ಫಿಫಾ ವಿಶ್ವಕಪ್ನಲ್ಲಿ ಇಂದು ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಮೊರಾಕ್ಕೊ ಎದುರಿಸಲಿದೆ.
ಈ ಬಾರಿ ಬಲಿಷ್ಠ ತಂಡಗಳಿಗೆ ಸೋಲಿನ ರುಚಿ ತೋರಿಸಿದ್ದ ಮೊರಾಕ್ಕೊ ಮತ್ತೊಂದು ಅಚ್ಚರಿ ಫಲಿತಾಂಶ ನೀಡಲು ಸಜ್ಜಾಗಿದೆ. ಆದರೆ ಟೂರ್ನಿವುದಕ್ಕೂ ಅಧ್ಬುತ ಪ್ರದರ್ಶನ ನೀಡಿರುವ ಫ್ರಾನ್ಸ್ ಮೊರಾಕ್ಕೊ ಸವಾಲನ್ನು ಹೇಗೆ ಎದುರಿಸುತ್ತಿದೆ ಅನ್ನೋದನ್ನು ಕಾದು ನೋಡಬೇಕಿದೆ.
ಮೊರಾಕ್ಕೊ ಗೆಲುವಿನ ಓಟಕ್ಕೆ ಬ್ರೇಕ್ ಹಾಕುತ್ತಾ ಅನ್ನೋದಕ್ಕೆ ಇಂದು ಉತ್ತರ ಸಿಗಲಿದೆ.
ಮೊರಾಕ್ಕೊ ತಂಡ ಮೊದಲ ಬಾರಿ ಸೆಮಿಫೈನಲ್ ಪ್ರವೇಶಿಸಿದ್ದು ಮತ್ತೊಂದು ಇತಿಹಾಸ ಸೃಷ್ಟಿಸಲು ಕಾತರವಾಗಿದೆ.
ಗುಂಪು ಹಂತದಲ್ಲಿ ಬೆಲ್ಜಿಯಂ ವಿರುದ್ಧ ಅಚ್ಚರಿಯ ಗೆಲುವು ಪಡೆದಿದ್ದ ಮೊರಾಕ್ಕೊ ತಂಡ ನಂತರ ಪ್ರಿ ಕ್ವಾರ್ಟರ್ನಲ್ಲಿ ಸ್ಪೇನ್ಗೆ ಸೋಲಿನ ರುಚಿ ತೋರಿಸಿತ್ತು. ಕ್ವಾರ್ಟರ್ ಫೈನಲ್ ನಲ್ಲಿ ಪೋರ್ಚುಗಲ್ ತಂಡವನ್ನು ಸೋಲಿಸಿ ಟೂರ್ನಿಯಿಂದಲೇ ಹೊರ ಹಾಕಿತ್ತು.
ಮತ್ತೊಂದು ವಿಶೇಷವೆಂದರೆ ಮೊರಾಕ್ಕೊ ತಂಡ ಕಳೆದ 5 ಪಂದ್ಯಗಳಿಂದ ಎದುರಾಳಿ ತಂಡಗಳಿಗೆ ಒಂದೇ ಒಂದೂ ಗೋಲು ಹೊಡೆಯಲು ಅವಕಾಶ ಕೊಟ್ಟಿಲ್ಲ. ಕೆನಡಾ ವಿರುದ್ಧ ಒಂದು ಗೋಲು ಬಿಟ್ಟುಕೊಟ್ಟಿದ್ದು ಅದು ಮೊರಾಕ್ಕೊ ತಂಡದ ನಾಯೆಫ್ ಹೊಡೆದಿದ್ದರು.
ಮೊರಾಕ್ಕೊ ತಂಡಕ್ಕೆ ಗೋಲ್ ಕೀಪರ್ ಯಾಸಿನ್ ಬೋನೊ ಗೋಲು ತಂಡದ ತಡೆಗೋಡೆಯಾಗಿದ್ದಾರೆ.
ಇನ್ನು ಸತತ 2ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಫ್ರಾನ್ಸ್ ತಂಡ ಗುಂಪು ಹಂತದಲ್ಲಿ ಟ್ಯುನೀಶಿಯಾ ವಿರುದ್ಧ ಸೋತಿತ್ತು. ಪ್ರಿ ಕ್ವಾರ್ಟರ್ ನಲ್ಲಿ ಪೋಲೆಂಡ್ ವಿರುದ್ಧ ಜಯಿಸಿತ್ತು. ಕ್ವಾರ್ಟರ್ ನಲ್ಲಿ ಇಂಗ್ಲೆಂಡ್ ವಿರುದ್ಧ ಗೆದ್ದು ಸೆಮಿ ಪ್ರವೇಶಿಸಿತ್ತು.
ಫ್ರಾನ್ಸ್ ಈ ಹಿಂದೆ 1958,1982, 1986ರಲ್ಲಿ ಸೆಮಿಫೈನಲ್ನಲ್ಲಿ ಸೋಲು ಕಂಡಿತ್ತು