸಿಂಗ್.
ಫಾರ್ವಡ್ಸ್: ಅನಿತಾ ಕುಮಾರಿ, ಲಿಂಡಾಕೊಮ್ ಸೆರ್ಟೊ, ನೇಹ, ರೆಜಿಯಾ ದೇವಿ ಲಾಯಿಶ್ರಾಮ್, ಶೆಲಿಯಾ ದೇವಿ ಲೊಕ್ತಾಂಗ್ಬಾಮ್, ಕಾಜೊಲ್ ಹಬರ್ಟ್ ಡಿಸೋಜಾ, ಲಾವಣ್ಯ ಉಪಧ್ಯಾಯ, ಸುಧಾ ಅಂಕಿಥಾ ಟಿರ್ಕೆ.
ಭಾರತದ ವೇಳಾ ಪಟ್ಟಿ
ಅ.11: ಭಾರತ-ಯುಎಸ್ಎ ಕಳಿಂಗಾ ಕ್ರೀಡಾಂಗಣ ಭುವನೇಶ್ವರ
ಅ.14:ಭಾರತ- ಮೊರಾಕೊ, ಕಳಿಂಗಾ ಕ್ರೀಡಾಂಗಣ ಭುವನೇಶ್ವರ
ಅ.17: ಬ್ರೇಜಿಲ್ –ಭಾರತ, ಕಳಿಂಗಾ ಕ್ರೀಡಾಂಗಣ ಭುವನೇಶ್ವರ